Advertisement

ವಿಶ್ವ ತುಳು ಸಮ್ಮೇಳನ ದುಬೈ-2018: ಆಮಂತ್ರಣ ಬಿಡುಗಡೆ 

03:15 PM Oct 02, 2018 | |

ಮುಂಬಯಿ: ನವೆಂಬರ್‌ನಲ್ಲಿ  ದುಬೈಯ ನಾಸರ್‌   ಲೀಸರ್‌   ಲ್ಯಾಂಡ್‌   ಐಸ್‌ ರಿಂಕ್‌   ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳ-2018 ಇದರ  ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸಮ್ಮೇಳನದ ಸಲಹಾ ಮತ್ತು   ಇನ್ನಿತರ ಸಮಿತಿಗಳ ವಿಶೇಷ   ಸಭೆಯಲ್ಲಿ   ಅಖೀಲ ಭಾರತ   ತುಳು   ಒಕ್ಕೂಟದ   ಅಧ್ಯಕ್ಷ, ಮುಂಬಯಿ ಉದ್ಯಮಿ  ಧರ್ಮಪಾಲ ಯು. ದೇವಾಡಿಗ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು.

Advertisement

ದುಬೈ   ದೇರಾದಲ್ಲಿರುವ   ಕ್ವಿಕ್‌ಬೈಟ್‌ ಸಮಿತಿ ರೆಸ್ಟೋರೆಂಟ್‌ ಸಭಾಂಗಣದಲ್ಲಿ ಸೆ. 28 ರಂದು ಬೆಳಗ್ಗೆ ನಡೆದ ಸಭೆಯ   ಅಧ್ಯಕ್ಷತೆಯನ್ನು  ಸರ್ವೋತ್ತಮ ಶೆಟ್ಟಿ ಅವರು   ವಹಿಸಿ ಮಾತನಾಡಿ,  ಸಮ್ಮೇಳನದ   ಪೂರ್ವ ತಯಾರಿಯ   ಬಗ್ಗೆ   ಸಂಪೂರ್ಣ  ಮಾಹಿತಿಯನ್ನು   ನೀಡಿ ಎಲ್ಲರ ಸಹಕಾರ ಬಯಸಿದರು.

ವಿಶ್ವ ತುಳು ಸಮ್ಮೇಳನದ ಪೂರ್ವ ತಯಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಪಾಲ   ದೇವಾಡಿಗರು, ಸಮ್ಮೇಳನದ  ಯಶಸ್ಸಿಗೆ ಶುಭವನ್ನು ಹಾರೈಸಿದರು. ಸಮ್ಮೇಳನದ ಪೂರ್ಣ ವಿವರಗಳನ್ನು ಈವೆಂಟ್‌ ಮ್ಯಾನೇಜರ್‌  ಶೋಧನ್‌  ಪ್ರಸಾದ್‌  ವಿವರವಾಗಿ  ಸಭೆಯ  ಮುಂದಿಟ್ಟರು.

ವಿಶ್ವ ತುಳು ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆ ಗೊಳ್ಳಲಿರುವ ವಿಶ್ವ ತುಳು ಐಸಿರಿ   ಸ್ಮರಣ   ಸಂಚಿಕೆ   ಪ್ರಧಾನ ಸಂಪಾದಕರಾದ  ಬಿ. ಕೆ.ಗಣೇಶ್‌  ರೈ ಅವರು   ಸ್ಮರಣ ಸಂಚಿಕೆಯ ಕಾರ್ಯಯೋಜನೆಯ ಬಗ್ಗೆ ವಿವರಿಸಿ, ವಿಶ್ವ ತುಳು ಸಮ್ಮೇಳನ ದುಬಾಯಿ ಅರಬ್‌   ಸಂಯುಕ್ತ ಸಂಸ್ಥಾನದಲ್ಲಿ   ಪ್ರಥಮ ಬಾರಿಗೆ   ಆಯೋಜಿಸಲಾಗಿರುವ ಅನಿವಾಸಿ ತುಳುವರ   ಬƒಹತ್‌  ಸಮಾವೇಶ. ಸಾಗರೋತ್ತರ ತುಳುವರು, ಕರ್ನಾಟಕ   ತುಳು ಸಾಹಿತ್ಯ  ಅಕಾಡೆಮಿ   ಮತ್ತು ಅಖೀಲಭಾರತ ತುಳು ಒಕ್ಕೂಟ ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ  ಶ್ರೀ ಕ್ಷೇತ್ರ   ಧರ್ಮಸ್ಥಳದ   ಧರ್ಮಾಧಿಕಾರಿ  ಪದ್ಮ ವಿಭೂಷಣ   ಪುರಸ್ಕೃತ ಪರಮಪೂಜ್ಯ  ಡಾ|  ಡಿ. ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ  ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷರಾಗಿ   ಅಬುಧಾಬಿ ಎನ್‌ಎಂಸಿ ಸಮೂಹ  ಸಂಸ್ಥೆಯ ಸ್ಥಾಪಕರು ಮತ್ತು ಕಾರ್ಯಾಧ್ಯಕ್ಷ ಪದ್ಮಶ್ರೀ ಪುರಸ್ಕೃತ ಡಾ| ಬಿ. ಆರ್‌. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ತುಳು   ಜಾನಪದ   ನೃತ್ಯ   ಸ್ಪರ್ಧೆ   ನಡೆಯಲಿದ್ದು   ಗಲ್ಫ್ ರಾಷ್ಟ್ರಗಳಾದ   ಮಸ್ಕತ್‌,   ಬಹರೇನ್‌, ಕತಾರ್‌,   ಕುವೇಟ್‌,  ಸೌದಿ ಅರೇಬಿಯಾ, ಒಮಾನ್‌ ಮತ್ತು ಯು.ಎ.ಇ.ಯ ಹಲವು ಜಾನಪದ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.

Advertisement

ಯಕ್ಷ ನಾಟ್ಯ ವೈಭವ, ಗಾನ  ವೈಭವ, ಹಾಸ್ಯ  ವೈಭವ  ಮತ್ತು   ಯಕ್ಷಗಾನ   ತಾಳ ಮದ್ದಳೆ,   ತುಳು   ರಸ   ಮಂಜರಿ,  ತುಳು ಸಾಹಿತ್ಯ ಗೋಷ್ಠಿ, ತುಳು   ಕೋಡೆ-ಇನಿ-ಎಲ್ಲೆ, ದೈವಾರಾಧನೆ, ನಾಗಾರಾಧನೆ ಮತ್ತು ಭೂತಾರಾಧನೆಯ ಬಗ್ಗೆ ಚರ್ಚೆ ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳು ರಂಗ ಭೂಮಿ ಮತ್ತು ಚಲನಚಿತ್ರ ಗೋಷ್ಠಿ  ಹೊರನಾಡ  ತುಳು  ಸಂಘಟನೆಗಳ ಅಧ್ಯಕ್ಷರ ಗೋಷ್ಠಿ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next