Advertisement

ಜಗತ್ಪ್ರಸಿದ್ಧ ಓಲ್ಡ್ ಗೋವಾ ಚರ್ಚ್ ಫೆಸ್ಟ್ ; ಲಕ್ಷಾಂತರ ಸಂಖ್ಯೆಯ ಭಕ್ತರ ನಿರೀಕ್ಷೆ

08:04 PM Dec 02, 2022 | Team Udayavani |

ಪಣಜಿ: ಜಗತ್ಪ್ರಸಿದ್ಧ ಓಲ್ಡ್ ಗೋವಾ ಚರ್ಚ್ ಫೆಸ್ಟ್ ಅಂಗವಾಗಿ ಡಿಸೆಂಬರ್ 3 ರಂದು ಶನಿವಾರ ವಿಶೇಷ ಪ್ರಾರ್ಥನಾ ಸಭೆ ನಡೆಯಲಿದೆ. ಕೊಂಕಣಿ,ಇಂಗ್ಲಿಷ್ ,ಹಿಂದಿ, ಕನ್ನಡ ಹೀಗೆ ವಿವಿಧ ಭಾಷೆಗಳಲ್ಲಿ ಪ್ರಾರ್ಥನಾ ಸಭೆ ನಡೆಯಲಿದೆ.

Advertisement

ಈ ಫೆಸ್ಟ್ ನಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿರಲಿದ್ದು ಈ ಹಿನ್ನೆಲೆಯಲ್ಲಿ ಭಾರಿ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ.

ಕಳೆದ ಒಂದು ವಾರದಿಂದ ಪ್ರತಿದಿನ ಬೆಳಗ್ಗೆ ಓಲ್ಡ್ ಗೋವಾ ಚರ್ಚ ಪರಿಸರದಲ್ಲಿ ಫೆಸ್ಟ್ ಹಿನ್ನೆಲೆಯಲ್ಲಿ ನೊವೆನ್ಹಾ ವಿಶೇಷ ಪ್ರಾರ್ಥನಾ ಸಭೆ ನಡೆಯುತ್ತಿದೆ. ಡಿಸೆಂಬರ್ 3 ರಂದು ಶನಿವಾರ ನಡೆಯುವ ಸಂತ ಫ್ರಾನ್ಸಿಸ್ ಜೇವಿಯರ್  ಫೆಸ್ಟ್ ನಲ್ಲಿ ಗೋವಾ ರಾಜ್ಯದ ವಿವಿಧ ಚರ್ಚಗಳ ಹಾಗೂ ವಿವಿಧ ರಾಜ್ಯಗಳ ಚರ್ಚ್ ಗಳ ಪಾದ್ರಿ ಗಳು, ಸಂತರು ಪಾಲ್ಗೊಳ್ಳಲಿದ್ದಾರೆ. ಫೆಸ್ಟ್ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಗೋವಾಕ್ಕೆ ಆಗಮಿಸಿದ್ದಾರೆ.

ಓಲ್ಡ್ ಗೋವಾ ಫೆಸ್ಟ್ ಹಿನ್ನೆಲೆಯಲ್ಲಿ ಚರ್ಚ್ ಪರಿಸರದಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಈಗಾಗಲೇ ಮೈಲುಗಟ್ಟಲೆ ದೂರದ ವರೆಗೂ ಜಾತ್ರೆ ನೆರೆದಿದ್ದು, ಜಾತ್ರೆ ಪೇಟೆ ಅಂಗಡಿಗಳು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಸದ್ಯ ಓಲ್ಡ್ ಗೋವಾ ಹೆದ್ದಾರಿಯಂತೂ ಭಾರಿ ವಾಹನ ದಟ್ಟಣೆಯಿಂದ ಕೂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next