Advertisement

World Cycle Day: ನನ್ನ ಪಾಪಚಿಯೊಂದಿಗಿನ ಆ ದಿನಗಳು

10:15 AM Jun 03, 2020 | Suhan S |

ಸಂಜೆ ಕಾಫಿಕುಡಿತ ಹಿತ್ತಲಿನ ಕಡೆ ಹೋದಾಗ ಪಾಪಚಿ (ಸೈಕಲ್) ಕಣ್ಣಿಗೆ ಬಿದ್ದ, ಹಳೆ ದಿನಗಳೆಲ್ಲ ಕಣ್ಣ ಮುಂದೆ ಹಾದು ಹೋದಂತಾಯ್ತು. ನಿಂಗೆ ಸೈಕಲ್ ಓಡಿಸೋಕ್ಕೆ ಬರುತ್ತಾ? ಈ ಪಶ್ನೆ ಅದೆಷ್ಟು ಜನರು ನನ್ನಲ್ಲಿ ಕೇಳಿದರೆಂದು ಲೆಕ್ಕನೇ ಇಲ್ಲ. ಆಗೆಲ್ಲ ನನ್ನಗೆ ಈ ಸೈಕಲ್ ಎಲ್ಲಿಂದ ಬಂತು ಎಂದೆಲ್ಲ ಯೋಚಿಸ್ತಾ ಇದೆ.

Advertisement

1818ರಲ್ಲಿ ಬಳಕೆಯಲ್ಲಿದ ಡ್ರೈಸೀನ್ ವಾಹನ ಸೈಕಲಿನ ಪೂರ್ವಜರೆಂದೆ, ಈ ವಾಹನದಲ್ಲಿ ಚಕ್ರಗಳ ಬದಲಾಗಿ ಸಾರಥಿ ಸವಾರನನ್ನು ವಾಹನದಲ್ಲಿ ಕೂರಿಸಿಕೊಂಡು ತನ್ನ ಕಾಲಿನ ಮೂಲಕ ತಳಿಕೊಂಡು ಹೋಗುತ್ತಿದ್ದ. ನಂತರದ 1860ರಲ್ಲಿ ಪಿಯರಿ ಮಿಕಾ ಮತ್ತು ಪಿಯರಿ ಲಾಲಮೆಂಟ್ ಎಂಬ ಫ್ರೆಂಚ್  ಅವಿಷ್ಕಕರ್ತರು ಪೆಡಲ್ ಗಳನ್ನುಳ್ಳ ಸೈಕಲ್ ಗಳನ್ನು  ನಿರ್ಮಿಸಿದ್ದರು.ನಂತರದ ಸಮಯದಲ್ಲಿ ಹೊಸ ಬಗೆಯ ಸೈಕಲ್ ಗಳನ್ನು ತಯಾರಿಸಲಾಯಿತು.

ಆದರೆ ನಾನು ಸೈಕಲ್ ಕಂಡದ್ದು ನನ್ನ 5 ನೇ ವಯಸ್ಸಿನಲ್ಲಿ, ಅದೂ ನನ್ನ ಅಣ್ಣನ ಮೂಲಕ , ಅದರಲ್ಲಿ ಕುಳಿತುಕೊಂಡು ಊರನ್ನು ಸುತ್ತುವಾಗ ಸಿಗುತ್ತಿದ್ದ ಆನಂದವೇ ಬೇರೆಯಾಗಿತ್ತು.  ಸಮಯ ಕಳೆಯಿತು , ನಾನು 8ನೇ ತರಗತಿಗೆ ಬಂದ ನಂತರ ನನಗೂ ಸೈಕಲ್ ಸಿಕ್ಕಿತ್ತು. ತದ ನಂತರವೆ ನಾನು ಸೈಕಲ್ ಕಲಿತದ್ದು. ನನಗೆ ಸೈಕಲ್ ಕಲಿಸಿದ್ದು ನನ್ನ ತಂಗಿ ಹೌದು ಕೇಳಲು ವಿಚಿತ್ರವೇ ಆದರೂ ಸತ್ಯ. ಸೈಕಲ್ ಕಲಿತ ಬಳಿಕ ನನ್ನ ಲೋಕವೇ ಬೇರೆಯಾಗಿತ್ತು. ದಿನವಿಡಿ ಅದರ ಜೊತೆಗೆ ನನ್ನ ವಾಸವಾಗಿತ್ತು.

ಒಂದು ದಿನ ನನ್ನ ಪ್ರೀತಿಯ ತಂಗಿಯನ್ನು ಕೂರಿಸಿಕೊಂಡು ರಸ್ತೆಯಲ್ಲಿ ಹೋಗುವಾಗ , ನಾನು ಓಡಿಸುತ್ತಿದ್ದ ರಬಸಕ್ಕೊ ಏನೋ ಅವಳು ಕಿರುಚಾಲು ಶುರು ಮಾಡಿದಳು ಅವಳ ಚೀರಾಟಕ್ಕೆ ನನಗೆ ಭಯವಾಗಿ ಸೈಕಲ್ ಮೇಲಿನ ಹಿಡಿತ ತಪ್ಪಿ ರಸ್ತೆ ಬದಿಯಲ್ಲಿದ್ದ ಜಲ್ಲಿಕಲ್ಲುಗಳ ಮತ್ತು ಮರಳಿನ ರಾಶಿಯ ಮೇಲೆ ದೊಪ್ಪನೆಂದು ಬಿದ್ವಿ. ನಮಗೆ ಪೆಟ್ಟಾಗಿತ್ತು ಆದರೆ ನಮಗಿಂತ ನನ್ನ ಪಾಪಚಿ ಬಿದ್ದ ರಭಸಕ್ಕೆ ಒಂದು ಹೊಸ ರೂಪನೇ ತಾಳಿ ಬಿಟ್ಟಿತ್ತು.

ಪಾಪಚಿ ನಾನು ನನ್ನ ಸೈಕಲ್ ಗೆ ಇಟ್ಟ ಹೆಸರಾಗಿತ್ತು. ಪಾಪಚಿಯ ಜೊತೆಗೆ ಅದೆಷ್ಟೋ ಸಲ ಬಿದಿದ್ದರು ಇಷ್ಟೊಂದು ಏಟಗಿರಲಿಲ್ಲ. ಸಮಯ ಕಳೆಯಿತು ನನ್ನ ಪಾಪಚಿ ಮನೆಯ ಒಂದು ಸಣ್ಣ ಮೂಲೆ ಸೇರಿತ್ತು ಮಳೆಯ ನೀರಿಗೆ ತನ್ನ ಒಡಲನ್ನು ಇಟ್ಟು ತನಗೆ ತಾನೇ ಪೂರ್ಣ ವಿರಾಮ ಇಟ್ಟುಕೊಂಡಿತ್ತು.

Advertisement

ಈಗಲೂ ಕೂಡ ಪಾಪಚಿನ ನೋಡುವಾಗ ಹಳೆ ದಿನಗಳೆಲ್ಲ ಕಣ್ಣ ಮುಂದೆ ಹಾದು ಹೋಗುತ್ತದೆ ಮತ್ತೆ ಬಾಲ್ಯಕ್ಕೆ ಒಮ್ಮೆ ಹೋಗಿ ಬರುವ ಆಸೆ ಆಗುತ್ತದೆ ಅದೇ ನನ್ನ ಪಾಪಚಿಯ ಜೊತೆಗೆ.

ಮಹಾಲಕ್ಷ್ಮಿ ದೇವಾಡಿಗ

ಪ್ರಥಮ ಬಿ.ಎ ಪತ್ರಿಕೋದ್ಯಮ ವಿಭಾಗ

ಎಂ. ಜಿ. ಎಂ ಕಾಲೇಜು ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next