ಮಣಿಪಾಲ: ಮಣಿಪಾಲ ಮಾಹೆ ವಿ.ವಿ.ಯ ಅನಾಟಮಿ ಪ್ರಾಧ್ಯಾಪಕ ಡಾ| ಸತೀಶ ನಾಯಕ್ ಆಲಂಬಿಯವರು ಬೆಳೆದ ಅತೀ ಎತ್ತರದ ಮರಗೆಣಸಿನ ಗಿಡವು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ 2023ರ ಆವೃತ್ತಿಯಲ್ಲಿ ದಾಖಲಾಗಿದೆ.
ಮರಗೆಣಸಿನ ಗಿಡವು ಸಾಮಾನ್ಯವಾಗಿ 10ರಿಂದ 20 ಅಡಿ ಬೆಳೆಯುವ ಗಿಡವಾಗಿದ್ದು, ಲಭ್ಯ ದಾಖಲೆಗಳ ಪ್ರಕಾರ ಇದುವರೆಗಿನ ಅತೀ ಎತ್ತರದ ಮರಗೆಣಸಿನ ಗಿಡವು 45 ಅಡಿ ಎತ್ತರವಿದ್ದು ಕೇರಳದ ರೈತರೊಬ್ಬರ ಹೆಸರಿನಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿತ್ತು.
ಡಾ| ಸತೀಶ್ ಅವರು ಬೆಳೆದ ಗಿಡವು 2022ರ ಜನವರಿಯಲ್ಲಿ ಅಳೆದಾಗ 55 ಅಡಿ 10 ಇಂಚಿನಷ್ಟು ಎತ್ತರವಿತ್ತು. ಈ ಗಿಡವು ಈಗಲೂ ಬೆಳೆಯುತ್ತಿದ್ದು ಸುಮಾರು 65 ಅಡಿಗಳಷ್ಟು ಎತ್ತರಕ್ಕೆ ಬೆಳೆದಿದೆ.