Advertisement
ಇಂಗ್ಲೆಂಡ್‌ಗೆ ನಾಲ್ಕನೇ ಫೈನಲ್ಕ್ರಿಕೆಟ್ ಜನಕರೆಂಬ ಖ್ಯಾತಿ ಪಡೆದ ಆಂಗ್ಲರಿಗೆ ಇದು 4ನೇ ವಿಶ್ವಕಪ್ ಫೈನಲ್. ಆದರೆ ಈ ಹಿಂದಿನ ಮೂರು ವಿಶ್ವಕಪ್ (1979, 1987, 1992) ನ ಫೈನಲ್‌ನಲ್ಲಿÉ ಸೋತು ಕಪ್ ಗೆಲ್ಲುವ ಅವಕಾಶದಿಂದ ಇಂಗ್ಲೆಂಡ್ ವಂಚಿತವಾಗಿತ್ತು. ಆದರೆ ಈ ಬಾರಿ ಹೇಗಾದರೂ ಕಪ್‌ಗೆ ಮುತ್ತಿಡಲು ಮಾರ್ಗನ್ ಪಡೆ ಪಣ ತೊಟ್ಟಿದೆ.
ಕಿವೀಸ್‌ಗೆ ಇದು ಸತತ 2ನೇ ವಿಶ್ವಕಪ್ ಫೈನಲ್. 2015ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸೋತು ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಆದರೆ ಈ ಬಾರಿ ಅದೃಷ್ಟದ ಬಲದಿಂದ ಫೈನಲ್‌ಗೆ ತಲುಪಿದ ನ್ಯೂಜಿಲ್ಯಾಂಡ್ ಹಿಂದಿನ ತಪ್ಪನ್ನು ಪುನರಾವರ್ತಿಸದೆ ಕಪ್ ಗೆಲ್ಲುವ ಯೋಜನೆ ಹಾಕಿಕೊಂಡಿದೆ. ಪ್ರಮುಖ ಆಟಗಾರರ ಪೈಪೋಟಿ
ಜಾಸನ್ ರಾಯ್- ಮಾರ್ಟಿನ್ ಗಪ್ಟಿಲ್
ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಾಗಿರುವ ಜಾಸನ್ ರಾಯ್ ಕೂಟದ ಎಲ್ಲ ಪಂದ್ಯಗಳಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್ ಗಳಿಸಿದ್ದ ನ್ಯೂಜಿಲ್ಯಾಂಡಿನ ಆರಂಭಕಾರ ಮಾರ್ಟಿನ್ ಗಪ್ಟಿಲ್ ಈ ಬಾರಿ ವೈಫಲ್ಯ ಅನುಭವಿಸಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದರಿಂದ ಅವರ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಆದರೆ ಇದುವರೆಗೂ ಸ್ಫೋಟಕ ಬ್ಯಾಟಿಂಗ್ ನಡೆಸದ ಗಪ್ಟಿಲ್ ಫೈನಲ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದಲ್ಲಿ ಪಂದ್ಯದ ಗತಿಯೇ ಬದಲಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ರಾಯ್ ಮತ್ತು ಗಪ್ಟಿಲ್ ಅವರ ಬ್ಯಾಟಿಂಗ್ ಪಂದ್ಯದ ಪ್ರಮುಖ ಆಕರ್ಷಣೆಯಾಗಿದೆ.
Related Articles
ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸಿದ ಮ್ಯಾಟ್ ಹೆನ್ರಿ ಮತ್ತು ಆಸ್ಟ್ರೇಲಿಯ ವಿರುದ್ಧದ 2ನೇ ಸೆಮಿಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕ್ರಿಸ್ ವೋಕ್ಸ್ ಫೈನಲ್ ಪಂದ್ಯದ ಪ್ರಮುಖ ಬೌಲಿಂಗ್ ಆಕರ್ಷಣೆಯಾಗಿದ್ದಾರೆ. ಫೈನಲ್‌ನಲ್ಲಿಯೂ ಇವರಿಂದ ಘಾತಕ ಸ್ಪೆಲ್ ನಡೆಯುವುದೇ ಎನ್ನುವುದು ಕಾದು ನೋಡಬೇಕಿದೆ.
Advertisement