Advertisement
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರು ಮಾತನಾಡಿ, ಮಹಿಳೆಯರು ತಮ್ಮ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕು. ಸಮಾಜ ಇಷ್ಟು ಮುಂದುವರಿದರೂ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ಕಡಿಮೆಯಾಗಿಲ್ಲ. ಇಂದಿನ ಮಹಿಳೆಯರು ಆತ್ಮಸ್ಥೈರ್ಯ ದಿಂದ ಮುಂದೆ ಬಂದು ತಮ್ಮ ಪ್ರತಿಭೆಯನ್ನು ಮೆರೆಯಬೇಕು. ನಾವು ಹೆಣ್ಣು ಎಂಬ ಭಾವನೆಯನ್ನು ತೊರೆದು ನಾರಿಶಕ್ತಿಯನ್ನು ಪ್ರತಿಬಿಂಬಿಸಿದಾಗ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸರಿ ಸಮಾನರು ಎಂಬುವುದನ್ನು ತೋರ್ಪಡಿಸುತ್ತದೆ. ಇಂದು ಹಿರಿಯ ದಂಪತಿಗಳನ್ನು ಸಮ್ಮಾನಿಸಿರುವುದು ಇಂದಿನ ಯುವ ದಂಪತಿಗಳಿಗೆ ಪ್ರೇರಣೆಯಾಗಿದೆ. ಹಿರಿಯರ ದಾಂಪತ್ಯ ಬಂಧನದ ಅಪಾರ ಬಂಧುತ್ವದ ಪ್ರೇರಣೆ ಮಕ್ಕಳಿಗೆ ದೊರೆಯಲಿ ಎಂದು ನುಡಿದು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು.
Related Articles
Advertisement
ತೀರ್ಪುಗಾರರಾಗಿ ಸಹಕರಿಸಿದ ರೇಖಾ ರಾವ್ ಮತ್ತು ನಿಕಿತಾ ಸದಾನಂದ ಅಮೀನ್ ಉತ್ತಮ ಮಾತನಾಡಿ ಸಲಹೆ ಸೂಚನೆ ನೀಡಿದರು. ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನೆ, ವಿವಿಧ ವಿನೋದಾವಳಿಗಳು ನಡೆದವು.ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಂಟ್ಸ್ ಫೋರಂ ಮೀರಾ-ಭಾಯಂದರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ-ಭಾಯಂದರ್, ತುಳುನಾಡ ಸಮಾಜ ಮೀರಾ-ಭಾಯಂದರ್,ಯುವ ಮಿತ್ರ ಮಂಡಳಿ ಭಾರತಿ ಪಾರ್ಕ್, ಶ್ರೀ ಶನೀಶ್ವರ ಸೇವಾ ಸಮಿತಿ ಮೀರಾರೋಡ್, ಶ್ರೀ ಕಟೀಲೇಶ್ವರಿ ಭಜನಾ ಸಮಿತಿ ಭಾಯಂದರ್ ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮೀರಾ- ಭಾಯಂದರ್ ಪ್ರಥಮ, ಯುವ ಮಿತ್ರ ಮಂಡಳಿ ಭಾರತಿ ಪಾರ್ಕ್ ದ್ವಿತೀಯ, ಬಂಟ್ಸ್ ಫೋರಂ ಮೀರಾ-ಭಾಯಂದರ್ ತೃತೀಯ ಬಹುಮಾನ ಪಡೆಯಿತು. ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚರಿಸಿದ ರಾಜಶೇಖರ ಕೆ. ಮೂಲ್ಕಿ ಮತ್ತು ನಾಗಮ್ಮ ಆರ್. ಮೂಲ್ಕಿ, ನಾರಾಯಣ ಶೆಟ್ಟಿ ಮತ್ತು ಸಂಪಾ ಶೆಟ್ಟಿ, ಗೋಪಾಲ್ ರಾಮ ಕುಂದರ್ ಮತ್ತು ನೀತಾ ಗೋಪಾಲ್ ಕುಂದರ್ ದಂಪತಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಭಜನಾ ಸಮಿತಿಗೆ ಅವರು ನೀಡಿರುವ ಯೋಗದಾವನ್ನು ಗುರುತಿಸಿ ಮಂಡಳದ ಮಹಿಳಾ ವಿಭಾಗದ ಕಾರ್ಯದರ್ಶಿ ನಯನಾ ಆರ್. ಶೆಟ್ಟಿ ಅವರನ್ನು ಮಹಿಳಾ ವಿಭಾಗದ ವತಿಯಿಂದ ವಿಶೇಷವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಭಕ್ತವೃಂದ ಚಾರಿಟೆ ಬಲ್ ಟ್ರಸ್ಟ್ ಇಂದ್ರಲೋಕ್ ಇದರ ಧರ್ಮದರ್ಶಿ ಹರೀಶ್ ಎಂ. ಸಾಲ್ಯಾನ್ ಮತ್ತು ಲಕ್ಷ್ಮೀ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ವಾರಿಜಾಶ್ರೀಯಾನ್ ಪ್ರಾಯೋಜಕತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು.
ಮಂಡಳದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮಂಗಳಾ ಅಶೋಕ್ ಕಣಂಜಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರ ಒಗ್ಗಟ್ಟು, ಏಕತೆಯಿಂದ ಒಂದು ಸುಂದರ ಮನೆಯನ್ನು, ಸಮಾಜವನ್ನು ಸಂಘಟನೆಯನ್ನು ಉತ್ತಮ ರೀತಿಯಲ್ಲಿ ನಡೆಸಬಹುದು. ಇಂದಿನ ಕಾರ್ಯಕ್ರಮವನ್ನು ಮಹಿಳೆಯರು ಎಲ್ಲಾ ಸೇರಿಯಶಸ್ವಿಗೊಳಿಸಿದ್ದೀರಿ. ಇದೇ ರೀತಿಯ ಪ್ರೀತಿ, ಒಗ್ಗಟ್ಟು ಇನ್ನು ಮುಂದೆಯೂ ನಮ್ಮಲ್ಲಿರಬೇಕು ಎಂದರು.
ವೇದಿಕೆಯಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗ ಭಜನಾ ಸಮಿತಿಯ ಸಂಚಾಲಕಿ ಶಶಿಕಲಾ ಆನಂದ ಮಾಡಾ,ತುಳು-ಕನ್ನಡ ವೆಲ್ಫೆರ್ ಅಸೋಸಿಯೇಶನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷ ವಸಂತಿ ಎಸ್. ಶೆಟ್ಟಿ, ಸಮಾಜ ಸೇವಕಿ ಸರೋಜಿನಿ ವಾಸುದೇವ ಪೂಜಾರಿ, ಸುಮಂಗಳಾ ಅಶೋಕ್ ಕಣಂಜಾರು, ಸಂಚಾಲಕಿ ಆಶಾ ಆರ್. ಶೆಟ್ಟಿ, ಕಾರ್ಯದರ್ಶಿ ನಯನಾ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶೀಲಾ ಎಂ. ಶೆಟ್ಟಿ, ಕೋಶಾಧಿಕಾರಿ ಅನುಷಾ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಾವತಿ ಹೆಗ್ಡೆ, ಜತೆ ಕೋಶಾಧಿಕಾರಿ ಯಶವಂತಿ ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಸುಮತಿ ಶೆಟ್ಟಿ, ಗೌರವಾಧ್ಯಕ್ಷ ಡಾ| ಅರುಣೋದಯ ಎಸ್. ರೈ, ಮಂಡಳದ ಅಧ್ಯಕ್ಷ ರವಿಕಾಂತ್ ಶೆಟ್ಟಿ ಇನ್ನ ಮೊದಲಾ ದವರು ಉಪಸ್ಥಿತರಿದ್ದರು.
ಸುರೇಖಾ ಶೆಟ್ಟಿ, ಶಶಿಕಲಾ ಶೆಟ್ಟಿ, ದಯಾ ಶೆಟ್ಟಿ ಪ್ರಾರ್ಥನೆಗೈದರು. ಸ್ವಾತಿ ಶೆಟ್ಟಿ, ಸೌಮ್ಯಾ ಶೆಟ್ಟಿ, ಆಶಾ ಎ. ಕೋಟ್ಯಾನ್, ಭವಾನಿ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ನಯನಾ ಆರ್. ಶೆಟ್ಟಿ ಸ್ವಾಗತಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಥಾಪಕ ಚಂದ್ರಶೇಖರ್ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.