Advertisement

ಜಾಗೃತಿಯಿಂದ ಏಡ್ಸ್‌ ನಿಯಂತ್ರಣ ಸಾಧ್ಯ

12:52 PM Dec 02, 2020 | Suhan S |

ಮಂಡ್ಯ: ಮುನ್ನೆಚ್ಚರಿಕೆ ಹಾಗೂ ಜಾಗೃತಿಯಿಂದ ಏಡ್ಸ್‌ ನಿಯಂತ್ರಿಸಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್‌ ವಿಭಾಗ ಘಟಕದಿಂದ ನಡೆದ ವಿಶ್ವ ಏಡ್ಸ್‌ದಿನಾಚರಣೆ-2020 ಹಾಗೂ ಸಕ್ರಿಯ ಕ್ಷಯ ರೋಗ ಪತ್ತೆ ಜನ ಜಾಗೃತಿ ಜಾಥಾಗೆ ಚಾಲನೆನೀಡಿ ಮಾತನಾಡಿದರು.

ಅಸುರಕ್ಷಿತ ಲೈಂಗಿಕಕ್ರಿಯೆ ಬೇಡ: ಏಡ್‌ ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಹರಡುತ್ತದೆ. ಇದು ಹೆಚ್ಚಾಗಿ ಯುವಕ- ಯುವತಿಯರಲ್ಲಿ ಕಂಡು ಬರುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಏಡ್ಸ್‌ ಬರುವುದಕ್ಕಿಂತ ಮುಂಚೆ ನಿಯಂತ್ರಿಸಲು ಮುಂದಾಗಬೇಕು. ಆಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಗಣನೀಯ ಇಳಿಕೆ: ಇಂದು ವಿಶ್ವದಾದ್ಯಂತಏಡ್ಸ್‌ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ 8400 ಏಡ್ಸ್‌ ರೋಗಿಗಳಿದ್ದು, ಪ್ರತಿ ವರ್ಷ ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದರೂ ಕೂಡ ವರ್ಷದಲ್ಲಿ ಯಾವ ಪ್ರಕರಣಗಳು ಇಲ್ಲದಂತೆ ಶೂನ್ಯ ಸಾಧನೆ ಮಾಡಲು ಜನಜಾಗೃತಿ ಜಾಥಾ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಾರಕ ಡ್ರಗ್ಸ್‌ ಸೇವನೆ ಒಳ್ಳೆಯದಲ್ಲ: ಕಳೆದ ವರ್ಷ 159 ಪ್ರಕರಣಗಳು ಕಂಡು ಬಂದಿವೆ. ಎಚ್‌ಐವಿ ನಿಯಂತ್ರಿಸಲು ಮದುವೆಗೂ ಮುಂಚೆ ಯಾವುದೇ ಅಸುರಕ್ಷಿತ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬಾರದು. ಲೈಂಗಿಕ ಕ್ರಿಯೆಗಳಲ್ಲಿ ಕ್ಷಿ‌ ತ ಸಾಧನಗಳನ್ನು ಬಳಸಬೇಕು. ತಾಯಿಯಿಂದ ಮಗುವಿಗೆ ಬಾರದಂತೆ ವೈದ್ಯಕೀಯಚಿಕಿತ್ಸೆಗಳನ್ನುಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಾರಕ ಡ್ರಗ್ಸ್ ಗಳನ್ನು ಬಳಸಬಾರದು. ಅಸುರಕ್ಷಿತ ರಕ್ತವನ್ನು ಪಡೆದುಕೊಳ್ಳುವ ಮೂಲಕ ಎಚ್‌ಐವಿ ಹರಡುತ್ತದೆ ಎಂದು ತಿಳಿಸಿದರು.

Advertisement

ಅಸ್ಪೃಶ್ಯರಂತೆ ಕಾಣಬೇಡಿ: ಈ ಎಲ್ಲ ಕ್ರಮಗಳನ್ನು ಅನುಸರಿಸುವುದರಿಂದ ಏಡ್ಸ್‌ ರೋಗ ಬರದಂತೆ ತಡೆಗಟ್ಟಬಹುದಾಗಿದೆ. ಎಚ್‌ಐವಿ ರೋಗದ ವ್ಯಕ್ತಿಗಳ ಜತೆ ಊಟ, ಆಟ, ಜೊತೆಯಲ್ಲಿ ಮಲಗುವುದಿರಿಂದ, ಮುಟ್ಟಿಸಿಕೊಳ್ಳುವುದರಿಂದ ಎಚ್‌ಐವಿ ಹರಡುವುದಿಲ್ಲ.ಕಾಯಿಲೆಯ ಬಗ್ಗೆ ಜಾಗೃತಿ ಹಾಗೂ ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ನಿಯಂತ್ರಿಸಬಹುದು. ಏಡ್ಸ್‌ರೋಗಿಗಳನ್ನು ಅಸ್ಪೃಶ್ಯರಂತೆ ಕಾಣಬಾರದು. ಎಚ್‌ಐವಿ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ದೀರ್ಘಾವಧಿ ಅಂದರೆ ಸುಮಾರು 25 ವರ್ಷಗಳ ಕಾಲ ಬದುಕಬಲ್ಲರು ಎಂಬುದು ಈಗಾಗಲೇ ಹಲವು ಪ್ರಕರಣಗಳಲ್ಲಿ ಸಾಭೀತಾಗಿದೆ. ರೋಗ ಬಂದವರು ಬೇರೆಯವರಿಗೆ ಹರಡದಂತೆ ಮುನ್ನೆಚ್ಚರಿಕೆ ಹಾಗೂ ಜಾಗೃತಿ ವಹಿಸುವುದು ಸೂಕ್ತ ಎಂದರು.

ಸಕ್ರಿಯ ಕ್ಷಯ ರೋಗ ಪತ್ತೆ ಜಾಗೃತಿ: ಡಿ.1ರಿಂದ 31ರವರೆಗೆ ಕ್ಷಯ ರೋಗ ನಿರ್ಮೂಲನೆ ಮಾಡಬೇಕು. ಸಕ್ರಿಯ ಕ್ಷಯ ರೋಗ ಪತ್ತೆ ಮಾಡಿಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಅದರಂತೆ ಜನ ಜಾಗೃತಿ ಮೂಡಿಸಲಾಗುತ್ತದೆ. ಕೋವಿಡ್ ಸೋಂಕು ಇದ್ದ ಪರಿಣಾಮ ಈ ವರ್ಷ ಕ್ಷಯ ರೋಗಿಗಳ ಸಮರ್ಪಕ ಪತ್ತೆಯಾಗಿಲ್ಲ. ಸತತ ಮೂರು ವಾರಗಳ ಕಾಲ ಕೆಮ್ಮು, ಜ್ವರ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಆ ಹಿನ್ನೆಲೆಯಲ್ಲಿ ಏಡ್ಸ್‌ ಹಾಗೂ ಕ್ಷಯ ರೋಗ ನಿರ್ಮೂಲನೆಗೆ ಸಮುದಾಯದ ಸಹಕಾರ ಅಗತ್ಯವಾಗಿದೆ. ಆದ್ದರಿಂದ ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಜಿಪಂ ಸಿಇಒ ಎಸ್‌.ಎಂ.ಜುಲಿಕರ್‌ ಉಲ್ಲಾ, ಜಿಲ್ಲಾ ಆರೋಗ್ಯಮತ್ತು ಕುಟುಂಬಕಲ್ಯಾಣಾಧಿಕಾರಿಡಾ.ಎಚ್‌ .ಪಿ.ಮಂಚೇಗೌಡ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅನಿಲ್‌ಕುಮಾರ್‌,ರೆಡ್‌ಕ್ರಾಸ್‌ಸಂಸ್ಥೆಯಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ, ಅನನ್ಯ ಆರ್ಟ್‌ ಸಂಸ್ಥೆಯ ಅನುಪಮ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next