Advertisement
“ನಾವು ಇತರರಿಗೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳುವುದೇನೋ ಸರಿ. ಆದರೆ, ಆರೋಗ್ಯದ ವಿಷಯಕ್ಕೆ ಬಂದಾಗ ವೈದ್ಯರಿಗೆ ತಮ್ಮ ಆರೋಗ್ಯದ ಬಗ್ಗೆ ಪೂರ್ತಿ ನಿರ್ಲಕ್ಷ್ಯ. ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿರುವುದಿಲ್ಲ. ಹಾಗಾಗಬಾರದು. ಅದು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ’ ಎಂದು ಸೀನಿಯರ್‌ಗಳು, ಹಿರಿಯ ಪ್ರೊಫೆಸರ್ ಎಚ್ಚರಿಸುತ್ತಿದ್ದರು. ನಮಗೆ ಅರ್ಥವಾಗುವ ವಯಸ್ಸಲ್ಲ ಅದು!
Related Articles
Advertisement
ಬಗೆಬಗೆಯ ಆಹಾರ ತಿನ್ನುವುದು ನನಗಿಷ್ಟ. ಐಸ್ ಕ್ರೀಮ್ ಪಿಜ್ಜಾ, ಕರಿದ ತಿಂಡಿ ಬಹಳ ಇಷ್ಟವಾ ದರೂ ತಿಂಗಳಿಗೆ ಒಮ್ಮೆ ಮಾತ್ರ ಎಂದು ನಿರ್ಬಂಧ ಹಾಕಿಕೊಂಡಿದ್ದೇನೆ. ಆದಷ್ಟೂ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಹೆಚ್ಚಿರುವಂತೆ ಅಡಿಗೆಯ ಟೈಮ್ ಟೇಬಲ್ ಮಾಡುತ್ತೇನೆ. ರಾತ್ರಿ ಹನ್ನೊಂದಕ್ಕೆ ಮಲಗಿದರೆ ಬೆಳಗ್ಗೆ ಆರಕ್ಕೆ ದಿನ ಆರಂಭವಾಗುತ್ತದೆ. 7 ತಾಸಿನ ನಿದ್ದೆ ಇರದಿದ್ದರೆ ನನಗೆ ತಲೆ ಓಡುವುದೇ ಇಲ್ಲ!!
ಏನೇ ಮಾಡಿದರೂ ಕೆಲಸದ ಒತ್ತಡ ಇದ್ದದ್ದೇ! ಅದನ್ನು ನಿಭಾಯಿಸಲು ಮಾಡಬೇಕಾದ ಕೆಲಸಗಳ ಪಟ್ಟಿ ಮಾಡುವುದರ ಜತೆಗೆ ಅಗತ್ಯವಿದ್ದಲ್ಲಿ ಇತರರ ಸಹಾಯ ಪಡೆಯುತ್ತೇನೆ. ಇದರೊಂದಿಗೆ ದಿನವೂ ಕನಿಷ್ಠ ಅರ್ಧ ಗಂಟೆ ಏನಾದರೂ ಓದುವುದು, ಸಂಗೀತ ಕೇಳುವುದು, ಸಿನಿಮಾ ನೋಡುವುದು,
ಆಗಾಗ್ಗೆ ಪ್ರವಾಸ, ಬರವಣಿಗೆ, ನೃತ್ಯ ಇವೆಲ್ಲಾ ಬದುಕಿನ ಏಕತಾನತೆ ಕಳೆದು ಮನಸ್ಸು ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಮನೆಯಲ್ಲಿರುವ ಮಾವನ ಜತೆ ಚರ್ಚೆ ಮತ್ತು ಅಪ್ಪ- ಅಮ್ಮ, ತಂಗಿಯರೊಡನೆ ಫೋನ್ ಮೂಲಕ ಮಾತನಾಡಿ ಕಷ್ಟ ಸುಖ ಹೇಳಿಕೊಳ್ಳುವುದು ವೈಯಕ್ತಿಕವಾಗಿ ನನಗೆ ಸಮಾಧಾನ ನೀಡುತ್ತದೆ.
ಒಟ್ಟಿನಲ್ಲಿ “ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ’ ಎನ್ನುವುದು ರೋಗಿಗಳಿಗೆ ನೀಡುವ ಉಪದೇಶ ಮಾತ್ರವಾಗದೇ ನನ್ನ ಬದುಕಿಗೂ ಅನ್ವಯವಾಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ!!
-ಡಾ. ಕೆ.ಎಸ್. ಚೈತ್ರಾ, ದಂತ ವೈದ್ಯೆ, ಬೆಂಗಳೂರು