ದೇವನಹಳ್ಳಿ: ಬೆಂ.ಗ್ರಾ. ಜಿಲ್ಲೆಯಲ್ಲಿ ಪ್ರತಿ ವರ್ಷವೂ ಅರಣ್ಯ ಸಂಪತ್ತಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರತಿವರ್ಷ ಆಚರಿಸುವ ವಿಶ್ವ ಪರಿಸರ ದಿನಾಚರಣೆಯಂದು ಕೇವಲ ಒಂದೆರಡು ಸಸಿ ನೆಡುವ ಕಾರ್ಯಸೀಮಿತವಾಗುತ್ತಿದೆ. ಪ್ರತಿ ಮನೆಯ ಮುಂಭಾಗಮರಗಿಡಗಳನ್ನು ಬೆಳೆಸಲಾಗಿದೆ. ಇದಕ್ಕೆ ಪೂರಕವಾಗಿಜಿಲ್ಲೆಯಲ್ಲಿ 7.75 ಲಕ್ಷ ಸಸಿ ನೆಡುವ ಗುರಿಯನ್ನುಅರಣ್ಯ ಇಲಾಖೆ ಹೊಂದಿದೆ. ಜಿಲ್ಲೆಯಲ್ಲಿ ಸಾಮಾಜಿಕಅರಣ್ಯ ಇಲಾಖೆ ವತಿಯಿಂದ 13.31 ಲಕ್ಷ ಗಿಡ ಬೆಳೆ ಸಿದ್ದು, ರೈತರಿಗೆ ರಿಯಾಯಿತಿ ಬೆಲೆಯಲ್ಲಿ ಸಸಿಗಳನ್ನು ನೀಡಲಿದೆ.
ಸಸಿ ರಕ್ಷಣೆ ಅನಿವಾರ್ಯ: ಪರಿಸರ ದಿನಾಚರಣೆಯಂದು ಸಸಿಗಳನ್ನು ನೆಟ್ಟರೆ ಸಾಲದು, ಅವನ್ನು ಪೋಷಿಸಬೇಕಾಗಿದೆ. ಸಾಮಾಜಿಕ ಮತ್ತು ಮೀಸಲು ಅರಣ್ಯ ವಿಭಾಗವು ಕಳೆದ ಹತ್ತಾರು ವರ್ಷದಿಂದ ಜಿಲ್ಲೆಯಲ್ಲಿ 8 ಲಕ್ಷ ವಿವಿಧ ಜಾತಿ ಸಸಿಗಳನ್ನು ನೆಡುತ್ತಲೇಬಂದಿದೆ. ಆದರೆ, ಬೆರಳೆಣಿಕೆ ಮರಗಳು ಕಾಣುತ್ತಿಲ್ಲ. ಅರಣ್ಯ ಇಲಾಖೆಯಿಂದ ನೆಡುವ ಸಸಿಗಳನ್ನು ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರುಣಿಸಿ, ಸಂರಕ್ಷಣೆ ಮಾಡಬೇಕಾದ ಅನಿವಾರ್ಯವಿದೆ ಎಂಬ ಅಭಿಪ್ರಾಯಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ.
ರಸ್ತೆ ಅಭಿವೃದ್ಧಿಗಾಗಿ ಮರಗಳ ನಾಶ: ದೇವನಹಳ್ಳಿಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಅರಣ್ಯಇಲಾಖೆಯಿಂದ 540 ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಬದಲಿಗೆ ಕಾಡು ಬೆಳೆಸಲುದೊಡ್ಡಬಳ್ಳಾಪುರ ಸಮೀಪ 540 ಎಕರೆ ಜಾಗವನ್ನುಸರ್ಕಾರ ನೀಡಿದೆ. ಆದರೆ, ವಿಮಾನ ನಿಲ್ದಾಣ ನಿರ್ಮಾಣ ಪ್ರಾರಂಭವಾದ ಮೇಲೆ ಭೂಮಿಗೆ ಹೆಚ್ಚಿನಬೆಲೆ ಬಂದಿರುವುದರಿಂದ ರಸ್ತೆ ಅಭಿವೃದ್ಧಿಗಾಗಿ ಬೆಂಗಳೂರು-ದೇವನಹಳ್ಳಿಯ ರಸ್ತೆಯಲ್ಲಿನ ಮರಗಳನ್ನುನಾಶ ಮಾಡಿದ್ದಾರೆ. ಲೇಔಟ್ ಮತ್ತು ಬಡಾವಣೆಗಳು ಅಭಿವೃದ್ಧಿ ಆಗುತ್ತಿರುವುದರಿಂದ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಸಸಿ ವಿತರಣೆ ಕಾರ್ಯ ಆರಂಭ: ಮುಂಗಾರು ರಾಜ್ಯ ಪ್ರವೇಶ ಮಾಡಲಿದ್ದು, ನರೇಗಾ ಯೋಜನೆಯಡಿಯಲ್ಲಿ ಇರುವ ಅವಕಾಶ ಬಳಕೆ ಮಾಡಿಕೊಂಡು ಮಳೆಗಾಲದಲ್ಲಿ ಉತ್ತಮವಾಗಿ ಅರಣ್ಯೀಕರಣ ಮಾಡಲಿಕ್ಕೆ ಖಾಲಿಯಾಗಿರುವ ಸರ್ಕಾರಿ ಭೂಮಿಗಳಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ರೈತರ ಜಮೀನುಗಳ ಬದುಗಳಲ್ಲಿ, ತೋಟಗಳ ಸುತ್ತಲೂ ಗಿಡಗಳನ್ನು ಬೆಳೆಸಲಿಕ್ಕಾಗಿ ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳು ವಿತರಣೆ ಮಾಡುತ್ತಿದ್ದಾರೆ. ಭುವನಹಳ್ಳಿ ಗೇಟ್‌ನಲ್ಲಿರುವ ನರ್ಸ ರಿಯಲ್ಲಿ, ಮಳೆಗಾಲದಲ್ಲಿ ರೈತರಿಗೆ ವಿತರಣೆ ಮಾಡಲೆಂದೇ ಇಲ್ಲಿನ ಕಾರ್ಮಿಕರು ಸುಮಾರು 70 ಸಾವಿರಕ್ಕೂ ಅಧಿಕ ಸಸಿ ಬೆಳೆಸಿದ್ದಾರೆ. ಈಗಾಗಲೇ ವಿತರಣೆ ಕಾರ್ಯ ಆರಂಭಗೊಂಡಿದ್ದು, ಹಲವಾರು ಮಂದಿ ರೈತರು, ಸಸಿ ತೆಗೆದುಕೊಂಡು ಹೋಗಿ ತಮ್ಮ ಜಮೀನುಗಳಲ್ಲಿ ನಾಟಿ ಮಾಡಿಕೊಳ್ಳುತ್ತಿದ್ದಾರೆ.
ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ನೀಡಿದರೆ ಒಂದು ಸಸಿಗೆ100 ರೂ. ಸಹಾಯಧನ ಸಿಗಲಿದೆ. ಒಬ್ಬರು400 ಸಸಿ ಪಡೆದುಕೊಳ್ಳಬಹುದು. ನರೇಗಾಯೋಜನೆಯಡಿ ನಿರ್ವಹಣೆ ಮಾಡಲಿಕ್ಕೆಈ ಬಾರಿ ಅವಕಾಶ ನೀಡಿದ್ದಾರೆ. ಎಷ್ಟುಮಾನವ ದಿನಗಳಿರುತ್ತವೋ ಅವುಗಳನ್ನುಗಮನಿಸಿ ನಿರ್ವಹಣಾ ವೆಚ್ಚ ನೀಡಲಾಗುತ್ತದೆ.
– ಪುಷ್ಪಾವತಿ, ತಾಲೂಕುಸಾಮಾಜಿಕ ಅರಣ್ಯ ಅಧಿಕಾರಿ
ಸಾಮಾಜಿಕ ಅರಣ್ಯ ಇಲಾಖೆಯಿಂದ13.31 ಲಕ್ಷ ಗಿಡಗಳನ್ನುಬೆಳೆಸಲಾಗಿದೆ. ಪ್ರಾದೇಶಿಕ ಅರಣ್ಯ ಮತ್ತುಸಾಮಾಜಿಕ ಅರಣ್ಯ ಜಂಟಿಯಾಗಿ ಬೀಜದಉಂಡೆಗಳನ್ನು ನಿರ್ಮಾಣಮಾಡಲಾಗುತ್ತದೆ. ಕಾವೇರಿ ಕೂಗು ಎಂಬಸಂಸ್ಥೆಯ ಮೂಲಕ ರೈತರಿಗೆ 8 ಲಕ್ಷಸಸಿಗಳನ್ನು ನೀಡಲು ಪಟ್ಟಿ ಮಾಡಿ ಮಾಹಿತಿನೀಡಿದ್ದಾರೆ. ಎಲ್ಲ ಜಿಲ್ಲೆಯ ಗ್ರಾಪಂಗಳಿಗೆ 500 ಗಿಡ ನೀಡಲು ತಿಳಿಸಲಾಗಿದೆ.
-ಭಾಸ್ಕರ್, ಸಾಮಾಜಿಕ ಅರಣ್ಯ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಸಂಪತ್ತಿನ ನಾಶದಿಂದ ಅನೇಕ ಸರಿಸೃಪಗಳೂ ಕಣ್ಮರೆಯಾಗಿದ್ದು, ಬಯಲುಸೀಮೆ ಭಾಗದಲ್ಲಿ ಅರಣ್ಯ ಬೆಳೆಸುವುದು ಅನಿವಾರ್ಯವಾಗಿದೆ. ಭೂಮಿಯಲ್ಲಿ ಒಂದು ಭಾಗ ಅರಣ್ಯವಿರಬೇಕು. ಸಸ್ಯಗಳ ಸಮೃದ್ಧಿ ನಮ್ಮ ಅಭಿವೃದ್ಧಿಯಾಗಬೇಕು. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ, ಮರಗಿಡಗಳ ಮಹತ್ವ ತಿಳಿಯಬೇಕು.
– ಜಿ. ಮಂಜುನಾಥ್, ಪರಿಸರ ಪ್ರೇಮಿ
ಸರ್ಕಾರ ಪರಿಸರ ದಿನದ ಅಂಗವಾಗಿ ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ ಎನ್ನುವ ಸಂದೇಶದೊಂದಿಗೆ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಜಿಲ್ಲಾದ್ಯಂತ ಬೀಜ ಬಿತ್ತೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಶಾಲೆಗಳು, ಯುವ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಪ್ರತಿಯೊಬ್ಬರೂ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.
-ಸುಮಿತ್, ಉಪಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ ಅರಣ್ಯ)
– ಎಸ್.ಮಹೇಶ್