Advertisement

ಡೆಲ್ಲಿ ಹಾಫ್ ಮ್ಯಾರಥಾನ್‌: ಉಗಾಂಡದ ಜೇಕಬ್‌ ಕಿಪ್ಲಿಮೊ ಸ್ಪರ್ಧೆ

10:32 PM Sep 15, 2022 | Team Udayavani |

ಹೊಸದಿಲ್ಲಿ: ವಿಶ್ವದಾಖಲೆಯ ಹಾಫ್ ಮ್ಯಾರಥಾನ್‌ ಓಟಗಾರ, ಉಗಾಂಡದ ಜೇಕಬ್‌ ಕಿಪ್ಲಿಮೊ ಡೆಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮ್ಯಾರಥಾನ್‌ ಅ. 16ರಂದು ನಡೆಯಲಿದೆ. ಇದರೊಂದಿಗೆ ಕಿಪ್ಲಿಮೊ ಮೊದಲ ಸಲ ಭಾರತದ ಮ್ಯಾರಥಾನ್‌ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಂತಾಗುತ್ತದೆ.

Advertisement

21 ವರ್ಷದ ಜೇಕಬ್‌ ಕಿಪ್ಲಿಮೊ 2020ರಲ್ಲಿ ಹಾಫ್ ಮ್ಯಾರಥಾನ್‌ ವಿಶ್ವದಾಖಲೆ ನಿರ್ಮಿಸಿದ್ದರು. ಕಳೆದ ವರ್ಷ ಲಿಸºನ್‌ ಕೂಟದಲ್ಲಿ 57:31 ನಿಮಿಷಗಳ ಸಾಧನೆಯೊಂದಿಗೆ ವಿಶ್ವದಾಖಲೆಯನ್ನು ತಿದ್ದಿ ಬರೆದಿದ್ದರು.

ಈ ವರ್ಷ ಪ್ರಚಂಡ ಫಾರ್ಮ್ ಕಾಯ್ದುಕೊಂಡಿರುವ ಕಿಪ್ಲಿಮೊ ಯುಎಇಯಲ್ಲಿ ನಡೆದ ಆರ್‌ಎಕೆ ಹಾಫ್ ಮ್ಯಾರಥಾನ್‌, ಕಳೆದ ರವಿವಾರ ಗ್ರೇಟ್‌ ನಾರ್ತ್‌ ರನ್‌ ಹಾಫ್ ಮ್ಯಾರಥಾನ್‌ ಸ್ಪರ್ಧೆಗಳೆರಡರಲ್ಲೂ ಚಾಂಪಿಯನ್‌ ಆಗಿದ್ದರು.

ಡೆಲ್ಲಿ ಹಾಫ್ ಮ್ಯಾರಥಾನ್‌ ದಾಖಲೆ ಇಥಿಯೋಪಿಯಾದ ಆ್ಯಮ್ಢೇವರ್ಕ್‌ ವೇಲೆಗ್‌° ಹೆಸರಲ್ಲಿದೆ. 2020ರಲ್ಲಿ ಅವರು 58.53 ನಿಮಿಷಗಳಲ್ಲಿ ಓಟ ಪೂರೈಸಿದ್ದರು. ಕಿಪ್ಲಿಮೊ ಇದನ್ನು ಮುರಿಯುವ ವಿಶ್ವಾಸ ಹೊಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next