Advertisement

ವಿಶ್ವ ತಂಬಾಕು ವಿರೋಧಿ ದಿನಾಚರಣೆ

04:33 PM Jun 04, 2022 | Team Udayavani |

ಎಚ್‌.ಡಿ.ಕೋಟೆ: ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಸೇರಿದಂತೆ ಹೃದಯ ಸಂಬಂಧಿ ಕಾಯಿಲೆಗಳು ಆವರಿಸಿಕೊಳ್ಳಲಿದ್ದು, ಜನಸಾ ಮಾನ್ಯರು ತಂಬಾಕು ಸೇವನೆ ತ್ಯಜಿಸುವಂತೆ ಪದವಿಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಬೋರಮ್ಮ ಅಂಗಡಿ ಮನವಿಮಾಡಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಶ್ರೀನಂದನ ಜ್ಞಾನವಿಕಾಸಯೋಜನೆ ಕಾರ್ಯಕ್ರಮದಡಿಯಲ್ಲಿತಾಲೂಕಿನ ಮಾದಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಂಬಾಕು ಸೇವನೆಯಿಂದ ಪ್ರತಿದಿನ ದೇಶದಲ್ಲಿ ಸಾವಿರಾರು ಮಂದಿಜೀವ ಕಳೆದು ಕೊಳ್ಳುತ್ತಿ ದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಶ್ವಾಸಕೋಶದ ತೊಂದರೆ, ಕ್ಯಾನ್ಸರ್‌ಸೇರಿದಂತೆ ಇನ್ನಿತರ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಿತ್ಯ 250ಕ್ಕೂ ಅಧಿಕ ಮಂದಿ ಹೃದ್ರೋಗ ಸಂಬಂಧಿಕಾಯಿಲೆಗಳಿಂದ ಇಹಲೋಕ ತ್ಯಜಿಸುತ್ತಿದ್ದಾರೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರವಾಗಿದ್ದು ಸಾರ್ವಜನಿಕರುಪಾನ್‌ ಮಸಲಾ, ಗುಟ್ಕಗಳಂತ ತಂಬಾಕು ಮಿಶ್ರಿತ ಮಾದಕ ವಸ್ತುಗಳಿಗೆ ದಾಸರಾಗಬೇಡಿ ಎಂದ ಅವರು, ತಂಬಾಕು ಸೇವನೆಯಿಂದಾಗು ದುಷ್ಪರಿಣಾಮ ಗಳುಅವುಗಳನ್ನು ತಡೆಗಟ್ಟುವ ವಿಧಾನಗಳನ್ನು ಕುರಿತು ವಿವರಿಸಿದರು.

ಮಾದಾಪುರ ಸರ್ಕಾರಿ ಪ್ರೌಢಶಾಲೆಯಮುಖ್ಯ ಶಿಕ್ಷಕಿ ಜಬಿನ್‌, ಶಿಕ್ಷಕರಾದನಾಗರಾಜು, ಪ್ರಸನ್ನಕುಮಾರ್‌, ರಕ್ಷಣಾ ಸೇವಾ ಟ್ರಸ್ಟ್‌ ಅಧ್ಯಕ್ಷೆ ಚಂದ್ರಿಕಾದೊರೆಸ್ವಾಮಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿ‌ನಿ ಎಚ್‌.ಜಿ., ವಲಯ ಮೇಲ್ವಿಚಾರಕಿ ವಿನುತಾ ಶೆಟ್ಟಿ, ಸೇವಾ ಪ್ರತಿನಿಧಿ ಶಿಲ್ಪಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next