ದೊಡ್ಡಬಳ್ಳಾಪುರ: ರಂಗಭೂಮಿ ಪ್ರಭಾವಶಾಲಿ ಮಾಧ್ಯಮವಾಗಿದ್ದು, ನಮ್ಮ ಸಂಸ್ಕೃತಿ ಪರಂಪರೆಗಳನ್ನು ಬಿಂಬಿಸುವಲ್ಲಿ ಪೌರಾಣಿಕ ನಾಟಕಗಳುಮಹತ್ತರ ಪಾತ್ರ ವಹಿಸುವಂತೆ, ಸಾಮಾಜಿಕಸ್ಥಿತಿಗತಿಗಳನ್ನು ಸಾರುವ ಸಾಮಾಜಿಕ ರಂಗಪ್ರಯೋಗಗಳಿಗೆ ಒತ್ತು ನೀಡಬೇಕಿದೆ ಎಂದುಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್. ಪ್ರಭುದೇವ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ಸಂಘದ ಕಾರ್ಯಾಲಯದಲ್ಲಿನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಹಲಾವರು ಯೋಜನೆಗಳು, ಸಾಮಾಜಿಕ ಸಮಸ್ಯೆಗಳನ್ನುಎ.ಎಸ್ ಮೂರ್ತಿ ಅವರು ಬೀದಿ ನಾಟಕಗಳಮೂಲಕ ಪ್ರಚುರಪಡಿಸಿದರು.
ಮಾಸ್ಟರ್ ಹಿರಣ್ಣಯ್ಯ ಲಂಚಾವತಾರ ಮೊದಲಾದ ನಾಟಕಗಳ ಮೂಲಕ ರಾಜಕೀಯ ವಿಡಂಬನಾತ್ಮಕ ನಾಟಕಗಳನ್ನು ತೆರೆಗೆ ತಂದು, ಜನರನ್ನು ಜಾಗೃತಿ ಮೂಡಿಸಿದರು. ಇತ್ತೀಚೆಗೆ ವೃತ್ತಿ ರಂಗಭೂಮಿಯೂ ಮರೆಯಾಗುತ್ತಿದ್ದು, ರಂಗಭೂಮಿಗೆ ಹೊಸ ಆಯಾಮ ನೀಡುವಲ್ಲಿ ರಂಗಭೂಮಿ ದಿನಾಚರಣೆ ವೇದಿಕೆಯಾಗಬೇಕಿದೆ ಎಂದರು.
ದತ್ತಾತ್ರೇಯ ಆಶ್ರಮದ ಆನಂದ ಭಾರತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಸಂಕಷ್ಟಗಳಲ್ಲಿಯೂ ಸಹ ಕಲಾವಿದರು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ನಿವೃತ್ತ ಯೋಧ ಶ್ರೀನಿವಾಸ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ರಂಗಭೂಮಿ ದಿನಾಚರಣೆ ನೆನಪಿಗಾಗಿ ಕಾರ್ಯಾಲಯದ ಮುಂದೆ ಸಸಿಗಳನ್ನು ನೆಡಲಾಯಿತು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ತಾಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎಸ್.ರಾಮಮೂರ್ತಿ,ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಜಿ.ಮುನಿರಾಜು, ಎಚ್.ವೀರೇಗೌಡ, ಖಜಾಂಚಿ ಎಚ್.ಮುನಿಪಾಪಯ್ಯ, ಹಿರಿಯ ಕಲಾವಿದರಾದ ಎಂ.ವೆಂಕಟರಾಜು, ಎನ್.ವೆಂಕಟೇಶ್, ನಾಟಕ ನಿರ್ದೇಶಕರಾದ ಟಿ.ವಿ. ಕೃಷ್ಣಪ್ಪ, ಬಸವರಾಜಯ್ಯ, ಅನಿಕೇತನ ಟ್ರಸ್ಟ್ ಕಾರ್ಯದರ್ಶಿ ಡಿ.ಶ್ರೀಕಾಂತ ಮೊದಲಾದವರು ಭಾಗವಹಿಸಿದ್ದರು.