Advertisement
ಕೇಂದ್ರದ ವಾರ್ಷಿಕ ಮಹಾಸಭೆ ನ. 24ರಂದು ಜರಗಿದ್ದು 2021-24ರ ಅವಧಿಗೆ ನೂತನ ವಿಶ್ವಸ್ಥ ಮಂಡಳಿಯನ್ನು (ಬೋರ್ಡ್ ಆಫ್ ಟ್ರಸ್ಟೀಸ್) ಚುನಾಯಿಸಲಾಯಿತು.
Related Articles
Advertisement
ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಬಸ್ತಿ ವಾಮನ ಶೆಣೈ ಅವರ ಸುದೀರ್ಘ ಸೇವೆಯನ್ನು ಗೌರವಿಸಿ ಸಹ ಗೌರವಾಧ್ಯಕ್ಷರಾಗಿ ಮುಂದುವರಿಯಲು ವಿನಂತಿಸಲಾಯಿತು. ಗೌರವಾಧ್ಯಕ್ಷ ಆರ್. ವಿ. ದೇಶಪಾಂಡೆ ಮತ್ತು ಚೇರ್‌ಮನ್ ಡಾ| ಪಿ. ದಯಾನಂದ ಪೈ ಅವರನ್ನು ತಮ್ಮ ಪ್ರಸಕ್ತ ಪದವಿಗಳಲ್ಲಿ ಮುಂದುವರಿಯಲು ವಿಶ್ವಸ್ಥ ಮಂಡಳಿಯು ವಿನಂತಿಸಿತು.
ವಿಶ್ವ ಕೊಂಕಣಿ ಕೇಂದ್ರದ ವಿಶ್ವಸ್ತ ಮಂಡಳಿಯಲ್ಲಿ ಡಾ| ಪಿ. ದಯಾನಂದ ಪೈ, ಪಿ. ಸತೀಶ್ ಪೈ , ಟಿ.ವಿ. ಮೋಹನದಾಸ್ ಪೈ, ಡಾ| ರಂಜನ್ ಪೈ, ಕೆ.ವಿ. ಕಾಮತ್, ಮೇಡಂ ಗ್ರೇಸ್ ಪಿಂಟೊ, ರಾಮದಾಸ್ ಕಾಮತ್ ಯು., ಪ್ರದೀಪ್ ಜಿ. ಪೈ, ಜಿಸೆಲ್ ಡಿ. ಮೆಹತಾ, ವಿಲಿಯಂ ಡಿ’ಸೋಜಾ, ಗೋಕುಲ್‌ನಾಥ್ ಪ್ರಭು, ಉಲ್ಲಾಸ್ ಕಾಮತ್, ರೊನಾಲ್ಡ್ ಕುಲಾಸೊ ಮೊದಲಾದ ಗಣ್ಯರು ಖಾಯಂ ಪೋಷಕ ಟ್ರಸ್ಟಿಗಳಾಗಿದ್ದಾರೆ. ಹೊಸದಾಗಿ ಆಯ್ಕೆಯಾದ 16 ಟ್ರಸ್ಟಿಗಳು 2021-24 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರವನ್ನು ಮುನ್ನಡೆಸಲಿದ್ದಾರೆ.