ಮಿಂಚಿದ ಅಗ್ರ 5 ಬ್ಯಾಟ್ಸ್‌ಮನ್
Advertisement
ರೋಹಿತ್ ಶರ್ಮ (ಭಾರತ):ಒಂದೇ ವಿಶ್ವಕಪ್ ಏಕದಿನ ಕ್ರಿಕೆಟ್ ಕೂಟದಲ್ಲಿ ವಿಶ್ವ ದಾಖಲೆಯ 5 ಶತಕ ಬಾರಿಸಿದ ಪ್ರಚಂಡ ಬ್ಯಾಟ್ಸ್‌ಮನ್ ರೋಹಿತ್ ಶರ್ಮ. ಪಾಕಿಸ್ತಾನ ವಿರುದ್ಧ 140 ರನ್ ಸಿಡಿಸಿ ಅಬ್ಬರಿಸಿದ್ದರು. ಇಷ್ಟು ವರ್ಷದ ಕ್ರಿಕೆಟ್ ಜೀವನದಲ್ಲಿ ಈ ಕೂಟ ಅವಿಸ್ಮರಣೀಯವಾಗಿದೆ.
ಪಂದ್ಯ: 9
ರನ್: 648
ಗರಿಷ್ಠ ರನ್: 140 (ಪಾಕ್ ವಿರುದ್ಧ)
ಶತಕ: 5
ಅರ್ಧಶತಕ:1
ಐಪಿಎಲ್‌ನಲ್ಲಿ ಮಿಂಚಿದ್ದ ಆಸೀಸ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನಿರೀಕ್ಷೆಯಂತೆ ವಿಶ್ವಕಪ್‌ನಲ್ಲೂ ಸಿಡಿದರು. ಒಟ್ಟಾರೆ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಬಾಂಗ್ಲಾ ವಿರುದ್ಧ 166 ರನ್ ನೆನಪಿಡಬಹುದಾದ ಇನಿಂಗ್ಸ್ ಆಗಿದೆ.
ಪಂದ್ಯ:10
ರನ್: 647
ಗರಿಷ್ಠ ರನ್: 166 (ಬಾಂಗ್ಲಾ ವಿರುದ್ಧ)
ಶತಕ: 3
ಅರ್ಧಶತಕ: 3 ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ):
ಬಾಂಗ್ಲಾ ವಿಶ್ವಕಪ್ ಸೆಮೀಸ್‌ಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಆದರೆ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬ್ಯಾಟಿಂಗ್‌ನಿಂದ ಸ್ಮರಣೀಯವಾಗಿಸಿದ್ದಾರೆ. ವಿಂಡೀಸ್ ವಿರುದ್ಧ ಅಜೇಯ 124 ರನ್ ಶ್ರೇಷ್ಠ ಸಾಧನೆ.
ಪಂದ್ಯ: 8
ರನ್: 606
ಗರಿಷ್ಠ ರನ್: 124* (ವಿಂಡೀಸ್ ವಿರುದ್ಧ)
ಶತಕ: 2
ಅರ್ಧಶತಕ: 5
Related Articles
ನ್ಯೂಜಿಲೆಂಡ್‌ನ ಅಪತ್ಪಾಂದವ. ಪಂದ್ಯದಿಂದ ಪಂದ್ಯಕ್ಕೆ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಕಿವೀಸ್ ಫೈನಲ್ ಪ್ರವೇಶಿಸುವಲ್ಲಿ ನಾಯಕನ ಪಾತ್ರ ಅಪಾರ. ವಿಂಡೀಸ್ ವಿರುದ್ಧ 148 ರನ್ ಸಿಡಿಸಿರುವುದು ಶ್ರೇಷ್ಠ ಸಾಧನೆ.
ಪಂದ್ಯ:10
ರನ್: 552
ಗರಿಷ್ಠ ರನ್: 148 (ವಿಂಡೀಸ್ ವಿರುದ್ಧ)
ಶತಕ: 2
ಅರ್ಧಶತಕ: 2
Advertisement
ಜೋ ರೂಟ್ (ಇಂಗ್ಲೆಂಡ್): ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 2ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಹಲವು ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಿಸಿದ್ದಾರೆ. ಪಾಕ್ ವಿರುದ್ಧ 107 ರನ್ ಶತಕ ನೆನಪಿಡಬಲ್ಲ ಸಾಧನೆ.ಪಂದ್ಯ:11
ರನ್: 549
ಗರಿಷ್ಠ ರನ್: 107 (ಪಾಕ್ ವಿರುದ್ಧ)
ಶತಕ: 2
ಅರ್ಧಶತಕ: 3 ಮಿಂಚಿದ ಅಗ್ರ 5 ಬೌಲರ್
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ)
ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪ್ರತಿಭಾವಂತ. ಈ ಸಲ ವಿಶ್ವ ಕಪ್ ಕೂಟದಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ್ದ ಮೇರು ಬೌಲರ್. ಲಾರ್ಡ್ ಕ್ರೀಡಾಂಗಣದಲ್ಲಿ ನಡದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 26ಕ್ಕೆ 5 ವಿಕೆಟ್ ಕಬಳಿಸಿ ಮೆರೆದಿದ್ದು ಪ್ರಚಂಡ ಸಾಧನೆ.
ಪಂದ್ಯ: 10
ಪಡೆದ ವಿಕೆಟ್: 27
ಶ್ರೇಷ್ಠ ಬೌಲಿಂಗ್ 26/5 (ನ್ಯೂಜಿಲೆಂಡ್ ವಿರುದ್ಧ) ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ)
ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಲೀಗ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದರು. 8 ಪಂದ್ಯದಿಂದ 20 ವಿಕೆಟ್ ಕಬಳಿಸಿದ್ದರು. ಭಾರತದ ವಿರುದ್ಧದ ಪಂದ್ಯದಲ್ಲಿ 59ಕ್ಕೆ5 ವಿಕೆಟ್ ಕಬಳಿಸಿದ್ದು ಶ್ರೇಷ್ಠ ಸಾಧನೆಯಾಗಿದೆ. ಲೀಗ್ ಹಂತದ ಮುಕ್ತಾಯಕ್ಕೆ ಇವರು ಒಟ್ಟಾರೆಯಾಗಿ ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನದಲ್ಲಿದ್ದರು.
ಪಂದ್ಯ: 8
ಪಡೆದ ವಿಕೆಟ್: 20
ಶ್ರೇಷ್ಠ ಬೌಲಿಂಗ್: 59/5 (ಭಾರತ ವಿರುದ್ಧ) ಜೊಫ್ರಾ ಆರ್ಚರ್ (ಇಂಗ್ಲೆಂಡ್)
ಜೊಫ್ರಾ ಆರ್ಚರ್ ಮೂಲತಃ ಬಾರ್ಬಡಾಸ್‌ನವರು. ತಮ್ಮ ಪ್ರತಿಭೆಯಿಂದಲೇ ಇಂಗ್ಲೆಂಡ್ ತಂಡ ಸೇರಿಕೊಂಡು ಸಾಕಷ್ಟು ಹೆಸರು ಮಾಡಿದರು. ಈ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಒಟ್ಟು 9 ಪಂದ್ಯವಾಡಿ 19 ವಿಕೆಟ್ ಕಬಳಿಸಿ ಅತ್ಯುತ್ತಮ ನಿರ್ವಹಣೆ ನೀಡಿದ್ದರು.
ಪಂದ್ಯ: 9
ಪಡೆದ ವಿಕೆಟ್: 19
ಶ್ರೇಷ್ಠ ಬೌಲಿಂಗ್: 27/3 (ದ.ಆಫ್ರಿಕಾ ವಿರುದ್ಧ) ಜಸಿøàತ್ ಬುಮ್ರಾ (ಭಾರತ)
ಮಿಸ್ಟ್ರಿ ಬೌಲರ್ ಜಸಿøàತ್ ಬುಮ್ರಾ ಭಾರತ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಎಂದರೆ ತಪ್ಪಲ್ಲ. ಲೀಗ್‌ನ ಪ್ರತಿಯೊಂದು ಹಂತದಲ್ಲಿ ಗುಣಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಭಾರತ ತಂಡ ಸೆಮಿಫೈನಲ್‌ನಲ್ಲಿ ಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರೂ ಜಸಿøàತ್ ಸಾಧನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಪಂದ್ಯ: 9
ಪಡೆದ ವಿಕೆಟ್: 18
ಶ್ರೇಷ್ಠ ಬೌಲಿಂಗ್: 55/4 (ಬಾಂಗ್ಲಾ ವಿರುದ್ಧ) ಲಾಕಿ ಫರ್ಗ್ಯುಸನ್ (ನ್ಯೂಜಿಲೆಂಡ್)
ನ್ಯೂಜಿಲೆಂಡ್ ತಂಡ ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ಗಿಂತ ಬೌಲಿಂಗ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿದೆ. ಕಿವೀಸ್ ತಂಡದ ಪ್ರಮುಖ ಬೌಲರ್‌ಗಳಲ್ಲಿ ಲಾಕಿ ಫರ್ಗ್ಯುಸನ್ ಕೂಡ ಒಬ್ಬರು. ಆರಂಭದಲ್ಲಿ ದಾಳಿಗಿಳಿಯುವ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳ ದಿಕ್ಕು ತಪ್ಪಿಸುವುದರಲ್ಲಿ ನಿಸ್ಸೀಮರು.
ಪಂದ್ಯ: 9
ಪಡೆದ ವಿಕೆಟ್: 18
ಶ್ರೇಷ್ಠ ಬೌಲಿಂಗ್: 37/4 (ಆಫ^ನ್ ವಿರುದ್ಧ)