Advertisement

ಯೋಗದಿಂದ ಜಗತ್ತು ಒಗ್ಗೂಡಿಸಿದ ಭಾರತ

11:57 PM Jun 21, 2019 | Sriram |

ಉಡುಪಿ: ಭಾರತ ದೇಶವು ಯೋಗದ ಮೂಲಕ ಇಡೀ ಜಗತ್ತನ್ನೇ ಒಂದುಗೂಡಿಸುತ್ತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯಲ್ಲಿ ಶುಕ್ರವಾರ ಜರಗಿದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ 197 ರಾಷ್ಟ್ರಗಳ ಪೈಕಿ 177 ರಾಷ್ಟ್ರಗಳು ಯೋಗದ ಪರವಾಗಿ ಕೈ ಜೋಡಿಸಿವೆ ಎಂದು ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್‌ ಶೆಟ್ಟಿ, ಸಂಧ್ಯಾ ರಮೇಶ್‌, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರೀಶ್‌ ಅಂಚನ್‌, ಟಿ.ಜಿ.ಹೆಗ್ಡೆ, ರಜನಿ ಹೆಬ್ಟಾರ್‌, ವಿಜಯ ಕೊಡವೂರು, ಪ್ರಮುಖರಾದ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಶ್ರೀಶ ನಾಯಕ್‌, ಸಂತೋಷ್‌ ಜತ್ತನ್ನ, ಶಿವಕುಮಾರ್‌ ಅಂಬಲಪಾಡಿ, ಮಂಜುಳಾ ವಿ.ನಾಯಕ್‌, ಗಿರಿಧರ ಆಚಾರ್ಯ, ಜಗದೀಶ್‌ ಆಚಾರ್ಯ, ಲಕ್ಷ್ಮೀಶ ಮೊದಲಾದವರು ಉಪಸ್ಥಿತರಿದ್ದರು. ಮಮತಾ ಮತ್ತು ಮಲ್ಲಿಕಾ ಅವರು ಯೋಗಾಭ್ಯಾಸ ನಡೆಸಿಕೊಟ್ಟರು. ಪೂರ್ಣಿಮಾ ಸುರೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಮಾತನಾಡಿ ‘ಶಾಲೆಗಳಲ್ಲಿ ಪ್ರಸ್ತುತ ವಾರಕ್ಕೊಂದು ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. ಇದು ಸಾಲದು. ಪ್ರತಿ ದಿನವೂ ಯೋಗ ಶಿಕ್ಷಣ ನೀಡುವಂತಾಗಬೇಕು. ಯೋಗ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ’ ಎಂದು ಹೇಳಿದರು.

Advertisement

ಶಾಲೆಗಳಲ್ಲಿ ಪ್ರತಿದಿನ ಇರಲಿ
ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಮಾತನಾಡಿ ‘ಶಾಲೆಗಳಲ್ಲಿ ಪ್ರಸ್ತುತ ವಾರಕ್ಕೊಂದು ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. ಇದು ಸಾಲದು. ಪ್ರತಿ ದಿನವೂ ಯೋಗ ಶಿಕ್ಷಣ ನೀಡುವಂತಾಗಬೇಕು. ಯೋಗ ನಮ್ಮ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next