Advertisement

ನಮ್ಮ ತಾಯಿ ಭಾಷೆ ಕುಂದಾಪ್ರ ಕನ್ನಡಕ್ಕೆ ಸಂಬಂಧ ಬೆಸೆಯುವ ವಿಶೇಷ ಶಕ್ತಿ ಇದೆ

10:59 PM Aug 02, 2019 | Sriram |

ತೆಕ್ಕಟ್ಟೆ: ಭಾಷೆ ಒಂದು ಅಭಿವ್ಯಕ್ತಿ ಮಾಧ್ಯಮ. ಒಂದು ಪ್ರದೇಶದ ಭಾಷೆ ಅಲ್ಲಿನ ಸಂಸ್ಕೃತಿಯ ಪ್ರತಿಬಿಂಬ ಎಂದು ಬಹು ಮೇಳಗಳ ಯಜಮಾನರು, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಪಿ. ಕಿಶನ್‌ ಹೆಗ್ಡೆ ಹೇಳಿದರು.

Advertisement

ಆ.1ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಲ್ಯಾಡಿಯ ಯಕ್ಷದೀಪ ಕಲಾ ಟ್ರಸ್ಟ್‌ ಹಾಗೂ ತೆಕ್ಕಟ್ಟೆ ಯಶಸ್ವಿ ಕಲಾವೃಂದದ ಜಂಟಿ ಆಶ್ರಯದಲ್ಲಿ ನಡೆದ ಕುಂದಾಪ್ರ ಕನ್ನಡದ ಚೊಚ್ಚಲ ಯಕ್ಷಗಾನ ನರಹರಿ ಹೊಯ್‌ ಕಯ್‌ ಪ್ರಸಂಗ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಗ್ರಾಮೀಣ ಜನರ ಬದುಕಿನ ಜತೆಗೆ ಅವರಾಡುವ ಭಾಷೆ ಕೂಡಾ ಬೆಸೆದುಕೊಂಡಿರುತ್ತದೆ. ಪ್ರತಿ ಭಾಷೆಗೂ ಅದರದ್ದೇ ಆದ ಸೊಗಡು ಇದ್ದೇ ಇದೆ. ನಮ್ಮ ತಾಯಿ ಭಾಷೆ ಕುಂದಾಪ್ರ ಕನ್ನಡಕ್ಕೆ ಸಂಬಂಧವನ್ನು ಬೆಸೆಯುವ ವಿಶೇಷ ಶಕ್ತಿ ಇದೆ ಎಂದು ಅವರು ತಿಳಿಸಿದರು.

ಕುಂದಾಪುರ ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ಮೊತ್ತಮೊದಲಿಗೆ ಯಕ್ಷಗಾನ ಪ್ರಸಂಗ ರಚಿಸಿದ ಪ್ರಸಂಗಕರ್ತ ಪ್ರಸಾದ ಕುಮಾರ್‌ ಮೊಗೆಬೆಟ್ಟು ಅವರನ್ನು ಗೌರವಿಸಲಾಯಿತು.
ಕನ್ನಡ ಉಪನ್ಯಾಸಕ ಎಚ್‌. ಸುಜಯೀಂದ್ರ ಹಂದೆ ಮಾತನಾಡಿ, ಕುಂದಾಪುರ ಭಾಷೆ ಸತ್ವಯುತವಾಗಿದ್ದು ಅದನ್ನು ನಾಟಕ, ಸಿನೆಮಾಗಳಲ್ಲಿ ಹಾಸ್ಯಪಾತ್ರಗಳಿಗೆ ಮಾತ್ರ ಬಳಸುತ್ತಿರುವುದು ವಿಷಾದನೀಯ, ಇಂತಹ ಗ್ರಾಮೀಣ ಭಾಷೆ ಉಳಿಸುವುದೆಂದರೆ ಪ್ರವಾಹದ ವಿರುದ್ಧವಾಗಿ ಈಜಿದಂತೆ. ಆಧುನಿಕತೆಯ ಭಾರಾಟೆಯ ನಡುವೆಯೂ ನಮ್ಮ ಭಾಷೆ ಬದುಕಿನೊಂದಿಗೆ ಬೆರೆತು ಬೆಳಗಿಸಬೇಕಾದದ್ದು
ಜವಾಬ್ದಾರಿ ಎಂದರು.

ಯಕ್ಷದೀಪ ಕಲಾ ಟ್ರಸ್ಟ್‌ ನ ಅಧ್ಯಕ್ಷ ಸತೀಶ್ಚಂದ್ರ ಕಾಳಾವರ್ಕರ್‌ ಅಧ್ಯಕ್ಷತೆ ವಹಿಸಿದ್ದರು.

Advertisement

ಕುಂದಗನ್ನಡದ ಸಾಹಿತಿ ಪಡುಕರೆ ಉದಯ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸುದರ್ಶನ ಉರಾಳ, ವೆಂಕಟೇಶ ವೈದ್ಯ, ಯಕ್ಷ ದೀಪ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಪ್ರಶಾಂತ ಮಲ್ಯಾಡಿ ಉಪಸ್ಥಿತರಿದ್ದರು.ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಸ್ವಾಗತಿಸಿ, ಅಧ್ಯಾಪಕ ಹೆರಿಯ ಮಾಸ್ಟರ್‌ ಕೊಮೆ ಕಾರ್ಯಕ್ರಮ ನಿರೂಪಿಸಿ,ಯಕ್ಷ ಗುರು ಕೊçಕೂರು ಸೀತಾರಾಮ ಶೆಟ್ಟಿ ವಂದಿಸಿದರು.

ಯಕ್ಷಗಾನ ಪ್ರದರ್ಶನ
ಕೆ.ಪಿ. ಹೆಗಡೆ, ಎಚ್‌. ಪ್ರಸಾದ ಕುಮಾರ್‌, ಲಂಬೋದರ ಹೆಗಡೆ, ದೇವದಾಸ್‌ ರಾವ್‌, ಎನ್‌.ಜಿ. ಹೆಗಡೆ, ಕೃಷ್ಣಾನಂದ ಶೆಣೈ, ಭರತ್‌, ಶಶಿಕಾಂತ ಶೆಟ್ಟಿ, ಉಪ್ಪುಂದ ನಾಗೇಂದ್ರ, ಶಿವಾನಂದ ಕೋಟ, ಸಂಜೀವ ಹೆನ್ನಾಬೆ„ಲ್‌, ಉಪ್ಪುಂದ ಗಣೇಶ್‌, ಭದ್ರಾಪುರ ಶ್ರೀಧರ ಭಂಡಾರಿ, ಹರೀಶ ಜಪ್ತಿ ಮೊದಲಾದವರ ಕೂಡುವಿಕೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕುಂದಾಪುರ ಕನ್ನಡದ ಯಕ್ಷಗಾನ “ನರಹರಿ ಹೊಯ್‌ಕಯ್‌’ ಪ್ರದರ್ಶನಗೊಂಡಿದ್ದು ಎಲ್ಲರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next