Advertisement
ಬಹುದೊಡ್ಡ ಯುದ್ಧಭೂಮಿಯಾಗುತ್ತಿರುವ ಪ್ರದೇಶಗಳು ರಷ್ಯಾದ ಸಮೀಪವೇ ಇದೆ. ಇದರಲ್ಲಿ ಈಗಾಗಲೇ ಅರ್ಮೇನಿಯಾ ಮತ್ತು ಅಝರ್ ಬೈಜಾನ್ ನಡುವೆ ಯುದ್ಧ ಆರಂಭವಾಗಿಬಿಟ್ಟಿದೆ. ಎರಡು ದೇಶಗಳು ಮಿಸೈಲ್ ಗಳನ್ನು ಹಾಗೂ ಯುದ್ಧ ಟ್ಯಾಂಕ್ ಗಳನ್ನು ಉಪಯೋಗಿಸಿ ದಾಳಿ ನಡೆಸುತ್ತಿವೆ. ಅಷ್ಟೇ ಅಲ್ಲ ಮುಸ್ಲಿಂ ಬಾಹುಳ್ಯದ ಅಝರ್ ಬೈಜಾನ್ ಡ್ರೋಣ್ ದಾಳಿ ನಡೆಸಲು ಆರಂಭಿಸಿದೆ ಎಂದು ವಿವರಿಸಿದೆ.
Related Articles
Advertisement
ಸೌದಿ ಅರೇಬಿಯಾ ಇತ್ತೀಚೆಗೆ ಹತ್ತು ಮಂದಿ ಇರಾನ್ ಉಗ್ರರನ್ನು ಬಂಧಿಸಿತ್ತು. ಇದರಿಂದಾಗಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿಯಾಗಬಹುದು ಎಂದು ಶಂಕಿಸಲಾಗಿದೆ.
ಜಮ್ಮು-ಕಾಶ್ಮೀರದ ಲಡಾಖ್ ನಲ್ಲಿಯೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ. ಲಡಾಖ್ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಒಪ್ಪಿಕೊಳ್ಳಲು ಚೀನಾ ಸಿದ್ಧವಿಲ್ಲದ ಪರಿಣಾಮ ಎಲ್ ಎಸಿಯಲ್ಲಿ ಉಭಯ ದೇಶಗಳು ಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ.
ಇದನ್ನೂ ಓದಿ:ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ
ಅಝರ್ ಬೈಜಾನ್-ಅರ್ಮೇನಿಯಾ ನಡುವಿನ ಯುದ್ಧದ ವಿಚಾರದಲ್ಲಿ ರಷ್ಯಾ ಮತ್ತು ಟರ್ಕಿ ಕೈಜೋಡಿಸುವ ಸಾಧ್ಯತೆ ಇದ್ದಿರುವುದಾಗಿ ತಜ್ಞರು ವಿಶ್ಲೇಷಿಸಿದ್ದಾರೆ. ಟರ್ಕಿ ಈಗಾಗಲೇ ಬಹಿರಂಗವಾಗಿ ಅಝರ್ ಬೈಜಾನ್ ಗೆ ಬೆಂಬಲ ಘೋಷಿಸಿದೆ. ಆದರೆ ಅರ್ಮೇನಿಯಾ ವಿಚಾರದಲ್ಲಿ ರಷ್ಯಾ ಇನ್ನೂ ಬೆಂಬಲಿಸುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಅರ್ಮೇನಿಯಾದ ಮಿಸೈಲ್ ದಾಳಿಗೆ ಅಝರ್ ಬೈಜಾನ್ ನ ಸೇನೆಯ ಹಲವಾರು ಯುದ್ಧ ಟ್ಯಾಂಕ್ ಗಳು ನಾಶವಾಗಿ ಹೋಗಿವೆ. ಅರ್ಮೇನಿಯಾ ಪಡೆ ಮಲೆ ಅಝರ್ ಬೈಜಾನ್ ಸೇನೆ ಡ್ರೋನ್ ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಮತ್ತೊಂದೆಡೆ ರಷ್ಯಾ ನಿರ್ಮಿತ ಅಣು ಸಿಡಿತಲೆಯ ಮಿಸೈಲ್ ದಾಳಿ ನಡೆಸುವುದಾಗಿ ಅರ್ಮೇನಿಯಾ ಅಝರ್ ಬೈಜಾನ್ ಗೆ ಎಚ್ಚರಿಕೆ ನೀಡಿದೆ.