Advertisement

ವಿಶ್ವ ಯೋಗ ದಿನಕ್ಕೆ ಒಂದು ತಿಂಗಳ ಉಚಿತ ಯೋಗ ತರಬೇತಿ

03:51 PM May 28, 2017 | Team Udayavani |

ಬೆಳ್ತಂಗಡಿ: ಕೇಂದ್ರ ಸರಕಾರ ಆಯುಷ್‌ ಮಂತ್ರಾಲಯ ಮೇ 21ರಿಂದ ಜೂ. 21ರ ವರೆಗೆ ಉಚಿತ ಯೋಗ ಶಿಬಿರ ನಡೆಸಿ ಸಾಮಾನ್ಯ ಜನರು ಹಾಗೂ ಯುವ ಜನಾಂಗದಲ್ಲಿ ಇದರ ಅರಿವು ಮೂಡಿಸಲಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಶಿಬಿರ ನಡೆಸುವ ಜವಾಬ್ದಾರಿ ಯನ್ನು ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿಗೆ ನೀಡಿದೆ.

Advertisement

ಅದಕ್ಕೆ ಪೂರ್ವಭಾವಿಯಾಗಿ ಶಿಬಿರ ನಡೆಸಿ ಜೂ. 21ಕ್ಕೆ ಸ್ಥಳೀಯ ಸಂಸದರು, ಶಾಸಕರು, ಉಸ್ತುವಾರಿ ಮಂತ್ರಿ ಜಿಲ್ಲಾಧಿಕಾರಿಗಳೆಲ್ಲರನ್ನೂ ಒಳಗೊಂಡಂತೆ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 7ರಿಂದ7.45ರ ವರೆಗೆ ಯೋಗ ಪ್ರಾತ್ಯಕ್ಷಿತೆಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ.

ಡಾ| ಡಿ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ವಿಶ್ವಯೋಗ ದಿನಾಚರಣೆ ಪ್ರಯುಕ್ತ ಕೇಂದ್ರ ಸರಕಾರದ ಸಹಯೋಗದೊಂದಿಗೆ ರಾಜ್ಯದ 5 ಜಿಲ್ಲೆಗಳಲ್ಲಿ ಒಂದು ತಿಂಗಳ ಉಚಿತ ಯೋಗ ತರಬೇತಿ, ಜೂ. 21ರಂದು ವಿಶ್ವಯೋಗ ದಿನಾಚರಣೆ. ಉಜಿರೆಯ ಶ್ರೀ ಧ. ಮ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಆಶ್ರಯದಲ್ಲಿ ಕೇಂದ್ರ ಆಯುಷ್‌ ಮಂತ್ರಾಲಯದ ನಿರ್ದೇಶನದಂತೆ ಹಾಗೂ ರಾಜ್ಯದ ಸಲಹೆ ಮೇರೆಗೆ ರಾಜ್ಯದ 5 ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ, ಮೈಸೂರು, ದಾವಣಗೆರೆ, ಬಾಗಲಕೋಟೆ ವ್ಯಾಪ್ತಿಯಲ್ಲಿ ತಲಾ 10 ಕೇಂದ್ರಗಳಲ್ಲಿ ಒಂದು ತಿಂಗಳ ಕಾಲ ಸಾವಿರಾರು ಜನರಿಗೆ ಉಚಿತ ಯೋಗ ಶಿಬಿರವನ್ನು ಕಾಲೇಜಿನ ವೈದ್ಯರ ತಂಡ ಪ್ರಾರಂಭಿಸಿದೆ. ಜೂ. 21ರಂದು ಬೃಹತ್‌ ಯೋಗ ದಿನಾಚರಣೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ.

ರಾಜ್ಯದ 20 ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ಸೇವಾ ಯೋಜನೆಯ ಆಯ್ದ 500 ಪ್ರತಿನಿಧಿಗಳಿಗೆ ಹಾಗೂ ಯೋಜನಾಧಿ ಕಾರಿಗಳಿಗೆ ರಾಜೀವ ಗಾಂಧಿ ಆರೋಗ್ಯ ವಿ.ವಿ. ಸಂಯೋಜನೆಯಲ್ಲಿ 3 ದಿನಗಳ ಯೋಗ ಮತ್ತು ಜೀವನ ಶೈಲಿಯ ಕಾರ್ಯಾಗಾರ ಹಾಗೂ ವಿಶ್ವಯೋಗ ದಿನಾಚರಣೆ ನಡೆಯಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಲೆಗಳಲ್ಲಿ ಸರಕಾರಿ ಸಹಯೋಗದೊಂದಿಗೆ ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮೂಲಕ ಯೋಗ ತರಬೇತಿ ಹಾಗೂ ವಿಶ್ವಯೋಗ ದಿನಾಚರಣೆ ನಡೆಯಲಿದೆ.

Advertisement

ಶ್ರೀ ಕ್ಷೇತ್ರಧರ್ಮಸ್ಥಳದಲ್ಲಿ 1 ಸಾವಿರ ಶಿಬಿರಾರ್ಥಿಗಳಿಂದ ವಿಶ್ವ ಯೋಗ ದಿನಾಚರಣೆ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ| ಪ್ರಶಾಂತ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next