ಮನಸ್ಸಿದ್ದರೆ ಮಾರ್ಗ ಎಂಬ ಹಿರಿಯ ಮಾತಿನಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಗುಟ್ಟಿತ್ತು. ದೈಹಿಕವಾಗಿ ಸದೃಢವಾಗಿ ಆರೋಗ್ಯಯುತವಾಗಿದ್ದರೂ ಮನಸ್ಸು ದುರ್ಬಲವಾಗಿದ್ದರೆ ನೂರಾರು ಕಾಯಿಲೆಗಳು ಬರುವ ಸಾಧ್ಯತೆಯಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಈ ದಿನದ ಉದ್ದೇಶ ಮಾನಸಿಕ ಆರೋಗ್ಯದ ಅರಿವು ಮತ್ತು ಜಾಗೃತಿ ಮೂಡಿಸುವುದಾಗಿದೆ. 1992ರಲ್ಲಿ ಮೊದಲ ಬಾರಿಗೆ ವರ್ಲ್ಡ್ ಫೆಡರೇಷನ್ ಫಾರ್ ಮೆಂಟಲ್ ಹೆಲ್ತ್ ಮಾನಸಿಕ ಆರೋಗ್ಯ ದಿನವನ್ನು ಆಚರಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಾನಸಿಕ ಆರೋಗ್ಯವೆಂದರೆ ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಪೂರ್ಣವಾಗಿ ಸ್ವಸ್ಥವಾಗಿರುವುದು.
ಜಗತ್ತಿನಾದ್ಯಂತ ಇಂದು ಲಕ್ಷಾಂತರ ಜನ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗಂಭೀರ ಪ್ರಮಾಣದ ಮಾನಸಿಕ ಸಮಸ್ಯೆ ಮಾತ್ರವಲ್ಲ ಅಂಕಿ ಅಂಶಗಳ ಪ್ರಕಾರ 4ರಲ್ಲಿ ಒಬ್ಬರಾದರೂ ಖಿನ್ನತೆ, ಆಂತಕದಂತಹ ಮಾನಸಿಕ ತೋಳಲಾಟವನ್ನು ಅನುಭವಿಸುತ್ತಿರುತ್ತಾರೆ. ಅನೇಕರಿಗೆ ತಾವು ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ ಅನ್ನುವ ಅರಿವೇ ಇರುವುದಿಲ್ಲ. ಈ ಕಾರಣಕ್ಕಾಗಿ ಈ ದಿನದಂದು ಜಾಗೃತಿ ಜತೆಗೆ ಇವುಗಳ ಕುರಿತಾದ ಶಿಕ್ಷಣವನ್ನು ನೀಡಲಾಗುತ್ತದೆ.
ಇದನ್ನೂ ಓದಿ:ಅಸಮಾನ ಸಮಾಜದಲ್ಲಿ ಮಾನಸಿಕ ಆರೋಗ್ಯದ ಸಮಾನತೆಯ ಕಡೆಗೆ
ಸಾರ್ವಜನಿಕ ಆರೋಗ್ಯ ವಲಯದಲ್ಲಿ ಮಾನಸಿಕ ಆರೋಗ್ಯ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಂದು ಮಿಲಿಯನ್ ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯಿಂದಾಗಿ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಮಾನಸಿಕ ಕಾಯಿಲೆಗಳಿಂದ ಮದ್ಯವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್ ಪರಿಸ್ಥಿತಿ ಜನರ ಮಾನಸಿಕ ಆರೋಗ್ಯದ ಮೇಲೆ ಮತ್ತುಷ್ಟು ಪರಿಣಾಮ ಬೀರಿದೆ.
ಈ ಬಾರಿಯ ಥೀಮ್ ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ: ಕಡಿಮೆ ಮತ್ತು ಮಧ್ಯಮ ಆದಾಯ (ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ) ದೇಶಗಳಲ್ಲಿ ಮಾನಸಿಕ ಆರೋಗ್ಯದ ಮೇಲಿನ ಹೂಡಿಕೆಯಲ್ಲಿ ಅಸಮಾನತೆ ತುಂಬಿದೆ.
ಅನೇಕ ದೇಶಗಳು ತಮ್ಮ ಆರೋಗ್ಯ ಬಜೆಟ್‌ನಲ್ಲಿ ಮಾನಸಿಕ ಆರೋಗ್ಯಕ್ಕೆ ಬಜೆಟ್ ಮೀಸಲು ಇಡುವುದಿಲ್ಲ. ಉಳ್ಳವರು ಉತ್ತಮ ಚಿಕ್ಸಿತೆ ಪಡೆಯುತ್ತಾರೆ. ಇಂತಹ ತಾರತಮ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಈ ಬಾರಿ ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಎಂಬ ಥೀಮ್ ಇಡಲಾಗಿದೆ. ಈ ಬಾರಿಯ ಅಭಿಯಾನದಲ್ಲಿ “ಅಸಮಾನ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ‘ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಮಾನಸಿಕ ಆರೋಗ್ಯ ಅಸಮಾನತೆಯನ್ನು ಶಾಶ್ವತಗೊಳಿಸುವ ಸಮಸ್ಯೆಗಳ ಮೇಲೆ ಗಮನ ಹರಿಸಿ ಅವುಗಳನ್ನು ಕೊನೆಗೊಳಿಸುವುದಾಗಿದೆ.
ಆರೋಗ್ಯಕರ ಮನಸ್ಸಿನಲ್ಲಿ ಗಟ್ಟಿಯಾದ ದೇಹ ಎಂಬ ಮಾತಿದೆ. ನಮ್ಮ ಎಷ್ಟು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಮಾನಸಿಕ ಆರೋಗ್ಯದಲ್ಲಾದ ಏರುಪೇರುಗಳು ಕಾರಣವಾಗಿರಬಹುದು. (ಕೆಲವರಿಗೆ ಅನೇಕ ವೈದ್ಯರ ಬಳಿ ತೆರಳಿದರು, ಸ್ಕ್ಯಾನಿಂಗ್ ಇತ್ಯಾದಿಗಳನ್ನು ಮಾಡಿಸಿದರು ತಮ್ಮ ದೈಹಿಕ ಆರೋಗ್ಯ ಸಮಸ್ಯೆ ತಿಳಿಯುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಮನೋವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಂಡವರು ಇದ್ದಾರೆ.)
ಮನೋರೋಗಗಳಲ್ಲಿ ಎರಡು ವಿಧ:
- ಮೈನರ್ ಕಾಯಿಲೆಗಳಾದ ಆತಂಕ, ಗಾಬರಿ, ಖಿನ್ನತೆ
- ಮತಿಭ್ರಾಂತಿ ಅಥವಾ ಸ್ಕಿಜೋಫ್ರಿನಿಯಾ
ಮನೋವೈದ್ಯರ ಸಂಖ್ಯೆ ಕಡಿಮೆ
ಭಾರತದಲ್ಲಿ ಮನೋವೈದ್ಯರ ಸಂಖ್ಯೆ ಎಂಟರಿಂದ ಹತ್ತು ಸಾವಿರ ದಾಟಿಲ್ಲ. ಕರ್ನಾಟಕದಲ್ಲೂ ಸಾವಿರದ ಒಳಗಡೆ ಮನೋವೈದ್ಯರು ಇದ್ದಾರೆ.
ಮಾನಸಿಕ ಆರೋಗ್ಯಕ್ಕೆ ವಿಮೆ
ಆರೋಗ್ಯ ವಿಮೆ ಯೋಜನೆಗಳಲ್ಲಿಯೂ ಮಾನಸಿಕ ಆರೋಗ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೆಚ್ಚಿನ ಎಲ್ಲ ಆರೋಗ್ಯ ವಿಮೆಗಳು ದೈಹಿಕ ಆಯೋಗ್ಯ ಸಮಸ್ಯೆಗಳನ್ನು ಮಾತ್ರ ಕವರ್ ಮಡುತ್ತದೆ. 2017ರಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾಯ್ದೆ ಜಾರಿಗೆ ತಂದು ಆರೋಗ್ಯ ವಿಮೆಗಳಲ್ಲಿ ಮಾನಸಿಕ ಆರೋಗ್ಯ ವನ್ನು ಸೇರಿಸಲಾಗಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಎಲ್ಲ ವಿಮೆ ಕಂಪೆನಿಗಳಿಗೆ ಅಕ್ಟೋಬರ್ 1,2020ರ ಒಳಗೆ ಮಾನಸಿಕ ಆರೋಗ್ಯವನ್ನು ವಿಮೆ ಒಳಗೆ ಸೇರಿಸಬೇಕು ಎಂದು ಆದೇಶ ನೀಡಿದೆ.
ಭಾರತದಲ್ಲಿ 2017ರಲ್ಲಿ 197 ಮಿಲಿಯನ್ ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಘಾತಕಾರಿ ಅಂಶವೆಂದರೆ ಇದರಲ್ಲಿ 30ರಿಂದ 49 ವಯೋಮಾನದವರೇ ಹೆಚ್ಚು.
2020 ಆಗಸ್ಟ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ 130 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಾನಸಿಕ ತೊಂದರೆಗಳಿಗೆ ಸಿಲುಕುವ ಜನರಿಗೆ ಮಾನಸಿಕ ಆರೋಗ್ಯ ಸೇವೆಗಳ ಲಭ್ಯತೆ ಕುಂಠಿತವಾಗಿದೆ ಎಂದು ಶೇ. 60ರಷ್ಟು. ಇವರಲ್ಲಿ ಶೇ. 72ರಷ್ಟು ಮಕ್ಕಳು ಮತ್ತು ಹದಿಹರೆಯದವರು, ಶೇ. 70ರಷ್ಟು ವಯೋವೃದ್ಧರು ಮತ್ತು ಪ್ರಸವಪೂರ್ವ ಅಥವಾ ಪ್ರಸವೋತ್ತರ ಆರೈಕೆ ಬಯಸುವ ಶೇ. 61ರಷ್ಟು ಮಹಿಳೆಯರು ಸೇರಿದ್ದಾರೆ.
ಧನ್ಯಶ್ರೀ ಬೋಳಿಯಾರ್