Advertisement

ಮಾರ್ಗನ್‌ ಸಾಹಸ; ಇಂಗ್ಲೆಂಡ್‌ ಜಯಭೇರಿ

11:57 AM Jun 21, 2019 | Team Udayavani |

ಮ್ಯಾಂಚೆಸ್ಟರ್‌: ನಾಯಕ ಇಯಾನ್‌ ಮಾರ್ಗನ್‌ ಅವರ ಸಿಡಿಲಬ್ಬರದ ಶತಕದಿಂದಾಗಿ ಆತಿಥೇಯ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಕ್ರಿಕೆಟ್‌ ಕೂಟದ ಮಂಗಳವಾರದ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವನ್ನು 150 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ವೈಯಕ್ತಿಕ 17 ಸಿಕ್ಸರ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ ಮಾರ್ಗನ್‌ ಅವರ ಸಾಹಸದಿಂದ ಇಂಗ್ಲೆಂಡ್‌ 6 ವಿಕೆಟಿಗೆ 397 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ ಅಘಾ^ನಿಸ್ಥಾನ ಗೆಲುವಿಗಾಗಿ ಪ್ರಯತ್ನಿಸಿದರೂ ಅಂತಿಮವಾಗಿ 8 ವಿಕೆಟಿಗೆ 247 ರನ್‌ ಗಳಿಸಿ ಶರಣಾಯಿತು.
ಈ ಗೆಲುವಿನಿಂದ ಇಂಗ್ಲೆಂಡ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ ಸತತ 5ನೇ ಸೋಲು ಕಂಡ ಅಘಾ^ನಿಸ್ಥಾನ ಕೂಟದಿಂದ ಹೊರಬಿತ್ತು.

ಶತಕ ವಂಚಿತ ಬೇರ್‌ಸ್ಟೊ
ಆರಂಭಿಕ ಜೇಮ್ಸ್‌ ವಿನ್ಸ್‌ ಔಟಾದ ಬಳಿಕ ಬೇರ್‌ಸ್ಟೋ ಮತ್ತು ಜೋ ರೂಟ್‌ ಬಿರುಸಿನ ಆಟಕ್ಕೆ ಮುಂದಾದರು. ಪ್ರಚಂಡ ಫಾರ್ಮ್ನಲ್ಲಿರುವ ರೂಟ್‌ ಇಲ್ಲಿಯೂ ಶತಕ ದಾಖಲಿಸುವ ಉತ್ಸಾಹದಲ್ಲಿ ಬ್ಯಾಟಿಂಗ್‌ ಮೆರೆದಿದ್ದರು. ಅಘಾ^ನ್‌ ದಾಳಿಯನ್ನು ದಂಡಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 120 ರನ್ನು ಗಳ ಜತೆಯಾಟ ನಡೆಸಿದರು. ಓವರೊಂದಕ್ಕೆ 5- 6ರ ಸರಾಸರಲ್ಲಿ ರನ್‌ ಪೇರಿಸಿದ ಅವರಿಬ್ಬರು 30ನೇ ಓವರಿನಲ್ಲಿ ಬೇರ್ಪಟ್ಟರು. ಆಗ ತಂಡದ ಮೊತ್ತ 164 ಆಗಿತ್ತು.

ಸಿಕ್ಸರ್‌ಗಳ ಸುರಿಮಳೆ
ಉತ್ತಮವಾಗಿ ಆಡುತ್ತಿದ್ದ ಬೇರ್‌ಸ್ಟೋ 90 ರನ್‌ ಗಳಿಸಿ ನೈಬ್‌ಗ ವಿಕೆಟ್‌ ಒಪ್ಪಿಸಿದರು. 99 ಎಸೆತ ಎದುರಿಸಿದ ಅವರು 8 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು. ಇಲ್ಲಿಯವರೆಗೆ ತಂಡದ ರನ್‌ ಓಟ ಸಾಧಾರಣ ಮಟ್ಟದಲ್ಲಿತ್ತು. ಆದರೆ ನಾಯಕ ಮಾರ್ಗನ್‌ ಕ್ರೀಸ್‌ಗೆ ಆಗಮಿಸುತ್ತಲೇ ಮೈದಾನದಲ್ಲಿ ಸುಂಟರಗಾಳಿ ಬೀಸಿದ ಅನುಭವವಾಯಿತು. ಮಾರ್ಗನ್‌ ಮತ್ತು ರೂಟ್‌ ಓವರೊಂದಕ್ಕೆ 12ರನ್ನಿನಂತೆ ಆಡಿದರು.

ಕೇವಲ 71 ಎಸೆತ ಎದುರಿಸಿದ ಮಾರ್ಗನ್‌ 4 ಬೌಂಡರಿ ಮತ್ತು 17 ಸಿಕ್ಸರ್‌ ಸಿಡಿಸಿ 148 ರನ್‌ ಹೊಡೆದರು. ಇದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ. ಮೂರನೇ ವಿಕೆಟಿಗೆ ರೂಟ್‌ ಜತೆ 189 ರನ್ನುಗಳ ಜತೆಯಾಟ ನಡೆಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. 17 ಸಿಕ್ಸರ್‌ ಸಿಡಿಸುವ ಮೂಲಕ ಅವರು ನೂತನ ವಿಶ್ವದಾಖಲೆ ನಿರ್ಮಿಸಿದರು. ಈ ಮೊದಲು ಪಂದ್ಯವೊಂದರಲ್ಲಿ ರೋಹಿತ್‌, ಎಬಿಡಿ ಮತ್ತು ಗೇಲ್‌ 16 ಸಿಕ್ಸರ್‌ ಸಿಡಿಸಿದ್ದರು. ಈ ನಡುವೆ ಶತಕದಡೆಗೆ ದಾಪುಗಾಲು ಹಾಕುತ್ತಿದ್ದ ರೂಟ್‌ 88 ರನ್‌ ತಲುಪಿದಾಗ ಔಟಾದರು.

Advertisement

25 ಸಿಕ್ಸರ್‌
ಒಟ್ಟಾರೆ ಈ ಪಂದ್ಯದಲ್ಲಿ 25 ಸಿಕ್ಸರ್‌ ಬಾರಿಸಿರುವುದು ಕೂಡ ದಾಖಲೆಯಾಗಿದೆ. ವೆಸ್ಟ್‌ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ 24 ಸಿಕ್ಸರ್‌ ಬಾರಿಸಿರುವುದು ಇಷ್ಟರವರೆಗಿನ ಗರಿಷ್ಠ ಸಿಕ್ಸರ್‌ ಸಾಧನೆಯಾಗಿತ್ತು.

ವಿಶ್ವದಾಖಲೆಯ 17 ಸಿಕ್ಸರ್‌
ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ನಾಯಕ ಇಯಾನ್‌ ಮಾರ್ಗನ್‌ 17 ಸಿಕ್ಸರ್‌ ಸಿಡಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 16 ಸಿಕ್ಸರ್‌ ಬಾರಿಸಿದ ರೋಹಿತ್‌ ಶರ್ಮ (2013ರಲ್ಲಿ ಆಸ್ಟ್ರೇಲಿಯ), ಎಬಿ ಡಿ’ವಿಲಿಯರ್ (2015ರಲ್ಲಿ ವೆಸ್ಟ್‌ಇಂಡೀಸ್‌) ಮತ್ತು ಕ್ರಿಸ್‌ ಗೇಲ್‌ (2015ರಲ್ಲಿ ಜಿಂಬಾಬ್ವೆ) ದಾಖಲೆಯನ್ನು ಮುರಿದಿದ್ದಾರೆ.

ಜೀವನಶ್ರೇಷ್ಠ ನಿರ್ವಹಣೆ
ಸುಂಟರಗಾಳಿಯಂತೆ ಬ್ಯಾಟ್‌ ಬೀಸಿದ ಮಾರ್ಗನ್‌ ವಿಶ್ವಕಪ್‌ ಇತಿಹಾಸದಲ್ಲಿ ನಾಲ್ಕನೇ ಅತೀವೇಗದ ಶತಕ ದಾಖಲಿಸಿದ್ದಾರೆ. ಕೇವಲ 71 ಎಸೆತಗಳಲ್ಲಿ 17 ಸಿಕ್ಸರ್‌ ಮತ್ತು 4 ಬೌಂಡರಿ ನೆರವಿನಿಂದ 148 ರನ್‌ ಸಿಡಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ನಿರ್ವಹಣೆ ಮತ್ತು ಬಾಳ್ವೆಯ 13ನೇ ಏಕದಿನ ಶತಕವಾಗಿದೆ.

ಈ ವಿಶ್ವಕಪ್‌ನ ಗರಿಷ್ಠ ಮೊತ್ತ
ಮಾರ್ಗನ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್‌ ತಂಡವು 6 ವಿಕೆಟಿಗೆ 397 ರನ್‌ ಗಳಿಸಿದೆ. ಕೊನೆ ಹಂತದಲ್ಲಿ ಕೆಲವು ವಿಕೆಟ್‌ ಉರುಳಿದ್ದರಿಂದ ತಂಡದ ಮೊತ್ತ 400ರ ಗಡಿ ದಾಟುವುದು ತಪ್ಪಿದೆ. ಇದು ಈ ವಿಶ್ವಕಪ್‌ನ ಗರಿಷ್ಠ ಮೊತ್ತವಾಗಿತ್ತು. ಈ ಮೊದಲಿನ ಗರಿಷ್ಠ ಮೊತ್ತವನ್ನು ಕೂಡ ಇಂಗ್ಲೆಂಡ್‌ ಬಾರಿಸಿತ್ತು. ಜೂನ್‌ 8ರಂದು ಕಾರ್ಡಿಫ್ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್‌ ಆರು ವಿಕೆಟಿಗೆ 386 ರನ್‌ ಪೇರಿಸಿತ್ತು.

ರಶೀದ್‌ ಖಾನ್‌ “ಶತಕ’
ಅಫ್ಘಾನಿಸ್ಥಾನದ ಟಿ20 ಸೂಪರ್‌ಸ್ಟಾರ್‌ ಬೌಲರ್‌ ರಶೀದ್‌ ಖಾನ್‌ ದಾಳಿಯನ್ನು ಮಾರ್ಗನ್‌ ಸಹಿತ ಇಂಗ್ಲೆಂಡ್‌ ಆಟಗಾರರು ಪುಡಿಗಟ್ಟಿದ್ದಾರೆ. ರಶೀದ್‌ 9 ಓವರ್‌ ಎಸೆದಿದ್ದು 110 ರನ್‌ ಬಿಟ್ಟುಕೊಟ್ಟು ಮುಜುಗರಕ್ಕೆ ಒಳಗಾಗಿದ್ದಾರೆ. ಅವರ ದಾಳಿಯಲ್ಲಿ 11 ಸಿಕ್ಸರ್‌ ಹೊಡೆಯಲಾಗಿದೆ. ವಿಶ್ವಕಪ್‌ ಪಂದ್ಯದಲ್ಲಿ ರಶೀದ್‌ ಅವರ ಬೌಲಿಂಗ್‌ ಅತ್ಯಂತ ಕಳಪೆಯಾಗಿದೆ.

ಸ್ಕೋರ್‌ ಪಟ್ಟಿ

ಇಂಗ್ಲೆಂಡ್‌
ಜೇಮ್ಸ್‌ ವಿನ್ಸ್‌ ಸಿ ಮುಜಿಬ್‌ ಬಿ ಜದ್ರಾನ್‌ 26
ಜಾನಿ ಬೇರ್‌ ಸ್ಟೊ ಸಿ ಮತ್ತು ಬಿ ನಬಿ 90
ಜೋ ರೂಟ್‌ ಸಿ ರಹಮತ್‌ ಬಿ ನಬಿ 88
ಇಯಾನ್‌ ಮಾರ್ಗನ್‌ ಸಿ ರಹಮತ್‌ ಬಿ ನಬಿ 148
ಜಾಸ್‌ ಬಟ್ಲರ್‌ ಸಿ ನಬಿ ಬಿ ಜದ್ರಾನ್‌ 2
ಬೆನ್‌ ಸ್ಟೋಕ್ಸ್‌ ಬಿ ಜದ್ರಾನ್‌ 2
ಮೊಯಿನ್‌ ಅಲಿ ಔಟಾಗದೆ 31
ಕ್ರಿಸ್‌ ವೋಕ್ಸ್‌ ಔಟಾಗದೆ 1
ಇತರ 9
ಒಟ್ಟು (6ವಿಕೆಟಿಗೆ) 397
ವಿಕೆಟ್‌ ಪತನ: 1-44, 2-164, 3-353, 4-359, 5-362, 6-378.
ಬೌಲಿಂಗ್‌: ಮುಜೀಬ್‌ ಉರ್‌ ರೆಹಮನ್‌ 10-0-44-0
ದವ್ಲತ್‌ ಜದ್ರಾನ್‌ 10-0-85-3
ಮೊಹಮ್ಮದ್‌ ನಬಿ 9-0-70-0
ಗುಲ್ಬದಿನ್‌ ನಬಿ 10-0-68-3
ರಹಮತ್‌ ಶಾ 2-0-19-0
ರಶೀದ್‌ ಖಾನ್‌ 9-0-110-0

ಅಫ್ಘಾನಿಸ್ಥಾನ
ನೂರ್‌ ಅಲಿ ಜದ್ರಾನ್‌ ಬಿ ಆರ್ಚರ್‌ 0
ಗುಲ್ಬದಿನ್‌ ನಬಿ ಸಿ ಬಟ್ಲರ್‌ ಬಿ ವುಡ್‌ 37
ರಹಮತ್‌ ಶಾ ಸಿ ಬೇರ್‌ಸ್ಟೊ ಬಿ ಆದಿಲ್‌ 46
ಹಶ್ಮತುಲ್ಲ ಶಾಹಿದಿ ಬಿ ಆರ್ಚರ್‌ 76
ಅಸYರ್‌ ಅಫ್ಘಾನ್‌ ಸಿ ರೂಟ್‌ ಬಿ ಆದಿಲ್‌ 44
ಮೊಹಮ್ಮದ್‌ ನಬಿ ಸಿ ಸ್ಟೋಕ್ಸ್‌ ಬಿ ಆದಿಲ್‌ 9
ನಜೀಬುಲ್ಲ ಜದ್ರಾನ್‌ ಬಿ ವುಡ್‌ 15
ರಶೀದ್‌ ಖಾನ್‌ ಸಿ ಬೇರ್‌ಸ್ಟೊ ಬಿ ಆರ್ಚರ್‌ 8
ಇಕ್ರಮ್‌ ಅಲಿ ಔಟಾಗದೆ 3
ದವ್ಲತ್‌ ಜದ್ರಾನ್‌ ಔಟಾಗದೆ 0
ಇತರ 9
ಒಟ್ಟು( 8 ವಿಕೆಟ್‌ಗೆ) 247
ವಿಕೆಟ್‌ ಪತನ: 1-4, 2-52, 3-104, 4-198, 5-210, 6-234, 7-234, 8-247
ಬೌಲಿಂಗ್‌: ಕ್ರಿಸ್‌ ವೋಕ್ಸ್‌ 9-0-41-0
ಜೋಫ‌Å ಆರ್ಚರ್‌ 10-1-52-3
ಮೊಯಿನ್‌ ಅಲಿ 7-0-35-0
ಮಾರ್ಕ್‌ ವುಡ್‌ 10-1-40-2
ಬೆನ್‌ ಸ್ಟೋಕ್ಸ್‌ 4-0-12-0
ಆದಿಲ್‌ ರಶೀದ್‌ 10-0-66-3

Advertisement

Udayavani is now on Telegram. Click here to join our channel and stay updated with the latest news.

Next