Advertisement

ವಿಶ್ವ ಆಹಾರ ದಿನ: ಮಣಿಪಾಲದಲ್ಲಿ ಸೈಕಲ್‌ ರಾಲಿ

11:57 AM Oct 19, 2019 | sudhir |

ಉಡುಪಿ: ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಮಾಹೆ ವಿ.ವಿ. ಆವರಣದಲ್ಲಿ ವೆಲ್ಕಮ್‌ಗ್ರೂಪ್‌ ಗ್ರಾಜುವೇಟ್‌ ಸ್ಕೂಲ್‌ ಆಫ್ ಹೊಟೇಲ್‌ ಅಡ್ಮಿನಿಸ್ಟ್ರೇಶನ್‌ (ವಾಗಾÏ) ಬುಧವಾರ ಬೈಸಿಕಲ್‌ ರ್ಯಾಲಿಯನ್ನು ನಡೆಸಿತು.

Advertisement

ಮಾಹೆ ವಿ.ವಿ. ಆಡಳಿತ ಕಚೇರಿ ಎದುರು ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಅವರು ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು. “ಶೂನ್ಯ ಹಸಿವಿನ ವಿಶ್ವಕ್ಕಾಗಿ ಆರೋಗ್ಯ ಪಥ್ಯಾ ಹಾರಗಳು’ ಎಂಬ ಈ ವರ್ಷದ ಥೀಮ್‌ನಡಿ ಜಾಗೃತಿ ರೂಪಿಸಲು ಸೈಕಲ್‌ ಸವಾರರು ಕ್ಯಾಂಪಸ್‌ ಸುತ್ತ ರ್ಯಾಲಿ ನಡೆಸಿದರು.

ಭಾರತೀಯ ಆಹಾರ ಸುರಕ್ಷಾ ಪ್ರಾಧಿಕಾರ ಹೊರತಂದ
“ದಿ ಈಟ್‌ ರೈಟ್‌ ಮೂವ್‌ಮೆಂಟ್‌’ ಕಾರ್ಯಕ್ರಮದ ಕುರಿತೂ ಜಾಗೃತಿ ಮೂಡಿಸಲಾಯಿತು. ವಾಗಾÏದ ನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. “ಇಂದು ಬಹುತೇಕ ಮಕ್ಕಳಿಗೆ ಯಾವುದು ಸರಿ? ಯಾವುದು ತಪ್ಪು’ ಎಂಬ ಅರಿವಿಲ್ಲದೆ ಉತ್ತಮವಲ್ಲದ ಪಥ್ಯಾಹಾರ ಸೇವಿಸಿ ತೂಕವನ್ನು ಕಳೆದು ಕೊಳ್ಳುತ್ತಿದ್ದಾರೆ. ಉತ್ತಮ ವ್ಯಾಯಾಮದಿಂದ ಸಮತೋಲನವನ್ನು ಕಾಪಾಡ ಬಹುದು’ ಎಂದು ಡಾ| ಬಾಳಿಗಾ ಹೇಳಿದರು.

ಸಮತೋಲಿತ ಆಹಾರ ಸ್ವೀಕರಿಸಿ
ಅಪೌಷ್ಟಿಕ ಆಹಾರ ಸೇವನೆಯಿಂದ ಗರ್ಭಿಣಿಯರು ಬಳಲುತ್ತಿದ್ದಾರೆ. ಶಾಲಾ ಮಕ್ಕಳಿಗೂ ಇದೇ ಸಮಸ್ಯೆ ಕಾಡುತ್ತಿದೆ. ಪ್ರತಿಯೊಬ್ಬರೂ ಸಮತೋಲಿತ ಆಹಾರ ಸ್ವೀಕರಿಸುವ ಜತೆಗೆ ಸೂಕ್ತ ವ್ಯಾಯಾಮವನ್ನು “ಫಿಟ್‌ ಇಂಡಿಯಾ’ಕ್ಕಾಗಿ ಮಾಡುತ್ತಿರಬೇಕು. ಹಸಿವು ಮುಕ್ತ ಥೀಮ್‌ ಕುರಿತು ಸ್ನೇಹಿತರು, ಕುಟುಂಬ, ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಸಂಸ್ಥೆ ಆಹಾರ ಸುರಕ್ಷಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡಿದೆ ಎಂದು ವಾಗಾÏ ಪ್ರಾಂಶುಪಾಲ ತಿರುಜ್ಞಾನಸಂಬಾಂತಮ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next