Advertisement

World Cup 2023 ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ; ಭಾರತಕ್ಕೆ ಸಿಗಲಿದೆ ಎರಡು ಪಂದ್ಯಗಳು

10:40 AM Jun 29, 2023 | Team Udayavani |

ಮುಂಬೈ: ಈ ಬಾರಿಯ ಏಕದಿನ ವಿಶ್ವಕಪ್ ಕೂಟವು ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿದೆ. ಈ ಬಾರಿಯ ಕೂಟದ ಆತಿಥ್ಯವನ್ನು ಭಾರತವು ವಹಿಸಿದ್ದು, ಹತ್ತು ನಗರದಲ್ಲಿ ಕೂಟವು ನಡೆಯಲಿದೆ. ಕೆಲವೇ ದಿನಗಳ ಹಿಂದೆ ವೇಳಾಪಟ್ಟಿ ಬಿಡುಗಡೆಯಾಗಿದೆ.

Advertisement

ಇದೀಗ ಐಸಿಸಿಯು ವಿಶ್ವಕಪ್ ಕೂಟದ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ರಿಲೀಸ್ ಮಾಡಿದೆ. ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಂದು ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ ನಡೆಯಲಿದೆ. ಭಾರತವು ಪಂದ್ಯಾವಳಿಯ ಉದ್ಘಾಟನೆಗೆ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಲಿದೆ. ಅಕ್ಟೋಬರ್ 3 ರಂದು ತಿರುವನಂತಪುರದಲ್ಲಿ ಕ್ವಾಲಿಫೈಯರ್ 1 ತಂಡದ ವಿರುದ್ಧ ಅಭ್ಯಾಸ ಪಂದ್ಯ ನಡೆಯಲಿದೆ.

ಅಭ್ಯಾಸಕ್ಕಾಗಿ ಅಂತಿಮಗೊಳಿಸಲಾದ ಮೂರು ಸ್ಥಳಗಳೆಂದರೆ ಹೈದರಾಬಾದ್, ತಿರುವನಂತಪುರಂ ಮತ್ತು ಗುವಾಹಟಿ. ಹೈದ್ರಾಬಾದ್ ಪ್ರಮುಖ ಪಂದ್ಯಾವಳಿಯಲ್ಲಿ ಆತಿಥ್ಯವನ್ನೂ ವಹಿಸಲಿದೆ. ಆದರೆ ಟೀಂ ಇಂಡಿಯಾ ಅಭ್ಯಾಸ ಪಂದ್ಯ ಅಥವಾ ಪ್ರಮುಖ ಲೀಗ್ ಪಂದ್ಯ ಯಾವುದನ್ನೂ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಆಡುವುದಿಲ್ಲ.

Advertisement

ಪಂದ್ಯಾವಳಿಯ ಸ್ವರೂಪವು 2019 ರಂತೆಯೇ ಇರುತ್ತದೆ. ಎಲ್ಲಾ 10 ತಂಡಗಳು ಒಮ್ಮೆ ಪರಸ್ಪರ ಆಡುತ್ತವೆ. ಈ ಹಂತದಲ್ಲಿ ಅಗ್ರ ಸ್ಥಾನ ಪಡೆದ ನಾಲ್ಕು ತಂಡಗಳು ಸೆಮಿಫೈನಲ್‌ ಪ್ರವೇಶಿಸುತ್ತದೆ. ಆತಿಥೇಯ ಭಾರತವು ಆಸ್ಟ್ರೇಲಿಯಾ, ಇಂಗ್ಲೆಂಡ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ನೇರವಾಗಿ ಅರ್ಹತೆ ಪಡೆದರೆ ಉಳಿದ ಎರಡು ತಂಡಗಳನ್ನು ಸದ್ಯ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next