Advertisement

ಬಾಗಿಲು ಹಾಕಿದ ವಿಶ್ವದ ಅತೀ ದೊಡ್ಡ ಪಿಂಕ್‌ ಡೈಮಂಡ್‌ ಗಣಿ

12:21 AM Nov 04, 2020 | sudhir |

ಮೆಲ್ಬರ್ನ್: ಜಗತ್ತಿನ ಅತಿ ದೊಡ್ಡ ಪಿಂಕ್‌ ಡೈಮಂಡ್‌ ಗಣಿ ಎಂಬ ಗರಿಮೆಗೆ ಪಾತ್ರವಾಗಿದ್ದ ಪಶ್ಚಿಮ ಆಸ್ಟ್ರೇಲಿಯಾದ ಆಗೈಲ್‌ ಮೈನ್‌ ಮಂಗಳವಾರ ಬಾಗಿಲು ಹಾಕಿದೆ.

Advertisement

ಜಾಗತಿಕ ಗಣಿಗಾರಿಕೆ ದೈತ್ಯ ರಿಯೋ ಟಿಂಟೋ ಒಡೆತನ ಆಗೈಲ್‌ ಮೈನ್‌ನಲ್ಲಿ ನಿಕ್ಷೇಪವೆಲ್ಲ ಖಾಲಿಯಾಗಿರುವುದು ಇದಕ್ಕೆ ಕಾರಣ.
ಪಿಂಕ್‌ ಡೈಮಂಡ್‌ ಜಗತ್ತಿನ ಅತೀ ದುಬಾರಿ ಹಾಗೂ ಅತ್ಯಪರೂಪದ ವಜ್ರವಾಗಿದ್ದು, ಪ್ರಸಕ್ತ 1 ಕ್ಯಾರೆಟ್‌ ಪಿಂಕ್‌ ಡೈಮಂಡ್‌ನ‌ ಬೆಲೆ 3 ದಶಲಕ್ಷ ಡಾಲರ್‌ಗಳಷ್ಟಿದೆ.

ಇಂದು ಜಾಗತಿಕ ಮಾರುಕಟ್ಟೆಯಲ್ಲಿರುವ ಗುಲಾಬಿ ವಜ್ರಗಳಲ್ಲಿ ಆಗೈಲ್‌ ಗಣಿಯ ಉತ್ಪನ್ನದ ಪಾಲು 90 ಪ್ರತಿಶತದಷ್ಟಿದೆ.
ಆಗೈಲ್‌ ಗಣಿ ಮುಚ್ಚಿರುವುದರಿಂದಾಗಿ, ಮುಂದಿನ ದಿನಗಳಲ್ಲಿ ಈ ಅಪರೂಪದ ವಜ್ರ ಬೆಲೆ ಮತ್ತಷ್ಟು ಜಿಗಿಯಬಹುದು ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next