Advertisement
ಎಮಾನ್ ಅಹ್ಮದ್ ಚಿಕಿತ್ಸೆಗಾಗಿ ಆಕೆಯ ಪ್ರಯಾಣಕ್ಕೆಂದೇ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದ್ದ ವಿಮಾನದಲ್ಲಿ ನಗರದಲ್ಲಿ ಬಂದಿಳಿದಾಗ ಆಕೆಯ ತೂಕ 498ಕೆ.ಜಿ.ಗಳಷ್ಟಿತ್ತು. ಆಸ್ಪತ್ರೆಗೆ ದಾಖಲಾದ ತತ್‌ಕ್ಷಣ ಪಥ್ಯಾಹಾರದ ಚಿಕಿತ್ಸೆಯನ್ನು ಆರಂಭಿಸಲಾಗಿತ್ತಲ್ಲದೆ ಈ ಒಂದು ತಿಂಗಳ ಅವಧಿಯಲ್ಲಿ ಆಕೆ ಸುಮಾರು 130ಕೆ.ಜಿ.ಗಳಷ್ಟು ತೂಕವನ್ನು ಕಳೆದುಕೊಂಡಿದ್ದಳು. ಇದಾದ ಬಳಿಕ ಮಾ.7ರಂದು ಆಕೆಗೆ ಹೆಸರಾಂತ ಬ್ಯಾರಿಯಾಟ್ರಿಕ್ ಸರ್ಜನ್ ಆಗಿರುವ ಡಾ|ಮುಫಜಲ್ ಲಕಾxವಾಲಾ ನೇತೃತ್ವದ ವೈದ್ಯರ ತಂಡ ಬ್ಯಾರಿಯಾಟ್ರಿಕ್ ಸರ್ಜರಿ ನಡೆಸಿತ್ತು. ನಗರದ ಸೈಫೀ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಕೆಗೆ ಚಿಕಿತ್ಸೆ ಆರಂಭಿಸಿ ಎರಡು ತಿಂಗಳುಗಳು ಕಳೆದಿದ್ದು ಈ ಅವಧಿಯಲ್ಲಿ ಆಕೆ 242 ಕೆ.ಜಿ.ತೂಕವನ್ನು ಕಳೆದುಕೊಂಡಿದ್ದಾಳೆ. ತೂಕ ಕಡಿಮೆಯಾಗುತ್ತಿದ್ದಂತೆಯೇ ಆಕೆಯ ಇತರೆ ಆರೋಗ್ಯ ಸ್ಥಿತಿಯಲ್ಲಿಯೂ ಸುಧಾರಣೆಗಳು ಕಂಡುಬಂದಿವೆ. ಆಕೆಯ ಹೃದಯ, ಕಿಡ್ನಿ, ಶ್ವಾಸಕೋಶಗಳು ಈ ಹಿಂದಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಕೆಗೆ ಚಿಕಿತ್ಸೆ ನೀಡುತ್ತಿರುವ ಸೈಫೀ ಆಸ್ಪತ್ರೆಯ ವೈದ್ಯರ ತಿಳಿಸಿದ್ದಾರೆ.
Advertisement
2 ತಿಂಗಳುಗಳಲ್ಲಿ 242 ಕೆ.ಜಿ. ತೂಕ ಕಳೆದುಕೊಂಡ ಎಮಾನ್ ಆಹ್ಮದ್!
10:56 AM Apr 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.