ರಾಣಿಬೆನ್ನೂರ: ಭೂಮಿ ಮೇಲೆ ಜೀವಿಸುವ ಸಕಲ ಜೀವರಾಶಿಗಳಿಗೂ ನೀರು ಬೇಕು. ನೀರು ಸಿಗಲು ಮಳೆಬೇಕು. ಮಳೆ ಬರಲು ಅರಣ್ಯವಿರಬೇಕು. ಅದಕ್ಕಾಗಿಅರಣ್ಯ ನಾಶ ಮಾಡದೇ ಅದನ್ನು ಬೆಳೆಸುವ ಮೂಲಕ ಸಂರಕ್ಷಿಸಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಅಣ್ಣುಗೌಡ ಪಾಟೀಲ ಹೇಳಿದರು.
ನಗರಸಭೆ ಗುಡ್ಡದ ಸ್ಮಾರಕ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತುನಗರಸಭೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಜಲ ದಿನಾಚರಣೆ ಅಂಗವಾಗಿ ಕಾನೂನು ನೆರವು- ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿ ಶೇ.70 ಭಾಗ ನೀರಿನಿಂದ ಆವೃತಗೊಂಡು, ಶೇ. 97 ಉಪ್ಪು ನೀರು ಮತ್ತು ಕೇವಲ ಶೇ.3 ಮಾತ್ರಕುಡಿಯಲು ಯೋಗ್ಯವಿದೆ. ಅಭಿವೃದ್ಧಿ ನೆಪದಲ್ಲಿ ಮರಕಡಿದು ಕಾಂಕ್ರೀಟ್ ರಸ್ತೆ ಮಾಡಿದ್ದರಿಂದ ತಾಪಮಾನ ಹೆಚ್ಚಾಗಿದೆ. ಇದರಿಂದ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದರು.
ಮಳೆ ನೀರು ಸಮರ್ಪಕ ರೀತಿಯಲ್ಲಿ ಸಂಗ್ರಹಿಸಿ ಅದರ ಉಪಯೋಗ ಪಡೆಯಬೇಕು. ಕೆರೆ-ಕಟ್ಟೆ,ಹಳ್ಳ-ಕೊಳ್ಳಗಳಲ್ಲಿ ನೀರು ನಿಲ್ಲುವುದಕ್ಕೆ ವ್ಯವಸ್ಥೆಮಾಡಬೇಕು. ಕಳೆದೆರೆಡು ವರ್ಷಗಳಲ್ಲಿ ರಾಜ್ಯ-ರಾಷ್ಟ್ರಅನುಭವಿಸಿದ ಬರ ಹಾಗೂ ಅದರ ನೆರಳಲ್ಲಿ ಬೆಂದು ಹೋಗಿರುವ ಜನತೆ ಹಸಿರಿನ ಉಳಿವಿಗಾಗಿ ಅರಣ್ಯಬೆಳೆಸಬೇಕು. ದೇಶದಲ್ಲಿ ಕೃಷಿಗಾಗಿ ಬಳಸುವ ನೀರಿನಪ್ರಾಮಾಣದ ಶೇ.45 ಭತ್ತದ ಬೆಳೆಗೆ ಬಳಸುತ್ತಿರುವುದುವಿಶೇಷ. ಬದಲಿಗೆ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಕೊಳ್ಳಬೇಕು ಎಂದರು.
ನಗಸಭೆ ಆಯುಕ್ತ ಡಾ| ಮಹಾಂತೇಶ ಎನ್.ಪ್ರಾಸ್ತಾವಿಕ ಮಾತನಾಡಿದರು. ಎಸ್‌ಜೆಎಂವಿ ಮಹಿಳಾಕಾಲೇಜು ಪ್ರಾಧ್ಯಾಪಕ ಡಾ| ಈಶ್ವರಪ್ಪ ಉಪನ್ಯಾಸನೀಡಿದರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸದಸ್ಯೆ ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ, ಉಪಾಧ್ಯಕ್ಷ ಕುಮಾರ ಮಡಿವಾಳರ, ಕಾರ್ಯದರ್ಶಿ ಗಣೇಶಮುಂಡಾಸದ, ನ್ಯಾಯವಾದಿ ಎಚ್.ಡಿ. ಹೊನ್ನಕ್ಕಳವರ, ಜಗದೀಶ, ಪಾಟೀಲ ಇತರರು ಇದ್ದರು.