Advertisement

ಸದ್ಯದಲ್ಲೇ ಸಿದ್ಧವಾಗಲಿದೆ ವಿಶ್ವದಾಖಲೆ ಸೇತುವೆ

08:15 AM Jun 08, 2018 | Karthik A |

ಈಶಾನ್ಯ ರಾಜ್ಯಗಳಿಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ವದ ಜಿರಿಬಮ್‌ – ತುಪುಲ್‌- ಇಂಫಾಲ್‌ ರೈಲ್ವೆ ಮಾರ್ಗದ ಕಾಮಗಾರಿ ತ್ವರಿತವಾಗಿ ಸಾಗುತ್ತಿದೆ. ಈ ಮಾರ್ಗದ 164ನೇ ಸಂಖ್ಯೆಯ ಸೇತುವೆ ವಿಶೇಷವಾಗಿದ್ದು, ನಿರ್ಮಾಣವಾದ ಅನಂತರ, ವಿಶ್ವ ದಾಖಲೆ ಮಾಡಲಿದೆ. 

Advertisement

ಬ್ರಿಡ್ಜ್ ನಂ.164ರ ವಿಶೇಷ
1. ಗಿರ್ಡರ್‌ ಮಾದರಿ ಸೇತುವೆ. ಎತ್ತರ 462.5 ಅಡಿ.  456 ಅಡಿ ಎತ್ತರವಿರುವ ಯೂರೋಪ್‌ ನ ಮಾಲಾ ರಿಜೆಕಾ ವಿಯಾಡಕ್ಟ್ ಎಂಬ ಸೇತುವೆ ಸದ್ಯಕ್ಕೆ ವಿಶ್ವದ ಅತಿ ಎತ್ತರದ ಗಿರ್ಡರ್‌ ಮಾದರಿ ಸೇತುವೆ. ವಿಯಾ ಡಕ್ಟ್ ದಾಖಲೆ ಮುರಿಯಲಿರುವ ಬ್ರಿಡ್ಜ್ ನಂ. 164.

2. ಇಜಾಯ್‌ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ. ಅತಿ ಭೂಕಂಪ ಪೀಡಿತ, 6 ತಿಂಗಳು ಭಾರೀ ಮಳೆ ಬೀಳುವ ಪ್ರದೇಶದಲ್ಲಿ ನಿರ್ಮಾಣ. ಭಯೋತ್ಪಾದಕರಿಂದ ಭದ್ರತೆಗಾಗಿ ಸೇತುವೆಗೆ ಸಿಸಿ ಟಿವಿ. ನಿರ್ಮಾಣದ ಎಲ್ಲಾ ಕಚ್ಚಾವಸ್ತುಗಳ ಪರಿಶೀಲನೆಗಾಗಿ ನಿರ್ಮಾಣ ಸ್ಥಳದಲ್ಲೇ ವಿಶೇಷ ಲ್ಯಾಬ್‌. 

ಮಾರ್ಗದ ಒಟ್ಟು ಉದ್ದ : 111ಕಿ.ಮೀ.
164ನೇ ಸೇತುವೆ ಎತ್ತರ : 462.5 ಅಡಿ
ಮಾರ್ಗದ ಅಂದಾಜು ವೆಚ್ಚ : 13,800 ಕೋಟಿ ರೂ.
ಸೇತುವೆ ಅಂದಾಜು ವೆಚ್ಚ : 400 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next