Advertisement
ಈ ಹಿನ್ನಲೆಯಲ್ಲಿಯೇ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್‌ಮಿಟನ್ ಆಟಗಾರ್ತಿ ಸೈನಾ ನೆಹ್ವಾಲ್, ತಾವು ಮೊದಲ ಬಾರಿ ಪದಕ ಗೆದ್ದ ನೆನಪನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
‘2008ನೇ ಇಸವಿ ನನ್ನ ಜೀವಮಾನದಲ್ಲೇ ಅತ್ಯಂತ ವಿಶೇಷ ಸ್ಥಾನ ಪಡೆದುಕೊಂಡ ಘಟ್ಟವಾಗಿದ್ದು, ನನ್ನ ಬದಕನ್ನು ಬದಲಾಯಿಸಿದ ವರ್ಷವಾಗಿದೆ. ಒಲಿಂಪಿಕ್ ಪದಕ ಗೆದ್ದ ಬಳಿಕ ನನ್ನ ಜೀವನದ ದಿಕ್ಕೆ ಬದಲಾಗಿದ್ದು, 2012ರಲ್ಲಿ ಮತ್ತೂಂದು ಪದಕ ಮುಡಿಗೇರಿದ ಕ್ಷಣ ಇತಿಹಾಸ ಸೃಷ್ಟಿಯಿಸಿದ ಭಾವವಾಗಿದೆ. ಮುಂಬರುವ ದಿನಗಳಲ್ಲಿ ಪದಕದ ಬಣ್ಣವನ್ನು ಮತ್ತೂಮ್ಮೆ ಬದಲಾಯಿಸಲು ಕಠಿಣ ಶ್ರಮ ಪಡುತ್ತಿದ್ದೇನೆ” ಎಂದು ಸುಶೀಲ್ ಕುಮಾರ್ ಟ್ವಿಟ್‌ರ್ ಮಾಡಿದ್ದಾರೆ.
Related Articles
ಇನ್ನು ಸೈನಾ ನೆಹ್ವಾಲ್ ಕೂಡ ತಾವು ಮೊದಲ ಬಾರಿ ಪದಕ ಗೆದ್ದ ಕ್ಷಣಗಳನ್ನು ಮೆಲಕು ಹಾಕುತ್ತಿದ್ದು, ‘2012ರ ಒಲಿಂಪಿಕ್ ನಲ್ಲಿ ಕಂಚಿನ ಪದಕ ಗೆದ್ದಿದ್ದು ನನ್ನ ವೃತ್ತಿ ಜೀವನದಲ್ಲೇ ಅತ್ಯಮೂಲ್ಯವಾದ ಕ್ಷಣ. ಇದು, 1999ರಲ್ಲಿ ನಾನು ಬ್ಯಾಡ್ಮಿಂಟನ್‌ಗೆ ಸೇರಿದ್ದಾಗಿನಿಂದಲೂ ನನ್ನ ಹಾಗೂ ನನ್ನ ಪೋಷಕರ ಕನಸಾಗಿತ್ತು. ಪರಿಶ್ರಮ, ವಿಶ್ವಾಸ, ಕೆಲವು ತ್ಯಾಗಗಳೇ ಈ ಯಶಸ್ಸು ‘ ಎಂದು ಟ್ವೀಟ್ ಮಾಡಿದ್ದಾರೆ.
Advertisement