Advertisement
ಅವರು ಬುಧವಾರ ಬಿ.ಸಿ.ರೋಡಿನ ಮೊಡಂ ಕಾಪು ಇನೆ#ಂಟ್ ಜೀಸಸ್ ಚರ್ಚ್ ಸಭಾಂಗಣದಲ್ಲಿ ದ.ಕ.ಜಿಲ್ಲಾಡಳಿತ, ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಸ್ವಯಂಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವ ಏಡ್ಸ್ ದಿನ-2021 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಗರ್ಭಿಣಿ ಸೋಂಕಿತೆಯಾಗಿದ್ದರೆ ಮಗುವಿಗೂ ಅದು ಹರಡುವ ಅಪಾಯವಿದ್ದು, ಪ್ರಸ್ತುತ ಚಿಕಿತ್ಸೆಯ ಮೂಲಕ ಅದನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ರೋಗ ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳಿಂದ ಪ್ರಸ್ತುತ ರೋಗದ ಪ್ರಮಾಣ 0.2 ಶೇ.ದಷ್ಟಿದೆ ಎಂದರು.
Related Articles
Advertisement
ಸಮಾರಂಭಕ್ಕೆ ಪೂರ್ವಭಾವಿಯಾಗಿ ಬಿ.ಸಿ.ರೋಡಿನ ಸರ್ಕಲ್ ಬಳಿಯಿಂದ ಮೆರವಣಿಗೆ ನಡೆದಿದ್ದು, ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಚಾಲನೆ ನೀಡಿದರು.
ಸಮುದಾಯದ ಜತೆ ಸಹಭಾಗಿತ್ವ ಅಗತ್ಯಉಡುಪಿ: ಜಿಲ್ಲೆಯಲ್ಲಿ 2016ರಿಂದ 2021ರ ವರೆಗೆ ಗರ್ಭಿಣಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡಿದ ಪ್ರಕರಣ ವರದಿಯಾಗಿಲ್ಲ ಎನ್ನುವುದು ಉಡುಪಿಗೆ ಹೆಮ್ಮೆಯ ವಿಚಾರವಾಗಿದೆ. ಸಮುದಾಯದ ಜತೆಗೆ ಸಹಭಾಗಿತ್ವ ಆದರೆ ಮಾತ್ರ ವಿವಿಧ ರೀತಿಯ ಸೋಂಕು ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ವಿದ್ಯಾರತ್ನ ಸ್ಕೂಲ್ ಕಾಲೇಜ್ ಆಫ್ ನರ್ಸಿಂಗ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನ -2021 ಜಾಗೃತಿ ಕಾರ್ಯಕ್ರಮವನ್ನು ಅಂಬಲ ಪಾಡಿಯ ರಾಷ್ಟ್ರೀಯ ಸ್ವಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಎಚ್‌ಐವಿ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಕೋವಿಡ್‌ನಿಂದ ಇವರನ್ನು ರಕ್ಷಿಸಬೇಕು. ಅಸಮಾನತೆಯನ್ನು ತೊಲಗಿಸಿದರೆ ಸಾಂಕ್ರಾಮಿ ಕತೆಯನ್ನು ತಡೆಗಟ್ಟಬಹುದು. ಅದಕ್ಕಾಗಿ ಸಮಾಜದ ಜನತೆ ಒಂದಾಗಿ ಜಾಗೃತಿಗಾಗಿ ಕೈ ಜೋಡಿಸಬೇಕು ಎಂದರು. ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾರ್ಯದಲ್ಲಿ ಸೇವೆಗೈದವರನ್ನು ಗುರುತಿಸಿ, ಸಮ್ಮಾನಿಸಲಾಯಿತು. ಜಿ. ಪಂ. ಸಿಇಒ ಡಾ| ನವೀನ್ ಭಟ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿಯ ಹಿರಿಯ ನಿರ್ದೇಶಕ ಗಣೇಶ್ ವಿ., ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ದ ರವಿರಾಜ್ ನಾಯಕ್, ವಂಡ್ಸೆ ಆಸರೆ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವ ವಂಡ್ಸೆ ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಎಸ್.ವಿ. ಮಾತನಾಡಿದರು.