Home

ವಿಶ್ವ ಹುಲಿ ದಿನ

Home Stories
ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ.
Home Stories
ವಿಸ್ಮಯ ಹುಟ್ಟಿಸುವ ಹುಲಿ ಭೂಮಿಯ ಮೇಲಿನ ಅತ್ಯಂತ ಅಪ್ರತಿಮ ಪ್ರಾಣಿಗಳಲ್ಲಿ ಒಂದಾಗಿದೆ. 20ನೇ ಶತಮಾನದ ಆರಂಭದಿಂದಲೂ ವಿಶ್ವದಾದ್ಯಂತ ಹುಲಿಗಳ ಸಂಖ್ಯೆ ತೀವ್ರವಾಗಿ ಕುಸಿಯಿತು. ಆದರೆ ಈಗ ಸಂರಕ್ಷಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಜುಲೈ 29ರಂದು ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಮುನ್ನ ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದ ನಂತರ ವಿಶ್ವದ ಒಟ್ಟು ಹುಲಿ ಗಣತಿಗೆ ಹೋಲಿಸಿದರೆ ಶೇ.70ರಷ್ಟು ಹುಲಿ ಸಂತತಿ ಭಾರತದಲ್ಲೇ ಇದೆ..
Home Stories
ಹುಲಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2010ರ ಜುಲೈ 29ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ರಷ್ಯಾದ ಸೆಂಟ್ ಪೀಟರ್ ಬರ್ಗ್‍ನಲ್ಲಿ ಆಚರಿಸಲಾಯಿತು. ಅಳಿವಿನಂಚಿಗೆ ತಲುಪಿದ್ದ ಹುಲಿಗಳ ಸಂರಕ್ಷಣೆಗೆ ಮುಂದಾದ ಸರ್ಕಾರ ಅವುಗಳ ಸಂರಕ್ಷಣೆಗೆ ಪಣತೊಟ್ಟಿದ್ದು, 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ತೀರ್ಮಾನಿಸಿತ್ತು. ಈ ಯೋಜನೆಯನ್ನು ಸರ್ಕಾರ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಿದೆ.
Home Stories
ವಿಶ್ವದ ಹುಲಿ ಸಂಖ್ಯೆಯು 70% ಭಾರತದಲ್ಲಿದೆ. 524 ಸಂಖ್ಯೆಯ ಹುಲಿಗಳೊಂದಿಗೆ ಕರ್ನಾಟಕವು ಭಾರತದಲ್ಲಿ 2ನೇ ಅತಿ ಹೆಚ್ಚು ಹುಲಿಗಳಿಗೆ ನೆಲೆಯಾಗಿದೆ.
Home Stories
ದೇಶದಲ್ಲಿ ಹುಲಿಗಳ ಸಂಖ್ಯೆಯು 2014 ರಲ್ಲಿ 1,400 ರಿಂದ 2019 ರಲ್ಲಿ 2,967 ಕ್ಕೆ ಏರಿದೆ. ಮಧ್ಯಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ 526 ಹುಲಿಗಳಿವೆ .ಕರ್ನಾಟಕದಲ್ಲಿ 524 ಮತ್ತು ಉತ್ತರಾಖಂಡದಲ್ಲಿ 442 ಹುಲಿಗಳಿವೆ.
Home Stories
ಕಳೆದ ಶತಮಾನದಲ್ಲಿ, ಆವಾಸಸ್ಥಾನ ನಷ್ಟ ಮತ್ತು ವನ್ಯಜೀವಿ ಕಳ್ಳಸಾಗಣೆಯಿಂದಾಗಿ ಹುಲಿಗಳ ಸಂಖ್ಯೆಯು ಶೇ. 95% ರಷ್ಟು ಕ್ಷೀಣಿಸಿತ್ತು. ಆದರೆ ಈಗ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಸುಮಾರು ಎಂಬತ್ತು ಸಾವಿರವಿದ್ದ ಹುಲಿಗಳ ಸಂಖ್ಯೆ ಒಂದೆರಡು ಸಾವಿರಕ್ಕೆ ಕುಸಿಯಿತು.
Home Stories
1972ರ ವನ್ಯಜೀವಿ ಕಾಯ್ದೆ ಬಂದ ನಂತರ ಹುಲಿಗಳನ್ನು ಉಳಿಸುವ ಸಲುವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಯೋಜನೆ ಜಾರಿಗೆ ಬಂತು, ಈ ಯೋಜನೆ ಹುಲಿ ಸಂರಕ್ಷಣೆಗೆ ಬಲವನ್ನು ನೀಡಿತು. ಜಗತ್ತಿನ 13 ದೇಶಗಳಲ್ಲಿ ಮಾತ್ರ ಹುಲಿ ಸಂತತಿ ಬರುತ್ತದೆ. ಒಟ್ಟು 6 ಜಾತಿಯ ಹುಲಿಗಳಿದ್ದು, ಹೆಚ್ಚು ಹುಲಿಗಳು ಏಷ್ಯಾಖಂಡದಲ್ಲಿಯೇ ಕಂಡು ಬರುತ್ತವೆ.
Home Stories
ಭಾರತವು 50 ಹುಲಿ ಸಂರಕ್ಷಿತ ಅಭಯಾರಣ್ಯಗಳನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ 25ಹುಲಿ ಮೀಸಲು ಕ್ಷೇತ್ರಗಳನ್ನು ರಚಿಸಲಾಗಿದ್ದು ಇವುಗಳ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆಯನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.
Home Stories
ಹುಲಿ ಪ್ಯಾಂಥೆರಾ ವಂಶಕ್ಕೆ ಸೇರಿದ 4 ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ಹುಲಿಯು 4 ಮೀ. ವರೆಗೆ (13 ಅಡಿ) ಉದ್ದವನ್ನು ಹಾಗೂ 300 ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ಚುರುಕುತನ ಮತ್ತು ಅಪಾರ ಸಾಮರ್ಥ್ಯ ಸಮ್ಮಿಳಿತವಾದ ಪ್ರಾಣಿಯಾದ ಹುಲಿಗೆ ಭಾರತದಲ್ಲಿ ರಾಷ್ಟ್ರ ಪ್ರಾಣಿ ಎಂಬ ಗೌರವಾನ್ವಿತ ಸ್ಥಾನ ದೊರಕಿದೆ.