Advertisement
ಭಾರತ್ ಸ್ಕೌಟ್ಸ್- ಗೈಡ್ಸ್ ಸಂಸ್ಥೆ
Related Articles
Advertisement
ಶಾರದಾ ವಿದ್ಯಾಲಯ
ಕೊಡಿಯಾಲಬೈಲ್ನ ಶಾರದಾ ವಿದ್ಯಾಲಯದಲ್ಲಿ ವಿಶ್ವ ಯೋಗ ದಿನಾಚರಣೆ ಬೆಳಗ್ಗೆ 8.45ಕ್ಕೆ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾ ಭವನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್‌ನ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಮತ್ತು ಒಂದು ತಿಂಗಳ ಕಾಲ ನಡೆದ ಯೋಗ ಶಿಬಿರದ ಸಮಾರೋಪ ಜೂ. 21ರಂದು 11 ಗಂಟೆಗೆ ಲೇಡಿಹಿಲ್ ಸಮೀಪ ಇರುವ ಪತ್ರಿಕಾ ಭವನದಲ್ಲಿ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ
ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ, ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಯೋಗ ದಿನಾಚರಣೆ ಸಮಾರಂಭ ನಗರದ ಸಂಘ ನಿಕೇತನದಲ್ಲಿ ಜೂ. 21ರಂದು ಬೆಳಗ್ಗೆ 5.30ರಿಂದ 7 ಗಂಟೆಯ ವರೆಗೆ ನಡೆಯಲಿದೆ.
ಎ.ಜೆ. ಶಿಕ್ಷಣ ಸಂಸ್ಥೆ
ಎ.ಜೆ. ಮೆಡಿಕಲ್ ಕಾಲೇಜು ಮತ್ತು ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಸಹಯೋಗದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಎ.ಜೆ. ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ. ಲಕ್ಷ್ಮೀ ಮೆಮೋರಿಯಲ್ ಕಾಲೇ ಜಿನ ನಿರ್ದೇಶಕಿ ಆಶ್ರಿತಾ ಪಿ. ಶೆಟ್ಟಿ ಅವರು ಅಧ್ಯಕ್ಷತೆ ವಹಿಸುವರು.
ಕಿನ್ನಿಗೋಳಿ: ಅನುಗ್ರಹ ಯೋಗ ಕೇಂದ್ರ
ಕಿನ್ನಿಗೋಳಿ: ಇಲ್ಲಿನ ಅನುಗ್ರಹ ಯೋಗ ಕೇಂದ್ರದ ಆಶ್ರಯದಲ್ಲಿ ಯೋಗ ದಿನಾಚರಣೆಯ ನಿಮಿತ್ತ ಜೂ. 21 ರಂದು ಯೋಗ ಶಿಬಿರವು ಸಂಜೆ 5 ರಿಂದ ನಡಯಲಿದೆ.
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ತೋಕೂರು: ಇಲ್ಲಿನ ತೋಕೂರು ಗ್ರಾಮೀಣ ಮಾಹಿತಿ ತಂತ್ರಜ್ಞಾನ ಯುವ ಅಭಿವೃದ್ಧಿ ಕೇಂದ್ರ, ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಲ, ಮೂಡುಬಿದಿರೆ ವಲಯದ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜೂ. 21ರಂದು ಬೆಳಗ್ಗೆ 5ಕ್ಕೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಜರಗಲಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲಾ ಆಯುಷ್ ಇಲಾಖೆ ಮತ್ತು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ಶುಕ್ರವಾರ ಬೆಳಗ್ಗೆ 8 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಸಾಮೂ ಹಿಕ ಯೋಗ ಪ್ರದರ್ಶನ ಜರಗಲಿದೆ.
ಸುರತ್ಕಲ್: ಇಲ್ಲಿನ ಎನ್‌ಐಟಿಕೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂ. 21ರಂದು ಇಲ್ಲಿನ ಯೋಗ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಂಘದ ಆಶ್ರಯದಲ್ಲಿ ಬೆಳಗ್ಗೆ 9.30ಕ್ಕೆ ಎನ್‌ಐಟಿಕೆಯ ನೂತನ ಕ್ರೀಡಾ ಸಂಕೀರ್ಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುವುದು. ಮುಖ್ಯ ಅತಿಥಿಗಳಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ, ಯೋಗ ವಿಜ್ಞಾನ ಕಾಲೇಜಿನ ಡಾ| ಅಸ್ಮಿತಾ ಮೊಂತೆರೋ, ಡಾ| ಧನ್ಯಶ್ರೀ ಕೆ. ಆಗಮಿಸಲಿದ್ದು, ಯೋಗದ ಪ್ರಾಮುಖ್ಯದ ಕುರಿತಾಗಿ ಉಪನ್ಯಾಸ ಮತ್ತು ಯೋಗ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ.