Advertisement

World Cup; ಅಮೋಘ ವಿಜಯಕ್ಕಾಗಿ ಆಸ್ಟ್ರೇಲಿಯಕ್ಕೆ ಅಭಿನಂದನೆಗಳು: ಪ್ರಧಾನಿ ಮೋದಿ

09:36 PM Nov 19, 2023 | Team Udayavani |

ಅಹ್ಮದಾಬಾದ್: ಭಾರತದ ಎದುರು ಅಧಿಕಾರಯುತವಾಗಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

”ಅಮೋಘ ವಿಶ್ವಕಪ್ ವಿಜಯಕ್ಕಾಗಿ ಆಸ್ಟ್ರೇಲಿಯಕ್ಕೆ ಅಭಿನಂದನೆಗಳು! ಪಂದ್ಯಾವಳಿಯಲ್ಲಿ ಅವರದು ಶ್ಲಾಘನೀಯ ಪ್ರದರ್ಶನ ಅದ್ಭುತವಾದ ವಿಜಯೋತ್ಸವದಲ್ಲಿ ಕೊನೆಗೊಂಡಿತು. ಟ್ರಾವಿಸ್ ಹೆಡ್ ಅವರ ಇಂದಿನ ಗಮನಾರ್ಹ ಆಟಕ್ಕೆ ಅಭಿನಂದನೆಗಳು” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಇದೆ ವೇಳೆ ಫೈನಲ್ ನಲ್ಲಿ ಎಡವಿದ ಭಾರತ ತಂಡಕ್ಕೂ ಧೈರ್ಯ ತುಂಬಿ” ಆತ್ಮೀಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ” ಎಂದು ಇನ್ನೊಂದು ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next