ಕುರುಗೋಡು: ಸಮೀಪದ ಕುಡತಿನಿಯ ಬಳಿಯ ಬಳ್ಳಾರಿ ಶಾಖೋತ್ಪನ್ನ (ಬಿಟಿಪಿಎಸ್) ಕೇಂದ್ರದಲ್ಲಿ ಆಕ್ಸಿಜನ್ ಪ್ರೊಡಕ್ಷನ್ ಪ್ಲಾಂಟ್ ನಲ್ಲಿ ಬೆಂಕಿ ದುರಂತ ಸಂಭವಿಸಿ ಮೂವರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ನಾಗಪುರದ ಓಜನ್ ಕಂಪನಿಯ ಇಂಜಿನಿಯರ್ ಗಳಾದ ಪ್ರಶಾಂತ್, ಅಂಕುಶ್, ಚಂದ್ರು ಗಾಯಗೊಂಡಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ಕಳುಹಿಸಲಾಗಿದೆ. ಗಾಯಗೊಂಡ ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಆಕ್ಸಿಜನ್ ಉತ್ಪಾದನೆ ಮಾಡುವ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ಕೆಲಸ ಮಾಡುತಿದ್ದ ಕಾರ್ಮಿಕರ ದೇಹಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹತ್ತಿಕೊಂಡ ಕಾರ್ಮಿಕರು ಅದರಿಂದ ರಕ್ಷಿಸಿಕೊಳ್ಳಲು, ದೇಹ ಸುಡುತ್ತಿರುವ ಸ್ಥಿತಿಯಲ್ಲೇ ಹೊರ ಬಂದಿರುವ ದೃಶ್ಯ ಮನ ಕಲಕುವಂತಿದೆ.
ಇದನ್ನೂ ಓದಿ:ಗೋಪಾಡಿ: ಕೊಡಲಿಯಿಂದ ಕೊಚ್ಚಿ ಮಗನಿಂದಲೇ ತಂದೆಯ ಕೊಲೆ
ಬಿಟಿಪಿಎಸ್ ಅಧಿಕಾರಿಗಳು ಘಟನೆಯ ಲೋಪದ ಬಗ್ಗೆ ಪರಿಶೀಲನೆ ನಡೆಸಿದ್ದು, ಕುಡತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.