Advertisement
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಜಗತ್ತಿನಲ್ಲಿ ಭಾರತ ಎರಡನೇ ಕನಿಷ್ಠ ಮಾಂಸ ಸೇವನೆಯ ರಾಷ್ಟ್ರ ಎಂದು ತಿಳಿಸಿದೆ. ಈಗ ಮಾಂಸಾ ಹಾರ ಸೇವನೆಯ ಸಂಖ್ಯೆ ಏರುತ್ತಿದ್ದರೂ ಭಾರತ ದಲ್ಲಿ 40 ಕೋಟಿ ಜನರು ಸಸ್ಯಾಹಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಧರ್ಮದಲ್ಲಿಯೇ ಸಸ್ಯಾಹಾರ ಬೇರೂರಿದೆ. ಬೌದ್ಧ ಮತ್ತು ಜೈನ ಧರ್ಮ, ಮತ್ತದರ ಅಹಿಂಸೆಯ ಪರಿಕಲ್ಪನೆ, ಮನುಷ್ಯನೂ ಸೇರಿದಂತೆ ಸಮಸ್ತ ಜೀವಿಗಳನ್ನು ಹಿಂಸಿಸದಿರುವುದು ಸಸ್ಯಾಹಾರ ಪದ್ಧತಿಗೆ ನಾಂದಿಯಾಯಿತು ಎನ್ನಬಹುದು. ಅದರ ಪ್ರಭಾವ ಹಿಂದೂ ಸಂಸ್ಕೃತಿಯ ಮೇಲೆ ಉಂಟಾಗಿ ಸಸ್ಯಾಹಾರ, ಜೀವನ ಪದ್ಧತಿಯ ಒಂದು ಭಾಗವಾಯಿತು. ಇವುಗಳ ಹೊರತಾಗಿ ಆರೋಗ್ಯ ಮತ್ತು ಪರಿಸರದ ಕಾಳಜಿಯೂ ಇದರ ಹಿಂದಿದೆ.
Advertisement
ದೇಶದಲ್ಲಿ ಹೆಚ್ಚುತ್ತಿದ್ದಾರೆ ಮಾಂಸಾಹಾರಿಗಳು!:
ಭಾರತ 1.3 ಬಿಲಿಯನ್ ಜನಸಂಖ್ಯೆಯಿರುವ ದೇಶ. ಸಸ್ಯಾಹಾರಿ ದೇಶ ಎಂದು ಬಿಂಬಿಸಲ್ಪಟ್ಟಿದೆ. ವಾಸ್ತವವಾಗಿ ಶೇ.71ರಷ್ಟು ಜನರು ಮಾಂಸಾಹಾರಿಗಳು. ಶೇ. 29ರಷ್ಟು ಸಸ್ಯಾಹಾರಿಗಳು. ರಾಜಸ್ಥಾನದಲ್ಲಿ ಅತೀ ಹೆಚ್ಚು ಸಸ್ಯಾಹಾರಿಗಳಿದ್ದಾರೆ. ಹರಿಯಾಣ, ಪಂಜಾಬ್ ಅನಂತರದ ಸ್ಥಾನದಲ್ಲಿದೆ. ತೆಲಂಗಾಣ ಮಾಂಸಾಹಾರದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪ. ಬಂಗಾಲ, ಆಂಧ್ರ, ಒಡಿಶಾ ಮತ್ತು ಕೇರಳಕ್ಕೆ ಅನಂತರದ ಸ್ಥಾನ. ಈಗ ಭಾರತೀಯರು ಮಾಂಸಾಹಾರವನ್ನು ವಿಶೇಷ ಆಹಾರವನ್ನಾಗಿ ಸ್ವೀಕರಿಸುತ್ತಿದ್ದಾರೆ. ಜಗತ್ತಿನ ಇತರ ಭಾಗಗಳಲ್ಲಿ ಜನರು ಅದರ ವ್ಯತಿರಿಕ್ತವಾಗಿ ಮಾಂಸಾಹಾರವನ್ನು ಕಡಿಮೆ ಬಳಸುತ್ತಿದ್ದಾರೆ.
ವೇದಗಳು, ಉಪನಿಷತ್, ಧರ್ಮಶಾಸ್ತ್ರಗಳು, ಯೋಗಸೂತ್ರಗಳಲ್ಲಿ ಸಸ್ಯಾಹಾರದ ಉಲ್ಲೇಖಗಳಿವೆ. ಮಹಾಭಾರತದಲ್ಲೂ ಮಾಂಸಾಹಾರಿ ಯಾರು ಎಂದು ವಿವರಿಸಲಾಗಿದೆ. ಭಾಗವತವೂ ಮಾಂಸಾಹಾರದ ದುಷ್ಪರಿಣಾಮಗಳು ಹೇಗೆ ಪುನರ್ಜನ್ಮದಲ್ಲಿ ಫಲಿಸು ತ್ತವೆ ಎಂದು ಉಲ್ಲೇಖೀಸುತ್ತದೆ. ಮನುಷ್ಯನೊಬ್ಬ ತನಗೆ ಯಾವುದರಿಂದ ವೇದನೆಯಾಗುತ್ತದೆ ಅದನ್ನು ಅವನು ಇತರರಿಗೆ ಮಾಡಬಾರದು. ಇದು ಧರ್ಮದ ನಿಯಮ. ಕಾಮಗಳ ದಾಸನಾಗಿ ಅದಕ್ಕೆ ವ್ಯತಿರಿಕ್ತ
ವಾಗಿ ನಡೆದರೆ ಅದುವೇ ಅಧರ್ಮ ಎನಿಸುವುದು ಎನ್ನುತ್ತದೆ ಮಹಾಭಾರತ. ಬದುಕಿನಲ್ಲಿ ಅಂಗಹೀನವಿರ ದಿರುವಿಕೆ, ದೀರ್ಘ ಆಯುಷ್ಯ, ಮಾನಸಿಕ ಮತ್ತು ದೈಹಿಕ ಆರೋಗ್ಯ, ಶಕ್ತಿ ಮತ್ತು ಸ್ಮರಣಶಕ್ತಿಯನ್ನು ಬಯ ಸುವವನು ಘಾತಕ ಕೃತ್ಯವನ್ನು ಎಂದೂ ಮಾಡಲಾರ ಎಂದಿದೆ ಮಹಾಭಾರತ. ತಮಿಳು ಸಾಹಿತ್ಯ ತಿರುಕ್ಕುರಳ್ ಮಾಂಸಾಹಾರದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ತಿಳಿಸಿದೆ. ತನ್ನ ಮಾಂಸ ಪುಷ್ಟಿಗಾಗಿ ಪ್ರಾಣಿಗಳ ಮಾಂಸವನ್ನು ಸೇವಿಸುವಾತನು ನೈಜ ಅನುಕಂಪವನ್ನು ಹೇಗೆ ಆಚರಿಸುತ್ತಾನೆ ಎಂದು ಪ್ರಶ್ನಿಸಿದೆ.
ಸಸ್ಯಾಹಾರದತ್ತ ಪಾಶ್ಚಾತ್ಯರ ಒಲವು!:
21 ನೇ ಶತಮಾನದಲ್ಲಿ ಒಂದು ನಾಟಕೀಯ ಬದಲಾವಣೆ ಎಂದರೆ ಜಗತ್ತಿನಾದ್ಯಂತ ಎದ್ದ ಸಸ್ಯಾಹಾರದ ಅಲೆ! ಜಗತ್ತಿನಲ್ಲಿ ಸುಮಾರು 500 ಮಿಲಿಯ ಜನರು ಸಸ್ಯಾಹಾರವನ್ನು ಅನುಸರಿಸು
ತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಅಮೆರಿಕದಲ್ಲಿ ಸಸ್ಯ ಆಧರಿತ ಆಹಾರ ಪದಾರ್ಥಗಳ ಮಾರಾಟ ಶೇ. 31ರಷ್ಟು ಏರಿದೆ. ಅಮೆರಿಕ ಮಾತ್ರವಲ್ಲ ಮತ್ತುಳಿದ ಮುಂದುವರಿದ ದೇಶಗಳಲ್ಲೂ ಮಾಂಸಾಹಾ ರದ ಸೇವನೆ ಕಡಿಮೆಯಾಗುತ್ತಿದೆ. ಪರಿಸರ ಕಾಳಜಿ, ಆರೋಗ್ಯ ರಕ್ಷಣೆ, ಜಾಗತಿಕ ತಾಪಮಾನ ಮತ್ತು ಪ್ರಾಣಿಹಕ್ಕುಗಳು ಇತ್ಯಾದಿ ಕಾರಣಗಳೂ ಒಳಗೊಂಡಿವೆ. ಸಾವಿರಾರು ವರ್ಷ ಪೂರ್ವದಲ್ಲಿ ಆರಂಭವಾಗಿದ್ದ ಭಾರತೀಯ ಸಸ್ಯಾಹಾರ ಕ್ರಿ.ಪೂ 4ನೇ ಶತಮಾನದಿಂದಲೇ ಪಾಶ್ಚಾತ್ಯ ಜಗತ್ತನ್ನು ಸಸ್ಯಾಹಾರದತ್ತ ಆಕರ್ಷಿಸಿತ್ತು. ಪ್ರಾಚೀನ ಭಾರತೀಯರು ಮಾಂಸಾಹಾರಿಗಳಾಗಿದ್ದರು. ವೇದ ಕಾಲದಲ್ಲಿ (ಕ್ರಿ.ಪೂ. 1700-1100) ಸಸ್ಯಾ ಹಾರದ ಬೀಜಕ್ಷೇಪವಾಯಿತು ಎನ್ನಬಹುದು. ಪ್ರಾಣಿಬಲಿ ಬದಲಿಗೆ ಹಿಟ್ಟಿನ ಆಕೃತಿಗಳನ್ನು ಯಜ್ಞಕ್ಕೆ ಸಮರ್ಪಿಸಲಾಗಿತ್ತು. ಕ್ರಿ.ಪೂ. 8ನೇ ಮತ್ತು 6ನೇ ಶತಮಾನ ನಡುವೆ ಸಂಸಾರ, ಆತ್ಮ, ಕರ್ಮ, ಸಾವು ಬದುಕಿನ ಚಕ್ರ, ಪಾಪ
ಪುಣ್ಯ, ಪುನರ್ಜನ್ಮದ ಪರಿಕಲ್ಪನೆಗಳು ಹಿಂದೂ ಸಂಸ್ಕೃತಿ, ಧರ್ಮದಲ್ಲಿ ಸೇರಿಕೊಂಡುದುದರಿಂದ ಉದಾತ್ತ ಜೀವನಾದರ್ಶಗಳು ಬದುಕಿನ ಭಾಗವಾದವು. ಸಸ್ಯಾಹಾರ ಬದುಕಿನ ಆಹಾರ ಪದ್ಧತಿಯಾಗಿ ವಿಕಸನಗೊಂಡಿತು.
ಸಸ್ಯಾಹಾರಕ್ಕೇಕೆ ಪ್ರಾಶಸ್ತ್ಯ?:
ಮಾಂಸಾಹಾರಕ್ಕಿಂತ ಸಸ್ಯಾಹಾರ ಪದಾರ್ಥಗಳಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಂಶಗಳು ಕಡಿಮೆಯಾದ್ದರಿಂದ ಮಾಂಸಾಹಾರಿಗಳಿಗಿಂತ ಸಸ್ಯಾ ಹಾರಿಗಳು ಹೃದಯ ಕಾಯಿಲೆಗಳಲ್ಲಿ ಸಾವನ್ನಪ್ಪುವ ಅಪಾಯದ ಪ್ರಮಾಣ ಶೇ. 24ರಷ್ಟು ಕಡಿಮೆ. ಮತ್ತು ಹೃದಯ ಸಂಬಂಧೀ ಕಾಯಿಲೆಗಳು ಸಸ್ಯಾಹಾರಿ
ಗಳಲ್ಲಿ ಕಂಡುಬರುವುದು ಕಡಿಮೆಯೇ. ಕ್ಯಾನ್ಸರ್ ರೋಗವೂ ಮಾಂಸಾಹಾರಿಗಳಷ್ಟು ಸಸ್ಯಾಹಾರಿಗಳನ್ನು ಕಾಡುವುದಿಲ್ಲ. ಕೊಲೊರೆಕ್ಟಲ್ ಕ್ಯಾನ್ಸರ್ ಮಾಂಸ ಸೇವಿಸುವರಲ್ಲಿ ಹೆಚ್ಚು. ಅತೀ ತೂಕವನ್ನು ಸಸ್ಯಾಹಾರದಿಂದ ನಿಯಂತ್ರಿಸಬಹುದು. ಸಸ್ಯಾಹಾರ ರೋಗ ನಿಯಂತ್ರಣ ಶಕ್ತಿಯನ್ನು ಹೆಚ್ಚಿಸುತ್ತದೆ. ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸು
ತ್ತದೆ. ಆದ್ದರಿಂದ ಮಾಂಸಾಹಾರಿಗಳಿಗಿಂತ ಸಸ್ಯಾಹಾರಿ ಗಳು ಹೆಚ್ಚು ಆಯುಷಿಗಳು. ಜಾಗತಿಕ ತಾಪಮಾನ ವನ್ನು ಕುಂಠಿತಗೊಳಿಸಬೇಕಾದರೆ ಸಸ್ಯಾಹಾರವನ್ನು ಸೇವಿಸಬೇಕು. ಆಹಾರ ಪಥ್ಯ ಆಧಾರಿತ ರೋಗ ಗಳು ಹೆಚ್ಚುತ್ತಿವೆ. ಸಾತ್ವಿಕ ಸಸ್ಯಾಹಾರದಿಂದ ನಿರೋಗಿ ಗಳಾಗುವುದು ಜಾಣತನ. ಜಾಗತಿಕ ಹಸಿವನ್ನು ಸಸ್ಯಾಹಾರದ ಮೂಲಕ ನಿವಾರಿಸೋಣ. ಪ್ರಾಣಿಗಳ ಮೇಲೆ ಕರುಣೆ, ಅನುಕಂಪವಿರಲಿ.