Advertisement

ಉಪಗ್ರಹ ಆಧರಿತ ಇಂಟರ್ನೆಟ್‌ ಸೌಲಭ್ಯ ಆರಂಭಿಸಿದ ಭಾರತೀಯ ಸೇನೆ

01:06 PM Sep 20, 2022 | Team Udayavani |

ನವದೆಹಲಿ: ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲ್ಪಡುವ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಭಾರತೀಯ ಸೇನೆಯು ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆಯನ್ನು ಆರಂಭಿಸಿದೆ.

Advertisement

ಸಿಯಾಚಿನ್‌ ಸಿಗ್ನಲರ್‌ಗಳು ಇದರ ಅಳವಡಿಕೆ ಕಾರ್ಯವನ್ನು ಭಾನುವಾರ ಪೂರ್ಣಗೊಳಿಸಿದ್ದು, ಇದರಿಂದಾಗಿ ಇನ್ನು ಮುಂದೆ ಸಮುದ್ರಮಟ್ಟದಿಂದ ಬರೋಬ್ಬರಿ 19,061 ಅಡಿ ಎತ್ತರದಲ್ಲಿ ನಮ್ಮ ಯೋಧರಿಗೆ ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆ ಲಭ್ಯವಾಗಲಿದೆ.

ಯೋಧರೊಬ್ಬರು ಗ್ಲೆಷಿಯರ್‌ನ ಪರ್ವತ ಪ್ರದೇಶದಲ್ಲಿ ಆ್ಯಂಟೆನಾವನ್ನು ಅಳವಡಿಸುತ್ತಿರುವ ಫೋಟೋಗಳನ್ನು ಸೇನೆ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಈ ಸೇವೆಯಿಂದಾಗಿ ಇನ್ನು ಮುಂದೆ ಯೋಧರು ತಮ್ಮ ತಮ್ಮ ಕುಟುಂಬಗಳೊಂದಿಗೆ ಯಾವುದೇ ನೆಟ್‌ವರ್ಕ್‌ ಸಮಸ್ಯೆಯಿಲ್ಲದೇ ಸಂಭಾಷಣೆ ನಡೆಸಬಹುದಾಗಿದೆ.

ಇದೇ ವೇಳೆ, ಸದ್ಯದಲ್ಲೇ ಭಾರತೀಯ ಸೇನೆಯು ತನಗೆಂದೇ ಪ್ರತ್ಯೇಕ ಸಂವಹನ ಉಪಗ್ರಹವನ್ನು ಹೊಂದಲಿದೆ. ಈಗಾಗಲೇ ಜಿಸ್ಯಾಟ್‌-7ಬಿ ಉಪಗ್ರಹಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಒಪ್ಪಿಗೆಯನ್ನೂ ನೀಡಿದ್ದಾರೆ. ಅದು ಸಶಸ್ತ್ರ ಪಡೆಗಳ ಸಮರ ಸನ್ನದ್ಧತೆ ಮತ್ತು ಸಂವಹನಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಲಿದೆ.

ಸೌಲಭ್ಯ ಒದಗಿಸಿದ್ದು ಯಾರು?
ಈ ಎತ್ತರದ ಪ್ರದೇಶದಲ್ಲಿ ದೂರಸಂಪರ್ಕ ಮೂಲಸೌಕರ್ಯ ಕಂಪನಿ ಭಾರತ್‌ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಲಿ.(ಬಿಬಿಎನ್‌ಎಲ್‌) ಇಂಟರ್ನೆಟ್‌ ಸೇವೆಯನ್ನು ಒದಗಿಸಲಿದೆ. ಫೈಬರ್‌ ಆಧಾರಿತ ಇಂಟರ್ನೆಟ್‌ ವ್ಯವಸ್ಥೆಯಿಲ್ಲದಂಥ ಕುಗ್ರಾಮಗಳಲ್ಲಿ ಮತ್ತು ಸುಮಾರು 7 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್‌ ಸಂಪರ್ಕವನ್ನು ಒದಗಿಸುವಂಥ ಭಾರತ್‌ನೆಟ್‌ ಯೋಜನೆಯನ್ನು ಕೂಡ ಇದೇ ಸಂಸ್ಥೆ ಕೈಗೆತ್ತಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next