Advertisement

ಅವಸರದ ಬದುಕಿನ ನಡುವೆ “ಉತ್ಸಾಹದ ಓಟ’

01:37 AM May 16, 2022 | Team Udayavani |

ಬೆಂಗಳೂರು: ದೇಶಕ್ಕಾಗಿ ಮತ್ತು ಜೀವನೋತ್ಸಾಹಕ್ಕಾಗಿ ಪ್ರತಿಷ್ಠಿತ ಟಿಸಿಎಸ್‌ ಸಂಸ್ಥೆ ಹಮ್ಮಿಕೊಂಡಿದ್ದ ವರ್ಲ್ಡ್ ಪ್ರೀಮಿಯರ್‌ 10ಕೆ ರನ್‌’ಗೆ ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

Advertisement

ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲರ ಜೀವನದಲ್ಲಿ ಈ ಓಟ ಹೊಸ ಚೈತನ್ಯ ತರಲಿದೆ. ಅನೇಕ ಸರಕಾರೇತರ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮ ಸಾಮಾಜಿಕ ಕೆಲಸಕ್ಕೆ ದೇಣಿಗೆ ಸಂಗ್ರಹಕ್ಕೆ ಟಿಸಿಎಸ್‌ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಂಠೀರವ ಕ್ರೀಡಾಂಗಣದಿಂದ ಹೊರಟ ಮ್ಯಾರಥಾನ್‌ ಓಟ, ವಿಧಾನಸೌಧ, ಕಬ್ಬನ್‌ ಉದ್ಯಾನ ಸೇರಿದಂತೆ ನಗರದ ವಿವಿಧೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಕ್ರೀಡಾಪಟುಗಳು, ಅಂಗವಿಕಲರು, ಸೆಲಿಬ್ರಿಟಿಗಳು, ಜನಪ್ರತಿನಿಧಿಗಳು ಸೇರಿದಂತೆ 17 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು. ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿ‌ನಿ, ಉದ್ದ ಜಿಗಿತ ಪಟು ಅಂಜು ಬಾಬಿ ಜಾರ್ಜ್‌ ಭಾಗವಹಿಸುವ ಮೂಲಕ ಗಮನಸೆಳೆದರು.

ಮನರಂಜನೆಗೆ ವಯಸ್ಸಿನ ಮಿತಿ ಇಲ್ಲ; ಇಲ್ಲಿ ವಯಸ್ಸು ಒಂದು ಸಂಖ್ಯೆ ಅಷ್ಟೇ’, ಬದುಕು ಬೇಕು; ಆತ್ಮಹತ್ಯೆ ಬೇಡ’, ನಾನು ಬದುಕನ್ನು ಪ್ರೀತಿಸುತ್ತೇನೆ; ಆತ್ಮಹತ್ಯೆ ನಿಲ್ಲಲಿ’, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಫ‌ಲಕಗಳನ್ನು ಹಿಡಿದ ಹಿರಿಯರು, ಯುವಕರು ವಿವಿಧ ಭಂಗಿಗಳಲ್ಲಿ ಗಮನಸೆಳೆದರು. ಮಾರ್ಗದುದ್ದಕ್ಕೂ ನೀರು ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮೂರ್‍ನಾಲ್ಕು ದಿನ ನಿರಂತರ ಮಳೆ ಇದ್ದುದರಿಂದ ಬೇಸಿಗೆಯಲ್ಲೂ ಚುಮುಚುಮು ಚಳಿ ಇತ್ತು. ರಕ್ಷಣೆಗಾಗಿ ಜಾಕೆಟ್‌ಗಳನ್ನು ಹಾಕಿಕೊಂಡು ಜನ ಅತಿ ಉತ್ಸಾಹದಿಂದ ಭಾಗವಹಿಸಿದ್ದರು.ಇದರಿಂದ ಜೀವನೋತ್ಸಾಹಕ್ಕಾಗಿ ಮಾಡಿದ 10ಕೆ’ ಓಟವು ಉದ್ದೇಶಕ್ಕೆ ಅನ್ವರ್ಥಕವಾಗಿತ್ತು.

ಸಚಿವರಾದ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ, ಡಾ| ನಾರಾಯಣಗೌಡ, ವಿಧಾನ ಪರಿಷತ್‌ ಸದಸ್ಯ ಕೆ. ಗೋವಿಂದರಾಜು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತಿತರರು ಭಾಗವಹಿಸಿದ್ದರು. ಕೊನೆಯಲ್ಲಿ ಹಲವು ವಿಭಾಗಗಳಲ್ಲಿ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next