ಭೋಪಾಲ್: ಒಲಿಂಪಿಯನ್ ಶೂಟರ್ ಮನು ಭಾಕರ್ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅವರಿಗೆ ಈ ಪದಕ ಒಲಿಯಿತು. ಇದು ಭಾರತದ ಪಾಲಾದ 6ನೇ ಪದಕ. ಶನಿವಾರದ ರ್ಯಾಪಿಡ್ ರೌಂಡ್‌ನಲ್ಲಿ 98, 99 ಹಾಗೂ 97 ಅಂಕಗಳ ಸಾಧನೆಯೊಂದಿಗೆ (ಒಟ್ಟು 294 ಅಂಕ) ರ್‍ಯಾಂಕಿಂಗ್ ರೌಂಡ್ ಪ್ರವೇಶಿಸಿದ್ದರು. ಇಲ್ಲಿ ತೃತೀಯಸ್ಥಾನಿಯಾದರು. ಇದು ಈ ಕೂಟದಲ್ಲಿ ಮನು ಭಾಕರ್ ಗೆದ್ದ ಮೊದಲ ಪದಕ. ತಮ್ಮ ನೆಚ್ಚಿನ ಏರ್ ಪಿಸ್ತೂಲ್ ರೌಂಡ್‌ನಲ್ಲಿ ಅವರು ವಿಫಲರಾಗಿದ್ದರು. ಕೂಟದಲ್ಲಿ ಚೀನಾ ಪ್ರಾಬಲ್ಯ ಮುಂದುವರಿದಿದ್ದು, ಅದು ಈವರೆಗಿನ 8 ಚಿನ್ನದ ಪದಕಗಳಲ್ಲಿ ಆರನ್ನು ಗೆದ್ದಿದೆ.
Advertisement