Advertisement

ಇಂದಿನಿಂದ ವಿಶ್ವಕಪ್‌ ವೈಭವ

02:27 PM May 30, 2019 | sudhir |

ಲಂಡನ್‌: ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟಕ್ಕೆ ಆಂಗ್ಲರ ನಾಡಿನಲ್ಲಿ ಗುರುವಾರ ವರ್ಣರಂಜಿತ ಚಾಲನೆ ದೊರೆಯಲಿದೆ. ‘ಕೆನ್ನಿಂಗ್ಟನ್‌ ಓವೆಲ್’ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಪ್ರಬಲ ದಕ್ಷಿಣ ಆಫ್ರಿಕಾ ಎದುರಿಸುವ ಮೂಲಕ ಮಹಾಸಮರಕ್ಕೆ ಕಿಚ್ಚು ಹೊತ್ತಿಕೊಳ್ಳಲಿದೆ. ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ಬಲಾಡ್ಯ ಎನ್ನುವುದನ್ನು ಈಗಾಗಲೇ ಸಾರಿದೆ. ದಕ್ಷಿಣ ಆಫ್ರಿಕಾ ಕೂಡ ಅಷ್ಟೇ ಪ್ರಬಲ ತಂಡವಾಗಿದ್ದು ಡು ಪ್ಲೆಸಿಸ್‌, ಹಾಶಿಮ್‌ ಆಮ್ಲ ರಂತಹ ದೈತ್ಯ ಆಟಗಾರರ ಒಳಗೊಂಡಿದೆ, ಒಟ್ಟಿನಲ್ಲಿ 46 ದಿನಗಳ ಒಟ್ಟಾರೆ ವಿಶ್ವ ಕ್ರಿಕೆಟ್ ಜಾತ್ರೆಯಲ್ಲಿ ಹತ್ತು ಹಲವಾರು ರೋಚಕ ಸನ್ನಿವೇಶಗಳು ಕಾಣುವುದಂತೂ ಖಚಿತ.

Advertisement

ಇಂಗ್ಲೆಂಡ್‌ ತಾರಾ ಆಟಗಾರರು: ಜಾನಿ ಬೇರ್‌ಸ್ಟೊ, ಜೋ ರೂಟ್, ಜೋಸ್‌ ಬಟ್ಲರ್‌, ಜೊಫ್ರಾ ಆರ್ಚರ್‌.

ದಕ್ಷಿಣ ಆಫ್ರಿಕಾ ತಾರಾ ಆಟಗಾರರು: ಡು ಪ್ಲೆಸಿಸ್‌, ಹಾಶಿಮ್‌ ಆಮ್ಲ, ಕ್ವಿಂಟನ್‌ ಡಿ ಕಾಕ್‌, ಕ್ಯಾಗಿಸೊ ರಬಾಡ.

ಭಾರತದ ಮೇಲಿದೆ ನಿರೀಕ್ಷೆ

ವಿಶ್ವಕಪ್‌ನಲ್ಲಿ ಈ ಸಲ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಪಿಲ್ ದೇವ್‌ (1983), ಎಂ.ಎಸ್‌. ಧೋನಿ (2011) ಬಳಿಕ ವಿರಾಟ್ ಕೊಹ್ಲಿ ಇಂಗ್ಲೆಂಡ್‌ ನೆಲದಲ್ಲಿ ಕಪ್‌ ಗೆದ್ದು ಭಾರತಕ್ಕೆ ಮರಳುವ ನಿರೀಕ್ಷೆ ಮೂಡಿಸಿದ್ದಾರೆ. ವಿಶ್ವ ಏಕದಿನ ಶ್ರೇಯಾಂಕದಲ್ಲಿ ನಂ.2 ಸ್ಥಾನದಲ್ಲಿರುವ ಭಾರತ, ಕೊಹ್ಲಿ, ರೋಹಿತ್‌ ಶರ್ಮ, ಶಿಖರ್‌ ಧವನ್‌, ಕೆ.ಎಲ್.ರಾಹುಲ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜರಂತಹ ತಾರಾ ಆಟಗಾರರನ್ನು ಒಳಗೊಂಡಿದೆ.

ಇಬ್ಬರಿಗೂ ಕೈಗೂಡದ ಕನಸು

ವಿಶ್ವಕ್ಕೆ ‘ಕ್ರಿಕೆಟ್ ಜನಕ’ರೆಂದು ಕರೆಯಿಸಿಕೊಳ್ಳುವ ಇಂಗ್ಲೆಂಡ್‌ 1979, 1987 ಹಾಗೂ 1992ರಲ್ಲಿ ವಿಶ್ವಕಪ್‌ ಫೈನಲ್ ಪ್ರವೇಶಿಸಿತ್ತು. ಆದರೆ ಮೂರೂ ಸಲವೂ ಕಪ್‌ ಗೆಲ್ಲದೆ ಕಣ್ಣೀರಿಟ್ಟಿತ್ತು. ಇದೀಗ 27 ವರ್ಷದ ಬಳಿಕ ಫೈನಲ್ ಪ್ರವೇಶಿಸಿ ಆತಿಥೇಯರು ಕಪ್‌ ಗೆಲ್ಲುವ ಸಂಕಲ್ಪ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ್ದೂ ಕೂಡ ಅದೃಷ್ಟ ಚೆನ್ನಾಗಿಲ್ಲ. 1992, 1999, 2007, 2015ರಲ್ಲಿ ಸೆಮಿಫೈನಲ್ ತನಕ ಪ್ರವೇಶಿಸಿತ್ತು. ಆದರೆ ಫೈನಲ್ ಪ್ರವೇಶಿಸಿ ಕಪ್‌ ಗೆಲ್ಲುವ ಭಾಗ್ಯ ದೊರಕಿಲ್ಲ. ಈ ಬರ ನೀಗಿಸುವ ನಿಟ್ಟಿನಲ್ಲಿ ಹರಿಣಗಳು ಪ್ರಾಮಾಣಿಕ ಪ್ರಯತ್ನ ನಡೆಸುವ ನಿರೀಕ್ಷೆ ಇದೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next