Advertisement

ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ನಾಳೆ  ಲೋಕಾರ್ಪಣೆ

10:17 AM Feb 24, 2020 | mahesh |

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಪ್ರತಿಮೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್‌ ಇದೀಗ ಕ್ರಿಕೆಟ್‌ ಸ್ಟೇಡಿಯಂ ಮೂಲಕ ಮತ್ತೂಂದು ಮೈಲಿಗಲ್ಲಿನತ್ತ ಸಾಗಿದೆ. ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಮೊಟೆರಾದ ಸರ್ದಾರ್‌ ಪಟೇಲ್‌ ಕ್ರೀಡಾಂಗಣದ ಉದ್ಘಾಟನೆ ನಾಳೆ (ಫೆ. 24) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸಮ್ಮುಖದಲ್ಲಿ ನಡೆಯಲಿದೆ.

Advertisement

3 ಸಾವಿರ ಕಾರು ಪಾರ್ಕಿಂಗ್‌
10 ಸಾವಿರ ಬೈಕ್‌ ಪಾರ್ಕಿಂಗ್‌

ಅಂದು 49 ಸಾವಿರ ಆಸನ
ಇಂದು 1.10 ಲಕ್ಷ ಆಸನ

700 ಕೋಟಿ ರೂ.
2016ರ ಡಿಸೆಂಬರ್‌ನಿಂದ ಕಾಮ ಗಾರಿ ಆರಂಭಗೊಂಡು ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಎಲ್‌ ಆ್ಯಂಡ್‌ ಟಿ ಕಂಪೆನಿ ಗುತ್ತಿಗೆ ಪಡೆದು ಸ್ಟೇಡಿಯಂ ನಿರ್ಮಿಸಿದೆ.

1.10 ಗ್ಯಾಲರಿ
1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿ ಸುವ ಮೂಲಕ ವಿಶ್ವದ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಇರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

2 ನೇ ಮೈದಾನ
ಜಗತ್ತಿನ ಎರಡನೇ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 1.50 ಲಕ್ಷ ಆಸನಗಳಿರುವ ಉತ್ತರ ಕೊರಿಯಾದ ರುಂಗ್ರಾಡೊ ಮೆ ಡೆ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಹೊಂದಿದೆ.

64 ಎಕ್ರೆ ವಿಸ್ತೀರ್ಣ
64 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಸರ್ದಾರ್‌ ಪಟೇಲ್‌ ಸ್ಟೇಡಿಯಂನಲ್ಲಿ 76 ಕಾರ್ಪೊರೇಟ್‌ ಬಾಕ್ಸ್‌ ಗಳು, ನಾಲ್ಕು ಡ್ರೆಸ್ಸಿಂಗ್‌ ರೂಮ್‌ಗಳು ಮತ್ತು ಮೂರು ಅಭ್ಯಾಸ ಮೈದಾನಗಳಿವೆ.

3 ಪಿಚ್‌
ಕೆಂಪು ಮತ್ತು ಕಪ್ಪು ಮಣ್ಣು ಬಳಸಿ ಮೂರು ಮಾದರಿಯ ಪಿಚ್‌ಗಳನ್ನು ನಿರ್ಮಿಸಲಾಗಿದೆ. ಅವುಗಳ ಪೈಕಿ ಒಂದನ್ನು ಕಪ್ಪು ಮಣ್ಣಿನಿಂದ, ಒಂದು ಕೆಂಪು ಮಣ್ಣಿನಿಂದ ನಿರ್ಮಿಸಲಾಗಿದೆ. ಎರಡೂ ಮಣ್ಣುಗಳ ಮಿಶ್ರಣದಿಂದ ಮತ್ತೂಂದು ಪಿಚ್‌ ಸಿದ್ಧಪಡಿಸಲಾಗಿದೆ.

ಎಲ್‌ಇಡಿ ದೀಪಗಳು
ಸ್ಟೇಡಿಯಂನಲ್ಲಿ ಎಲ್‌ಇಡಿ ದೀಪಗಳನ್ನು ಬಳಸಲಾಗಿದೆ. ಮೊದಲ ಬಾರಿಗೆ ದೇಶದಲ್ಲಿ ಸ್ಟೇಡಿಯಂಗೆ ಎಲ…ಇಡಿ ದೀಪಗಳನ್ನು ಹಾಕಲಾಗಿದೆ. ಇದು 30 ಮೀಟರ್‌ ದೂರದ ವರೆಗಿನ ಪ್ರದೇಶಗಳನ್ನು ಕವರ್‌ ಮಾಡುವ ಸಾಮರ್ಥ್ಯ ಹೊಂದಿದೆ.

ಅತೀ ದೊಡ್ಡ 3 ಸ್ಟೇಡಿಯಂ
ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮೊಟೆರಾ (1.10 ಲಕ್ಷ ಆಸನ), ಮೆಲ್ಬೋರ್ನ್ ಕ್ರಿಕೆಟ್‌ ಸ್ಟೇಡಿಯಂ (1,00,024 ಆಸನ), ಈಡನ್‌ ಗಾರ್ಡನ್‌, ಕೊಲ್ಕತ್ತಾ (66,349 ಆಸನ)
ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌, ಛತ್ತೀಸ್‌ಗಢ್‌ (65,000 ಆಸನ).

ಸಬ್‌ ಏರ್‌ ಸಿಸ್ಟಂ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ವ್ಯವಸ್ಥೆಯಂತೆ ಸಬ್‌ ಏರ್‌ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ನಿಂತ ಅರ್ಧ ಗಂಟೆಗೆ ಮೈದಾನ ಒಣಗುತ್ತದೆ.

ಇಲ್ಲಿ ಏನೆಲ್ಲಾ ಇದೆ
ಈಜುಕೊಳ, ಸ್ಕ್ವಾಷ್‌ ಏರಿಯಾ ಹಾಗೂ ಟೇಬಲ್‌ ಟೆನಿಸ್‌ ಏರಿಯಾಗಳಿವೆ. 3 ಡಿ ಥಿಯೇಟರ್‌ ವ್ಯವಸ್ಥೆ ಮಾಡಲಾಗುತ್ತಿದೆ. 300 ಮೀ. ದೂರದಲ್ಲಿ ಮೆಟ್ರೋ ನಿಲ್ದಾಣ ಇದೆ.

ಅತೀ ದೊಡ್ಡ ಸ್ಟೇಡಿಯಂ
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್‌ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎಂಬ ಹೆಗ್ಗಳಿಕೆ ಇದೆ. ನಾಳೆಯಿಂದ ಮೊಟೆರಾದ ಸ್ಟೇಡಿಯಂ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ ಎಂಬ ಹೆಸರನ್ನು ತನ್ನದಾಗಿಸಿಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next