Advertisement

ಕುಂದಾಪ್ರ ಕನ್ನಡ ಅಕಾಡೆಮಿ ಸ್ಥಾಪನೆಗೆ ಮುಖ್ಯ ಮಂತ್ರಿಗಳಿಗೆ ಮನವಿ: ಕೋಟ

11:38 PM Aug 02, 2019 | Team Udayavani |

ಕೋಟ: ಇದುವರೆಗೆ ಹಲವು ಬಾರಿ ಕುಂದಾಪ್ರ ಕನ್ನಡದ ಅಕಾಡೆಮಿ ಸ್ಥಾಪನೆಯ ಕೂಗು ಕೇಳಿಬಂದರೂ ಸಮರ್ಪಕ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ರಾಜ್ಯದಲ್ಲಿ ನಮ್ಮದೇ ಪಕ್ಷ ಆಡಳಿತದಲ್ಲಿರುವುದರಿಂದ ಮುಖ್ಯಮಂತ್ರಿಗಳ ಗಮನಸೆಳೆದು ಅಕಾಡೆಮಿ ಸ್ಥಾಪನೆಗೆ ಪ್ರಯತ್ನಿಸುತ್ತೇನೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಆ.1ರಂದು ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟ ಜೆಸಿಐ ಬ್ರಿಗೆಡಿಯರ್‌ ಸಾರಥ್ಯದಲ್ಲಿ , ಪಂಚವರ್ಣ ಯುವಕ ಮಂಡಲ ಕೋಟ, ಗಿಳಿಯಾರು ಯುವಕ ಮಂಡಲ ಗಿಳಿಯಾರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್‌ ಹಂಗಾರಕಟ್ಟೆ ಸಾಸ್ತಾನ, ರೈತಧ್ವನಿ ಸಂಘ ಕೋಟ, ದ.ಸಂ.ಸ ಕೋಟ, ಗೀತಾನಂದ ಫೌಂಡೇಶನ್‌ ಮಣೂರು, ಕಲಾ ಚಿಗುರು ಕಲಾ ತಂಡ ಹಳ್ಳಾಡಿ, ಕಾರಂತ ಪ್ರತಿಷ್ಠಾನ ಕೋಟ, ಗ್ರಾ.ಪಂ. ಕೋಟತಟ್ಟು ಸಹಕಾರದಲ್ಲಿ ಜರಗಿದ ವಿಶ್ವ ಕುಂದಾಪ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕುಂದಾಪ್ರ ಕನ್ನಡದ ಬೆಳವಣಿಗೆಗೆ ಹಲವಾರು ಮಂದಿ ಗಣ್ಯರು ಶ್ರಮಿಸಿದ್ದಾರೆ. ಅವರನ್ನು ಸ್ಮರಿಸಬೇಕಿರುವುದು ಇಂದಿನ ತುರ್ತು ಅಗತ್ಯ ಎಂದರು.

ಹೊಲಿ ಕರೆಯುವುದರ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು.

ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌ ಮಾತನಾಡಿ, ಕುಂದಾಪ್ರ ಕನ್ನಡ ದಿನಾಚರಣೆಯ ಮೂಲಕ ಭಾಷೆಯ ಸೊಗಡು ಮತ್ತು ಜನಜೀವನವನ್ನು ನೆನಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭ ಕುಂದಗನ್ನಡಕ್ಕಾಗಿ ಸೇವೆ ಸಲ್ಲಿಸಿದ ಹಲವಾರು ಮಂದಿ ಗಣ್ಯರನ್ನು ಗೌರವಿಸಲಾಯಿತು.

Advertisement

ಕೋಟ ಜೇಸಿಐನ ಅಧ್ಯಕ್ಷ ಶೇಷಗಿರಿ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಪ್ರಶಾಂತ್‌ ಕುಂದರ್‌, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ವಿವಿಧ ಸಂಘಟನೆಗಳ ಮುಖ್ಯಸ್ಥರಾದ ಪ್ರದೀಪ್‌ ಪೂಜಾರಿ, ರವೀಂದ್ರ ಕೋಟ, ತಿಮ್ಮ ಪೂಜಾರಿ ಕೋಟ, ರಘು ಪಾಂಡೇಶ್ವರ, ನೀಲಾವರ ಸುರೇಂದ್ರ ಅಡಿಗ, ರಾಜಶೇಖರ್‌ ಗುಲ್ವಾಡಿ, ಜಯರಾಮ್‌ ಶೆಟ್ಟಿ, ಉತ್ತಮ ಸಾರಂಗ, ಅಜಿತ್‌ ಆಚಾರ್ಯ, ರಾಘವೇಂದ್ರ ಕುಂದರ್‌, ವನಿತಾ ಉಪಾಧ್ಯಾಯ, ಚಂದ್ರ ಆಚಾರ್ಯ ಹಳ್ಳಾಡಿ, ರಾಜಾರಾಮ್‌ ಐತಾಳ, ಕೇಶವ ಆಚಾರ್ಯ, ಸುರೇಶ ಗಿಳಿಯಾರು, ಚೇತನ ನೈಲಾಡಿ, ಪವಿತ್ರಾ ನಾಯಕ್‌ ಉಪಸ್ಥಿತರಿದ್ದರು.ಪ್ರಸಾದ್‌ ಬಿಲ್ಲವ ಸ್ವಾಗತಿಸಿ, ನರೇಂದ್ರ ಕುಮಾರ್‌ ಕೋಟ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next