ಉಳ್ಳಾಲ: ಮಂಗಳೂರು ವಿಶ್ವ ವಿದ್ಯಾ ನಿಲಯ ಜೀವವಿಜ್ಞಾನ ವಿಭಾಗ ಹಾಗೂ ಯೇನಪೊಯ ಆಯುರ್ವೇದ ವೈದ್ಯ ಕೀಯ ಕಾಲೇಜು ಮತ್ತು ಆಸ್ಪತ್ರೆ ಜಂಟಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಇಂಡೋರ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಡೆಯಿತು.
ಕಾರ್ಯಕ್ರಮ ಯೇನಪೊಯ ವಿಶ್ವವಿ ದ್ಯಾನಿಲಯದ ಪ್ರೊ. ವೈಸ್ ಚಾನ್ಸಲರ್ ಪ್ರೊ| ಸಿ.ವಿ. ರಘುವೀರ್ ಉದ್ಘಾಟಿಸಿ ಮಾತನಾಡಿ ಅನಾರೋಗ್ಯ ಉಂಟಾದಾಗ ಮಾತ್ರ ನಾವು ನಮ್ಮ ಆರೋ ಗ್ಯದ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಜಗತ್ತಿನಾದ್ಯಂತ ಆರೋಗ್ಯದ ಬಗ್ಗೆ ಜನಜಾಗೃತಿ ಉಂಟುಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ, ಪ್ರೊ| ವಿ. ರವೀಂದ್ರಾ ಚಾರಿ ಅಧ್ಯಕ್ಷತೆ ವಹಿಸಿ ನಮ್ಮ ಹಿಂದಿನವರು ಸಾಂಪ್ರದಾಯಿಕ ಆಹಾರ ಮತ್ತು ಜೀವನ ಶೈಲಿಯನ್ನು ನಡೆಸಿ ಉತ್ತಮ ಆರೋಗ್ಯವನ್ನು ಹೊಂದಿದ್ದರು. ಅವರ ಆಹಾರ ಪದ್ಧತಿ ಆರೋಗ್ಯಕರ ಜೀವನಕ್ಕೆ ಪೂರಕವಾಗಿತ್ತು. ಶ್ರಮಜೀವನ ಮತ್ತು ಶುದ್ಧ ಮನಸ್ಸು ಉತ್ತಮ ಆರೋಗ್ಯಕ್ಕೆ ಸೋಪಾನ ಎಂದರು.
ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಪಕ ಡಾ| ಹರಿಕೃಷ್ಣ ಭಟ್ ಅವರು ವಿಶ್ವ ಆರೋಗ್ಯ ರಕ್ಷಣೆ: ಎಲ್ಲರಿಗೂ, ಎಲ್ಲೆಡೆಯೂ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಯೇನಪೊಯ ಆಯುರ್ವೇದ ವೈದ್ಯ ಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ಮತ್ತು ಸಮಾ ಲೋಚನೆ ನಡೆಸಿಕೊಟ್ಟರು.
ಜೀವವಿಜ್ಞಾನ ವಿಭಾಗದ ಅಧ್ಯಕ್ಷ ಡಾ| ಪ್ರಶಾಂತ ನಾಯ್ಕ ಸ್ವಾಗತಿಸಿ ಪ್ರಸ್ತಾವನೆಗೈದರು.ಸಂಶೋಧನಾ ವಿದ್ಯಾರ್ಥಿ ಅಭಿ ಷೇಕ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ವಂಶಿ ರತ್ನಕುಮಾರ್ ಪ್ರಾರ್ಥನೆ ನೆರವೇರಿಸಿದರು.ಅನ್ವರ್ ಖಾನ್ ವಂದಿಸಿದರು.