Advertisement

ವಿಶ್ವಕಪ್ ಗೆ ವಿರಾಟ್ ಸೈನ್ಯ ರೆಡಿ: ನಾಲ್ಕನೇ ಸ್ಥಾನಕ್ಕೆ ಯಾರು?

09:51 AM Apr 17, 2019 | Team Udayavani |

ಮುಂಬೈ: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್ ಗೆ ಭಾರತ ತಂಡ ಪ್ರಕಟವಾಗಿದ್ದು , ವಿರಾಟ್ ಬಳಗದ ಬಹು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

Advertisement

ಎಂ ಎಸ್ ಕೆ ಪ್ರಸಾದ್ ನೇತೃತ್ವದಲ್ಲಿ ಮುಂಬೈಯಲ್ಲಿ ಸೋಮವಾರ ಸಭೆ ಸೇರಿದ ಆಯ್ಕೆ ಸಮಿತಿ ವಿಶ್ವ ಕಪ್ ಗಾಗಿ 15ಸದಸ್ಯರ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ . ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಆಡಲಿದ್ದು, ರೋಹಿತ್ ಶರ್ಮ ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ . ಬಹುತೇಕ ಕೊನೆಯ ವಿಶ್ವಕಪ್ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್ ಆಗಿದ್ದು, ಎರಡನೇ ಕೀಪರ್ ಆಗಿ ದಿನೇಶ್ ಕಾರ್ತಿಕ್ಆಯ್ಕೆಯಾಗಿದ್ದಾರೆ

ನಾಲ್ಕನೇ ಸ್ಥಾನಕ್ಕೆ ಯಾರು?
ಟೀಮ್ ಇಂಡಿಯಾದ ಬಹು ಚರ್ಚಿತ ನಾಲ್ಕನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದು ಒಂದು ವರ್ಷಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ರಿಷಬ್ ಪಂತ್ , ಅಂಬಾಟಿ ರಾಯುಡು, ವಿಜಯ್ ಶಂಕರ್, ಶ್ರೇಯಸ್ ಅಯ್ಯರ್ ನಡುವೆ ಸ್ಪರ್ಧೆ ಇದ್ದು, ಅಂತಿಮವಾಗಿ ವಿಜಯ್ ಶಂಕರ್ ಆಯ್ಕೆಯಾಗಿದ್ದಾರೆ . ಕನ್ನಡಿಗ ಕೆ.ಎಲ್ ರಾಹುಲ್ ತೃತೀಯ ಆರಂಭಿಕನಾಗಿ ಆಯ್ಕೆ ಆಗಿದ್ದಾರೆ .

ರವೀಂದ್ರ ಜಡೇಜಾ ಆಯ್ಕೆ
ತಂಡದಲ್ಲಿ ಮುಖ್ಯ ಸ್ಪಿನ್ನರ್ ಗಳಾಗಿ ಚಾಹಲ್ ಮತ್ತು ಕುಲದೀಪ್ ಯಾದವ್ ಇದ್ದು, ಮತ್ತೊಬ್ಬ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಇಂಗ್ಲೆಂಡ್ ವಿಮಾನ ಏರಲಿದ್ದಾರೆ . ಆಲ್ ರೌಂಡರ್ ಆಗಿರುವುದು ಜಡ್ಡು ಆಯ್ಕೆಗೆ ಇನ್ನೊಂದು ಕಾರಣ ಎನ್ನಬಹುದು

ಮೇ 30ರಿಂದ ಜೂನ್ 14ರವೆರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿದೆ. ಭಾರತ ಈ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

Advertisement

ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ( ನಾಯಕ), ರೋಹಿತ್ ಶರ್ಮ (ಉಪ ನಾಯಕ), ಮಹೇಂದ್ರ ಸಿಂಗ್ ಧೋನಿ ( ವಿಕೆಟ್ ಕೀಪರ್), ಶಿಖರ್ ಧವನ್, ಕೆ ಎಲ್ ರಾಹುಲ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ , ದಿನೇಶ್ ಕಾರ್ತಿಕ್ , ರವೀಂದ್ರ ಜಡೇಜಾ,   ವಿಜಯ್ ಶಂಕರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ.

Advertisement

Udayavani is now on Telegram. Click here to join our channel and stay updated with the latest news.

Next