Advertisement

ರಕ್ತದಾನದ ಜಾಗೃತಿ ಮೂಡಿಸುವುದು ಅಗತ್ಯ: ಡಾ|ಪ್ರಕಾಶ್‌

11:45 AM Jun 15, 2018 | Team Udayavani |

ದೇರಳಕಟ್ಟೆ: ರಕ್ತ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ, ಜನರೇ ದಾನವಾಗಿ ನೀಡುವುದರ ಮೂಲಕ ಹಲವು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಶ್ಲಾಘನೀಯ ಎಂದು ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿಯ ಡೀನ್‌ ಡಾ| ಪಿ.ಎಸ್‌. ಪ್ರಕಾಶ್‌ ಅಭಿಪ್ರಾಯಪಟ್ಟರು.

Advertisement

ದೇರಳಕಟ್ಟೆ ಜಸ್ಟೀಸ್‌ ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌, ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ.)ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಸೈಗೋಳಿ ಕೆ.ಎಸ್‌.ಆರ್‌.ಪಿ. ಯ ಏಳನೇ ಬೆಟಾಲಿಯನ್‌ ಪಡೆ ಆಶ್ರಯದಲ್ಲಿ ಕ್ಷೇಮ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಒಂದು ಬಾಟಲಿ ರಕ್ತ ಮಾತ್ರ ಒಬ್ಬನಿಗೆ ಸಿಗುತಿತ್ತು. ಆದರೆ ವೈಜ್ಞಾನಿಕತೆಯಿಂದ ಸದ್ಯ ಒಂದು ಬಾಟಲಿ ರಕ್ತವನ್ನು ನಾಲ್ಕು ಜನರಿಗೆ ಉಪಯೋಗಿಸಬಹುದಾಗಿದೆ. ಕ್ಷೇಮ ಆಸ್ಪತ್ರೆಯಲ್ಲಿ ಸೆಲ್‌ ಸಪರೇಟರ್‌, ಏರ್‌ ಫೆರಿಸಿಸ್‌ ಎನ್ನುವ ಸಾಧನಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಡೆಂಗ್ಯೂ, ಮಲೇರಿಯಾ, ರಕ್ತದ ಕ್ಯಾನ್ಸರ್‌ ಇರುವಂತಹವರಿಗೆ ಪ್ಲೇಟ್‌ಲೆಟ್‌ ಅಂಶವನ್ನು ಮಾತ್ರ ರಕ್ತದಿಂದ ತೆಗೆದು ಉಳಿದಿರುವುದನ್ನು ವಾಪಸ್ಸು ದಾನಿಗೆ ನೀಡುವ ಕೆಲಸವಾಗುತ್ತಿದೆ ಎಂದರು.

ಸಂದರ್ಭ ನಿಟ್ಟೆ ವಿ.ವಿ. ಕುಲಪತಿ ಡಾ| ಸತೀಶ್‌ ಕುಮಾರ್‌ ಭಂಡಾರಿ, ಆಡಳಿತ ವಿಭಾಗದ ಉಪ ಡೀನ್‌ ಡಾ| ಜೆ.ಪಿ. ಶೆಟ್ಟಿ, ಬ್ಲಿಡ್‌ ಬ್ಯಾಂಕ್‌ ಅಧಿಕಾರಿ ಡಾ| ಚಂದ್ರಿಕಾ, ಡಾ| ಶ್ರೀನಿವಾಸ್‌ ಕಾಮತ್‌, ಡಾ| ಶ್ರೀನಿವಾಸ್‌ ಭಟ್‌, ಕೆಎಸ್‌ಆರ್‌ಪಿ 7ನೇ ಬೆಟಾಲಿಯನ್ನಿನ ಉಪನಿರೀಕ್ಷಕರಾದ ಕೆ. ಶ್ರೀಧರ್‌, ಗಣೇಶ್‌ ನಾಯಕ್‌, ರೆಹಮಾನ್‌ ಬೇಗ್‌, ಹರೀಶ್‌, ಮುರಳಿ, ಎ.ಎಸ್‌ .ಐ. ಚನಿಯಪ್ಪ ನಾಯ್ಕ, ಮೋಹನ್‌ ಕುಮಾರ್‌ ಉಪಸ್ಥಿತರಿದ್ದರು.ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕಿ ಡಾ| ಸುಮಲತಾ, ಡಾ| ವಾದೀಶ್‌ ಭಟ್‌, ಕೆಎಸ್‌
ಆರ್‌ಪಿ 7ನೇ ಬೆಟಾಲಿಯನ್‌ನ ಅಸಿಸ್ಟೆಂಟ್‌ ಕಮಾಂಡೆಂಟ್‌ ಶರತ್‌ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ಕೆಎಸ್‌ಆರ್‌ಪಿ ಅಧಿಕಾರಿಗಳು, ಸಿಬಂದಿ, ನಿಟ್ಟೆ ವಿ.ವಿ. ಎನ್ನೆಸ್ಸೆಸ್‌ ವಿದ್ಯಾರ್ಥಿಗಳು, ರಕ್ತದಾನ ಮಾಡಿದರು.ಇದೇ ಸಂದರ್ಭ ಆಸ್ಪತ್ರೆಯ ಗ್ಲಾಸ್‌ ಹೌಸ್‌ನಲ್ಲಿ ರಕ್ತದಾನ ಕುರಿತು ಬೀದಿ ನಾಟಕವನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಜನರಿಗೆ ಸ್ಫೂರ್ತಿ
ಕೆಎಸ್‌ಆರ್‌ಪಿ 7 ನೇ ಬೆಟಾಲಿಯನ್‌ನ ಅಸಿಸ್ಟೆಂಟ್‌ ಕಮಾಂಡೆಂಟ್‌ ಶರತ್‌ ಮಾತನಾಡಿ, ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಮಾಡುವ ಮೂಲಕ ಬೇರೆ ಜನರಿಗೆ ಸ್ಫೂರ್ತಿ ಸಿಕ್ಕಿದೆ. ರಕ್ತದಾನ ಮಾಡುವುದರಲ್ಲಿ ಇತರರಿಗೆ ತಪ್ಪು ತಿಳಿವಳಿಕೆಯಿದ್ದು, ಈ ಮೂಲಕ ಅದನ್ನು ಹೋಗಲಾಡಿಸಬಹುದು. ಹಿಂದೆಯೂ ಕೆಎಸ್‌ಆರ್‌ಪಿ ಪಡೆಯ ಅಧಿಕಾರಿಗಳು ಹಾಗೂ ಸಿಬಂದಿ ರಕ್ತದಾನ ನಡೆಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next