Advertisement

ಲಂಕೆಗೆ ಕಾದಿದೆ ಕಿವೀಸ್‌ ಟೆಸ್ಟ್‌

02:17 AM Jun 01, 2019 | Sriram |

ಕಾರ್ಡಿಫ್: ಕಳೆದ ಸಲದ ರನ್ನರ್‌ ಅಪ್‌ ನ್ಯೂಜಿಲ್ಯಾಂಡ್‌ ಶನಿವಾರ “ಸೋಫಿಯಾ ಗಾರ್ಡನ್‌’ನಲ್ಲಿ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಎದುರಾಳಿ ದುರ್ಬಲ ಶ್ರೀಲಂಕಾ.

Advertisement

ಈ 4 ವರ್ಷಗಳಲ್ಲಿ ನ್ಯೂಜಿಲ್ಯಾಂಡ್‌ ತಂಡ ದಲ್ಲಿ ಭಾರೀ ಬದಲಾವಣೆ ಸಂಭವಿಸಿಲ್ಲ. ನಾಯಕತ್ವ ಎನ್ನುವುದು ಬ್ರೆಂಡನ್‌ ಮೆಕಲಮ್‌ ಅವರಿಂದ ಕೇನ್‌ ವಿಲಿಯಮ್ಸನ್‌ ಹೆಗಲೇರಿದೆ. ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇರಿಸಿದ್ದೊಂದು ಹೆಗ್ಗಳಿಕೆ. ತವರಿನಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮತ್ತು ಭಾರತದ ವಿರುದ್ಧ ಸೋಲನುಭವಿಸಿದೆ.

ಆದರೆ ನ್ಯೂಜಿಲ್ಯಾಂಡ್‌ ಮೇಲೆ ಯಾರೂ ವಿಪರೀತ ನಂಬಿಕೆ ಇರಿಸಿಲ್ಲ, ಅದು ಫೇವರಿಟ್‌ ಟ್ಯಾಗ್‌ ಕೂಡ ಅಂಟಿಸಿಕೊಂಡಿಲ್ಲ. ಏನಿದ್ದರೂ ಅಂಡರ್‌ ಡಾಗ್ಸ್‌ ಆಗಿಯೇ ಉಳಿದಿದೆ. ಹೀಗಾಗಿ ಒತ್ತಡರಹಿತವಾಗಿ ಆಡಲು ಸಾಧ್ಯವಾಗಲಿದೆ ಎಂಬುದು ಅಲ್ಲಿನ ಮಾಜಿ ವೇಗಿ ಜೇಮ್ಸ್‌ ಫ್ರ್ಯಾಂಕ್ಲಿನ್‌ ಅಭಿಪ್ರಾಯ.

ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಸರದಿ ಸಶಕ್ತವಾಗಿದೆ. ಬೌಲರ್‌ಗಳಿಗೆ ಇಂಗ್ಲೆಂಡ್‌ ಪಿಚ್‌ ಹೆಚ್ಚು ಸೂಟ್‌ ಆಗಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಮಣಿಸಿದ್ದರಿಂದ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿದೆ. ವೆಸ್ಟ್‌ ಇಂಡೀಸಿಗೆ 400 ರನ್‌ ಬಿಟ್ಟುಕೊಟ್ಟರೂ ಚೇಸಿಂಗ್‌ ವೇಳೆ 330ರ ತನಕ ಮುನ್ನುಗ್ಗಿ ಬಂದದ್ದು ಸಾಮಾನ್ಯ ಸಾಧನೆಯೇನಲ್ಲ.
ಶನಿವಾರದ ಮುಖಾಮುಖೀಯಲ್ಲಿ ನ್ಯೂಜಿಲ್ಯಾಂಡೇ ಫೇವರಿಟ್‌ ಎಂಬುದರಲ್ಲಿ ಅನುಮಾನವೇ ಇಲ್ಲ.

ಹಿಂದಿನ ಸಾಮರ್ಥ್ಯ ಹೊಂದಿಲ್ಲ
ಮೇಲ್ನೋಟಕ್ಕಷ್ಟೇ ಅಲ್ಲ, ಕಳೆದ ಕೆಲವು ತಿಂಗಳ ಸಾಧನೆಯನ್ನು ವಿಶ್ಲೇಷಿಸುವಾಗಲೂ ಶ್ರೀಲಂಕಾ ಈ ಕೂಟದ ಅತ್ಯಂತ ದುರ್ಬಲ ತಂಡವಾಗಿ ಗೋಚರಿಸುತ್ತಿದೆ. ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಲಾಗ ಹಾಕಿದೆ. 1996ರಲ್ಲಿ ಕಪ್‌ ಎತ್ತಿದ, ಅನಂತರ 2 ಸಲ ಫೈನಲ್‌ ಪ್ರವೇಶಿಸಿದ ಲಂಕಾ ತಂಡಕ್ಕೆ ಹೋಲಿಸಿದರೆ ಈಗಿನ ಪಡೆ ಏನೂ ಅಲ್ಲ.
4 ವರ್ಷಗಳ ಬಳಿಕ ತಂಡಕ್ಕೆ ಮರಳಿ ಮೊದಲ ಸಲ ನಾಯಕತ್ವ ವಹಿಸಿದ ಕರುಣರತ್ನೆ ಇಂಥದೊಂದು ಮಹತ್ವದ ಕೂಟದಲ್ಲಿ ಈ ಹೊಣೆಗಾರಿಕೆಯನ್ನು ಹೇಗೆ ನಿಭಾಯಿಸಬಲ್ಲರು ಎಂಬುದು ದೊಡ್ಡ ಪ್ರಶ್ನೆ.

Advertisement

ಸಿಲ್ಲಿ ಪಾಯಿಂಟ್‌
3 ಪಂದ್ಯ 4 ಸೋಲು
ಕಾರ್ಡಿಫ್ನಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಶ್ರೀಲಂಕಾ ಸೋತಿದೆ. ನ್ಯೂಜಿಲ್ಯಾಂಡ್‌ ಕೂಡ ಇಲ್ಲಿ ಕಳೆದ ಮೂರೂ ಪಂದ್ಯಗಳಲ್ಲಿ ಎಡವಿದೆ. 2013ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಲಂಕೆಯನ್ನು ಮಣಿಸಿದ ಬಳಿಕ ಕಿವೀಸ್‌ ಇಲ್ಲಿ ಗೆದ್ದಿಲ್ಲ.

13 ಜಯ
ನ್ಯೂಜಿಲ್ಯಾಂಡ್‌ ವಿರುದ್ಧ ಆಡಿದ ಕಳೆದ 20 ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾ ಕೇವಲ ನಾಲ್ಕರಲ್ಲಿ ಜಯಿಸಿದೆ. ನ್ಯೂಜಿಲ್ಯಾಂಡ್‌ 13 ಜಯ ಸಾಧಿಸಿದೆ. 3 ಪಂದ್ಯ ರದ್ದಾಗಿದೆ.

ಕೀಪ್‌ ಟಾಮ್‌ ಬ್ಲಿಂಡೆಲ್‌ ಏಕದಿನ ಪಂದ್ಯವನ್ನಾಡದ ನ್ಯೂಜಿಲ್ಯಾಂಡಿನ ಏಕೈಕ ಆಟಗಾರ.

Advertisement

Udayavani is now on Telegram. Click here to join our channel and stay updated with the latest news.

Next