Advertisement
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ 22ರ ಹರೆಯದ ಯಶಸ್ವಿನಿ ಎಂಟು ಸ್ಪರ್ಧಿಗಳ ಫೈನಲ್ ಹೋರಾಟದಲ್ಲಿ 236.7 ಅಂಕ ಗಳಿಸಿ ಉಕ್ರೈನಿನ ವಿಶ್ವ ನಂಬರ್ ವನ್ ಶೂಟರ್ ಒಲೆನಾ ಕೋಸ್ಟೆವಿಚ್ ಅವರನ್ನು ಉರುಳಿಸಿ ಚಿನ್ನ ಗೆದ್ದರು. ಮಾಜಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಕೋಸ್ಟೆವಿಚ್ 234.8 ಅಂಕ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರೆ ಸರ್ಬಿಯಾದ ಜಾಸ್ಮಿನಾ ಮಿಲವೊನೊವಿಕ್ ಕಂಚು ಗೆದ್ದರು.
ಅಮೋಘ ನಿರ್ವಹಣೆ ನೀಡಿ ಗಮನ ಸೆಳೆದ ಯಶಸ್ವಿನಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು. ಅವರು ಅರ್ಹತೆ ಪಡೆದ ಭಾರತದ 9ನೇ ಶೂಟರ್ ಆಗಿದ್ದಾರೆ. ಈ ಮೊದಲು ಮನು ಭಾಕರ್, ರಾಹಿ ಸನೊìಬಾಟ್, ದಿವ್ಯಾಂಶು ಸಿಂಗ್ ಪನ್ವಾರ್, ಅಭಿಷೇಕ್ ವರ್ಮ, ಸೌರಭ್ ಚೌಧರಿ, ಅಪೂರ್ವಿ ಚಾಂಡೇಲ, ಅಂಜುಮ್ ಮೌಡ್ಗಿಲ್ ಮತ್ತು ಸಂಜೀವ್ ರಾಜ್‌ಪೂತ್ ಈ ಮೊದಲು ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದರು. ಯಶಸ್ವಿನಿ ಅವರ ಚಿನ್ನ ರಿಯೋದಲ್ಲಿ ಭಾರತಕ್ಕೆ ಸಿಕ್ಕಿದ ಮೂರನೇ ಚಿನ್ನವಾಗಿದೆ. ಈ ಮೊದಲು ಅಭಿಷೇಕ್ ವರ್ಮ ಮತ್ತು ಎಲಾವೆನಿಲ್ ವಲರಿವಾನ್ ಅನುಕ್ರಮವಾಗಿ ಪುರುಷರ 10 ಮೀ. ಏರ್ ಪಿಸ್ತೂಲ್ ಮತ್ತು ವನಿತೆಯರ 10 ಮೀ. ಏರ್ ರೈಫಲ್‌ನಲ್ಲಿ ಚಿನ್ನ ಜಯಿಸಿದ್ದರು.
Related Articles
Advertisement
ಸೈನಿ ಉತ್ತಮ ನಿರ್ವಹಣೆವನಿತೆಯರ 50 ಮೀ. ರೈಫಲ್ 3 ಪೊಸಿಸನ್ಸ್ ನಲ್ಲಿ ಭಾರತದ ಕಾಜಲ್ ಸೈನಿ ಗಮನಾರ್ಹ ನಿರ್ವಹಣೆ ನೀಡಿದ್ದು 22ನೇ ಸ್ಥಾನ ಗಳಿಸಿದ್ದಾರೆ. ಪ್ರೋನ್ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿರುವ ತೇಜಸ್ವಿನಿ ಸಾವಂತ್ 47ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.