ಕುಂದಾಪುರ: ರಂಗದ ಮೇಲಿನ ಘಟನಾವಳಿಗಳಿಗೂ ಪ್ರೇಕ್ಷಕರಿಗೂ ನಡುವೆ ಒಂದು ಅಂತರವಿರುವುದು ಅತ್ಯಗತ್ಯ. ರಂಗದ ಮೇಲೆ ನಡೆಯುತ್ತಿರುವುದು ನಾಟಕ ತಾವು ಪ್ರೇಕ್ಷಕರು ಎಂಬ ಅರಿವಿದ್ದರೆ ಮಾತ್ರ ನಾಟಕವನ್ನು ಮತ್ತು ಆ ಮೂಲಕ ಜೀವನವನ್ನು ವಿಮರ್ಶಕ ದೃಷ್ಟಿಯಿಂದ ನೋಡುವುದು ಸಾಧ್ಯ. ಭಾವಾತಿರೇಕದಿಂದ ವಿಚಾರಶಕ್ತಿಯನ್ನು ನಿಶ್ಚೇತನಗೊಳಿಸುವುದು ನಾಟಕ ಕಲೆಯ ಉದ್ದೇಶವಲ್ಲ. ನಾಟಕದ ಸದ್ಯದ ಗುರಿ ಮನೋರಂಜನೆ, ಅಂತಿಮ ಗುರಿ ಜೀವನ ವಿಮರ್ಶೆ ಎಂದು ಉಡುಪಿಯ ಖ್ಯಾತ ಚಿಂತಕ, ವಿಮರ್ಶಕ ಜಿ. ರಾಜಶೇಖರ ಅವರು ಹೇಳಿದರು.
ಅವರು ಸಮುದಾಯ ಸಾಂಸ್ಕೃತಿಕ ಸಂಘಟನೆ (ರಿ.) ಕುಂದಾಪುರ ಮತ್ತು ರೋಟರಿ ಸನ್‌ರೈಸ್ ಕುಂದಾಪುರ ಜಂಟಿಯಾಗಿ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಬಟೋìಲ್ಟ್ ಬ್ರೆಕ್ಟ್ ಅವರ ಗೆಲಿಲಿಯೋ ನಾಟಕ ಮತ್ತು ವೈಚಾರಿಕ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು.
ಅಂದು ಫ್ರಾನ್ಸಿನ ಪ್ರಸಿದ್ಧ ರಂಗಭೂಮಿ ಹಾಗೂ ಚಲನಚಿತ್ರ ನಟಿ ಇಸಾಬೆಲ್ಲಾ ಹಾಪರ್ಟ್ ವಿಶ್ವ ರಂಗಭೂಮಿ ದಿನದಂದು ನೀಡಿದ ಸಂದೇಶವನ್ನು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಉಪನ್ಯಾಸಕ ವಿನಾಯಕ ಎಸ್ ಎಂ. ಅವರು ವಾಚಿಸಿದರು.ಅನಂತರ ಸಮುದಾಯದ ಉಪಾಧ್ಯಕ್ಷ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಸಮು ದಾಯದ ಸಂಗಾತಿಗಳು ಅಭಿನಯಿಸಿದ ಬಟೋìಲ್ಟ್ ಬ್ರೆಕ್ಟ್ ಅವರ ಪಾಷಂಡಿಯ ಕೋಟು ಕಥೆಯ ರಂಗರೂಪವನ್ನು ಪ್ರದರ್ಶಿಸಲಾಯಿತು.
ರೋಟರಿ ಸನ್‌ರೈಸ್ ಅಧ್ಯಕ್ಷ ನರಸಿಂಹ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವಕರ್ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ಸನ್‌ರೈಸ್ ಕಾರ್ಯದರ್ಶಿ ದಿನಕರ ಶೆಟ್ಟಿ ವಂದಿಸಿ ದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೆ„ಂದೂರ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸನ್‌ರೈಸ್ ಸದಸ್ಯರು, ಸಮುದಾಯದ ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.