Advertisement

ವಿವಿಧ ಕಡೆಗಳಲ್ಲಿ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ

12:27 PM May 08, 2022 | Team Udayavani |

ಮಹಾನಗರ: ನಗರದ ವಿವಿಧ ಕಡೆಗಳಲ್ಲಿ ರಸ್ತೆ ಕಾಮಗಾರಿ ಇರುವು ದರಿಂದ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಪಾಲಿಕೆ ವ್ಯಾಪ್ತಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ದ್ವಾರದ ಮುಂದೆ ಕಲ್ವರ್ಟ್‌ ಒಳಚರಂಡಿ ಜಾಲದ ವ್ಯವಸ್ಥೆಯನ್ನು ಪುನರುಜ್ಜೀವನ ಮತ್ತು ಪುನರ್‌ ನಿರ್ಮಾಣ ಮಾಡುವ ಕಾಮಗಾರಿ ಇರುವ ಕಾರಣ ಮೇ 7ರಿಂದ ಜೂ. 5ರ ವರೆಗೆ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಬಟ್ಟಗುಡ್ಡ ಜಂಕ್ಷನ್‌ನಿಂದ ಕದ್ರಿ ದೇವಸ್ಥಾನ ರಸ್ತೆಯ ಮೂಲಕ ಮಲ್ಲಿಕಟ್ಟೆ ಜಂಕ್ಷನ್‌ ಕಡೆಗೆ ಹೋಗುವ ಎಲ್ಲಾ ವಾಹನಗಳು ಬಟ್ಟಗುಡ್ಡ ಜಂಕ್ಷನ್‌ನಿಂದ ಕದ್ರಿ ಕಂಬ್ಳ ರಸ್ತೆಯಲ್ಲಿ ನೇರವಾಗಿ ಸಂಚರಿಸಿ ಭಾರತ್‌ ಬೀಡಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಮಲ್ಲಿಕಟ್ಟೆ ಜಂಕ್ಷನ್‌ ಕಡೆಗೆ ಸಂಚರಿಸಬೇಕು.

ಮಲ್ಲಿಕಟ್ಟೆ ಜಂಕ್ಷನ್‌ನಿಂದ ಕದ್ರಿ ದೇವಸ್ಥಾನದ ರಸ್ತೆಯ ಮೂಲಕ ಬಟ್ಟಗುಡ್ಡೆ ಜಂಕ್ಷನ್‌ ಕಡೆಗೆ ಹೋಗುವ ಎಲ್ಲ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‌ನಿಂದ ಭಾರತ್‌ ಬೀಡಿ ಜಂಕ್ಷನ್‌ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬ್ಳ ರಸ್ತೆಯ ಮೂಲಕ ಬಟ್ಟಗುಡ್ಡೆ ಜಂಕ್ಷನ್‌ ಕಡೆಗೆ ಸಂಚರಿಸುವುದು. ಮಲ್ಲಿಕಟ್ಟೆ ವೃತ್ತದ ಬಳಿ ಇರುವ ಕದ್ರಿ ದೇವಸ್ಥಾನದ ದ್ವಾರದ ಮೂಲಕ ಕದ್ರಿ ದೇವಸ್ಥಾನಕ್ಕೆ ಹೋಗುವ ಎಲ್ಲ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್‌ ನಲ್ಲಿ ನೇರವಾಗಿ ಭಾರತ್‌ ಬೀಡಿ ಜಂಕ್ಷನ್‌ ಕಡೆಗೆ ಸಂಚರಿಸಿ ಬಲಕ್ಕೆ ತಿರುಗಿ ಕದ್ರಿ ಕಂಬ್ಳ ರಸ್ತೆಯಲ್ಲಿ ಮುಂದಕ್ಕೆ ಸಂಚರಿಸಿ ಕದ್ರಿ ದೇವಸ್ಥಾನದ ರಸ್ತೆ ಮೂಲಕ ಕದ್ರಿ ದೇವಸ್ಥಾನ ತಲುಪುವುದು.

ಹೊಸಬೆಟ್ಟು ಫಿಶರೀಸ್‌ ರಸ್ತೆ

Advertisement

ಪಾಲಿಕೆ ವ್ಯಾಪ್ತಿಯ ವಿಭಾಗ ನಂಬರ್‌ -7ರ ಹೊಸಬೆಟ್ಟು ಫಿಶರೀಸ್‌ ರಸ್ತೆಯಲ್ಲಿ ಕಿರುಸೇತುವೆ ನಿರ್ಮಾಣ ಕಾಮಗಾರಿ ಇರುವುದರಿಂದ ಜೂ. 19ರ ವರೆಗೆ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಮಗಾರಿ ನಡೆಯುವ ವೇಳೆ ರಾಷ್ಟ್ರೀಯ ಹೆದ್ದಾರಿ – 66ರ ಹೊಸಬೆಟ್ಟು ಜಂಕ್ಷನ್‌ ಕಡೆಯಿಂದ ಹೊಸಬೆಟ್ಟು ಬೀಚ್‌ ಕಡೆ ಅಂದರೆ ಫಿಶರೀಸ್‌ ರಸ್ತೆ ಕಡೆಗೆ ಹೋಗುವಂತಹ ಹಾಗೂ ಬರುವಂತಹ ಲಘುವಾಹನಗಳು (ಕಾರು ಆಟೋರಿಕಾ, ದ್ವಿಚಕ್ರ) ರಾಷ್ಟ್ರೀಯ ಹೆದ್ದಾರಿ-66ರ ರಸ್ತೆ ಯಲ್ಲಿ ಹೊಸಬೆಟ್ಟು ಜಂಕ್ಷನ್‌ನಲ್ಲಿ ಇರುವ ಬಸ್ಸು ನಿಲ್ದಾಣದ ಶ್ರೀ ಪವನ್‌ ಮಾರ್ಬಲ್ಸ್‌ ಆ್ಯಂಡ್‌ ಗ್ರಾನೈಟ್ಸ್‌ನ ಕಾಂಕ್ರೀಟ್‌ ರಸ್ತೆಯಲ್ಲಿ ಸಾಗಿ ಶ್ರೀ ಧನ್ವಂತರಿ ಆಯುರ್ವೇದಿಕ್‌ ಕ್ಲಿನಿಕ್‌ ರಸ್ತೆಯ ಮೂಲಕ ಸಾಗಿ ಫಿಶರೀಸ್‌ ಶಾಲೆಯ ಮುಖ್ಯ ರಸ್ತೆಯಲ್ಲಿ ಸಾಗಿ ಫಿಶರೀಸ್‌ ಹಾಗೂ ಬೀಚ್‌ ಕಡೆಗೆ ಸಂಚರಿಸಿ ವಾಪಾಸು ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸುವುದು.

ಸುರತ್ಕಲ್‌ ಕಡೆಗೆ ಸಂಚರಿಸುವ ರೂಟ್‌ ನಂ.59 ಬಸ್‌ಗಳು ರಾಷ್ಟ್ರೀಯ ಹೆದ್ದಾರಿ 66ರ ಚಿತ್ರಾಪುರ ದ್ವಾರ ರಸ್ತೆಯ ಮೂಲಕ ಶೆಟ್ಟಿ ಜನರಲ್‌ ಸ್ಟೋರ್‌ನ ಮುಂದೆ ಸಾಗಿ ಫಿಶರೀಸ್‌ ಶಾಲೆಯಾಗಿ ಮುಂದೆ ಸಾಗಿ ಈಶ್ವರ ನಗರ ಬಲ ರಸ್ತೆಯ ಮೂಲಕ ನವನಗರ ನಂದಾದೀಪ ಅಪಾರ್ಟ್‌ಮೆಂಟ್‌ ಕಡೆ ಸಾಗಿ ಲಿಂಗಪ್ಪ ಸಾಲಿಯಾನ್‌ ಕಂಪೌಂಡ್‌ ಬಳಿ ಬಲ ರಸ್ತೆ ಕಡೆ ಸಾಗಿ ಕಾಳಪ್ಪಯ್ಯ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ-66ರ ರಸ್ತೆಯ ಮೂಲಕ ಸುರತ್ಕಲ್‌ ಕಡೆ ಸಂಚರಿಸಿ ವಾಪಾಸು ಬರಲು ಅದೇ ಮಾರ್ಗದ ರಸ್ತೆಯನ್ನು ಉಪಯೋಗಿಸುವುದು.

ಕೋಡಿಕಲ್‌ ಮುಖ್ಯ ರಸ್ತೆ

ಕೋಡಿಕಲ್‌ ಮುಖ್ಯರಸ್ತೆಯಲ್ಲಿ 5ನೇ ಬಿ ಅಡ್ಡ ರಸ್ತೆ ಬಳಿಯಿಂದ 10ನೇ ಬಿ ಅಡ್ಡ ರಸ್ತೆಯವರೆಗೆ ಕಾಂಕ್ರೀಟಿಕರಣ ಕಾಮಗಾರಿ ಇರುವ ಕಾರಣ ಜೂ.19ರ ವರೆಗೆ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಮಗಾರಿ ನಡೆಯುವ ವೇಳೆ ಕೋಡಿಕಲ್‌ ಮುಖ್ಯ ರಸ್ತೆಯಲ್ಲಿನ 5ನೇ ಬಿ ಅಡ್ಡ ರಸ್ತೆಯಿಂದ 10ನೇ ಬಿ ಅಡ್ಡ ರಸ್ತೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರ್ಯಾಯವಾಗಿ 5ನೇ ಬಿ ಅಡ್ಡ ರಸ್ತೆ, 4ನೇ ಬಿ ಅಡ್ಡ ರಸ್ತೆ, 1ನೇ ಬಿ ಅಡ್ಡ ರಸ್ತೆ, 8ನೇ ಬಿ ಅಡ್ಡ ರಸ್ತೆ, 9ನೇ ಬಿ ಅಡ್ಡ ರಸ್ತೆ ಮತ್ತು 10ನೇ ಬಿ ಅಡ್ಡ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು. ರೂಟ್‌ ಬಸ್ಸುಗಳು ಉರ್ವ ಸ್ಕೂಲ್‌ ಜಂಕ್ಷನ್‌ನಿಂದ ಮುಂದುವರೆದು ಕೋಡಿಕಲ್‌ ಕ್ರಾಸ್‌ ಮೂಲಕ ಬಾಪೂಜಿ ನಗರ ರಸ್ತೆಯಿಂದಾಗಿ ಕೋಡಿಕಲ್‌ ಕಟ್ಟೆ ಕಡೆಗೆ ಸಂಚರಿಸುವುದು ಹಾಗೂ ಕೋಡಿಕಲ್‌ ಕಟ್ಟೆಯಿಂದ ಸ್ಟೇಟ್‌ ಬ್ಯಾಕ್‌ಗೆ ಸಂಚರಿಸುವ ಬಸ್ಸುಗಳು ಇದೇ ರಸ್ತೆಯ ಮುಖಾಂತರ ಸಂಚರಿಸಲು ಪೊಲೀಸ್‌ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next