Advertisement

Uttarkashi: ಸುರಂಗದ ಭಯಾನಕ ಅನುಭವಗಳನ್ನು ಬಿಚ್ಚಿಟ್ಟ ಕಾರ್ಮಿಕರು

01:10 AM Nov 30, 2023 | Team Udayavani |

ಉತ್ತರಕಾಶಿ/ಹೊಸದಿಲ್ಲಿ: “ಬದುಕಿ ಬರುತ್ತೇವೆಯೋ ಇಲ್ಲವೋ ಎಂಬ ಅನುಮಾನವಿತ್ತು. ಹತ್ತು ದಿನಗಳ ಕಾಲ ಮಂಡಕ್ಕಿ ತಿಂದು, ಸುರಂಗದ ಬಂಡೆಗಳ ನಡುವೆ ಜಿನುಗುತ್ತಿದ್ದ ನೀರು ಕುಡಿದು ಬದುಕಿದೆವು’… ಇದು ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಹದಿನೇಳು ದಿನಗಳ ಕಾಲ ಸಿಕ್ಕಿಬಿದ್ದಿದ್ದ ಕಾರ್ಮಿಕ ಅನಿಲ್‌ ಬೇಡಿಯ ಅವರ ಭಯಾನಕ ಅನುಭವ ಕಥನ.

Advertisement

ಝಾರ್ಖಂಡ್‌ನ‌ ಅನಿಲ್‌ ಬೇಡಿಯ ಅವರು ಸುರಂಗದ ಅವಶೇಷಗಳು ಕುಸಿದು ಬೀಳುವ ಸ್ಥಳದಿಂದ ಸ್ವಲ್ಪ ಅಂತರದಲ್ಲಿ ಪಾರಾದವರು. “ನಾವೆಲ್ಲರೂ ನೋಡು ತ್ತಿದ್ದಂತೆಯೇ ಮೇಲಿನಿಂದ ಭಾರೀ ಸದ್ದಿನೊಂದಿಗೆ ಅವ ಶೇಷಗಳು ಕುಸಿದು ಬಿದ್ದವು. ಒಂದು ಕ್ಷಣ ಏನು ಮಾಡ ಬೇಕು ಎಂದು ಗೊತ್ತಾಗಲಿಲ್ಲ. ಬದುಕುವ ಆಸೆಯೇ ಕಮರಿ ಹೋಗಿತ್ತು. ಹತ್ತು ದಿನಗಳ ಕಾಲ ಮಂಡಕ್ಕಿ ತಿಂದು, ಸುರಂಗದ ಬಂಡೆಗಳ‌ ನಡುವೆ ನೀರನ್ನೇ ನೆಕ್ಕಿ ಕುಡಿದು ಬದುಕಿದೆವು’ ಎಂದಿದ್ದಾರೆ.

ನ. 12ರ ಘಟನೆ ನಡೆದು 70 ಗಂಟೆಗಳ ಬಳಿಕ ಅಧಿಕಾರಿಗಳು ನಮ್ಮ ಜತೆಗೆ ಸಂಪರ್ಕ ಸ್ಥಾಪಿಸಿದಾಗ ಬದು ಕುವ ಆಸೆ ಚಿಗುರಿತು. ಸುರಂಗದ ಆಸುಪಾಸಿ ನ ಲ್ಲಿಯೇ ಬಹಿರ್ದೆಸೆಗೆ ಹೋಗಬೇಕಾದ ಸ್ಥಿತಿ ಉಂಟಾಗಿತ್ತು ಎಂದು ಅವರು ವಿವರಿಸಿದರು. ಹತ್ತು ದಿನಗಳು ಕಳೆದ ಬಳಿಕ ಪೈಪ್‌ಗ್ಳ ಮೂಲಕ ಆಹಾರ ಪೂರೈಕೆ ಶುರು ವಾಯಿತು. ಅದು ನಮಗೆ ನೆರವಾಯಿತು ಎಂದರು.

ಇನ್ನೂ 25 ದಿನಗಳಿಗೆ ಸಾಕು: ಪೈಪ್‌ಗ್ಳ ಮೂಲಕ ಅಧಿಕಾರಿಗಳು ಕಳುಹಿಸಿದ ಆಹಾರ ಇನ್ನೂ 25 ದಿನಗಳಿಗೆ ಸಾಕಾಗುವಷ್ಟು ಉಳಿದಿದೆ ಎಂದು ಮತ್ತೂಬ್ಬ ಕಾರ್ಮಿಕ ಅಖೀಲೇಶ್‌ ಸಿಂಗ್‌ ಹೇಳಿದ್ದಾರೆ. ಮುಂದಿನ ಎರಡು ತಿಂಗ ಳ ವರೆಗೆ ಕೆಲಸಕ್ಕೆ ಹೋಗುವ ಇರಾದೆ ಇಲ್ಲ. ಕುಟುಂಬ ಸದಸ್ಯರ ಜತೆಗೆ ಇದ್ದು ಅನಂತರ ಹೋಗುವುದಾಗಿ ಹೇಳಿದ್ದಾರೆ.

ನಾನು ಹಿರಿಯ, ಕೊನೆಗೆ ಬರುತ್ತೇನೆ: ಪಾರಾಗಿರುವ 41 ಕಾರ್ಮಿಕರ ಪೈಕಿ ಗಬ್ಬರ್‌ ಸಿಂಗ್‌ ನೇಗಿ ಎಂಬವರೇ ಹಿರಿಯ. ತಂಡದಲ್ಲಿ ಇತರರಿಗೆ ಧೈರ್ಯ ತುಂಬಿದ್ದೇ ಅವರು. ಇತರರು ಸುರಂಗದಲ್ಲಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ, ಧ್ಯಾನವನ್ನು ಹೇಳಿಕೊಟ್ಟಿದ್ದರು. ಅವರು ನಾನು ಹಿರಿಯ ನಾಗಿರುವುದರಿಂದ, ನಾನೇ ಕೊನೆಗೆ ಬರುತ್ತೇನೆ ಎಂದು ಇತರರನ್ನು ಪ್ರೋತ್ಸಾಹಿಸಿದ್ದರು.

Advertisement

ಸಂಪುಟ ಸಭೆಯಲ್ಲಿ ಭಾವುಕರಾದ ಪ್ರಧಾನಿ: ಸುರಂಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕಾರ್ಮಿಕರನ್ನು ಪಾರು ಮಾಡಿರುವ ಸಾಹಸಗಾಥೆ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾದರು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಮೋದಿ ಕಾರ್ಮಿಕರನ್ನು ಪಾರು ಮಾಡುವ ಕಾರ್ಯಾಚರಣೆಯ ನೇರಪ್ರಸಾರವನ್ನು ವೀಕ್ಷಿಸಿದರು.

ಹೃಷೀಕೇಶ ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆ: ಸುರಂಗದಿಂದ ಪಾರು ಮಾಡಲಾಗಿರುವ 41 ಮಂದಿ ಕಾರ್ಮಿಕರನ್ನು ಹೃಷೀಕೇಶದಲ್ಲಿರುವ ಎಐಐಎಂಎಸ್‌ನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಸಿಲ್ಕ್ಯಾರಾ ದಿಂದ ಐಎಎಫ್ನ ಚಿನೂಕ್‌ ಹೆಲಿಕಾಪ್ಟರ್‌ ಮೂಲಕ ಅವರನ್ನು ಕರೆ ತರ ಲಾಗಿತ್ತು. ಅಲ್ಲಿ ಅವರ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಏಮ್ಸ್‌ ಆಡಳಿತ ಮಂಡಳಿ ಹೇಳಿದೆ.

ಕಾರ್ಮಿಕರು ನಮ್ಮನ್ನು ಎತ್ತಿ ಕುಣಿದಾಡಿದರು
“ಅವಶೇಷಗಳು ಬಿದ್ದು ಕಾರ್ಮಿಕರು ಸಿಕ್ಕಿ ಹಾಕಿಕೊಂಡಿರುವ ಸ್ಥಳಕ್ಕೆ ನಾವು ತಲುಪುತ್ತಿದ್ದಂತೆಯೇ; ಕಾರ್ಮಿಕರು ಸಂತೋಷದಿಂದ ಕುಣಿದಾಡಿದರು, ನಮ್ಮನ್ನು ಎತ್ತಿ ಸಂಭ್ರಮಿಸಿದರು’ ಹೀಗೆಂದು ಹೇಳಿದ್ದು ಫಿರೋಜ್‌ ಖುರೇಷಿ ಮತ್ತು ಮೋನು ಕುಮಾರ್‌. ಅವರಿಬ್ಬರು ಸುರಂಗದ ಒಳಗೆ ಪ್ರವೇಶಿಸಿ ಕಾರ್ಮಿಕರನ್ನು ಭೇಟಿ ಮಾಡಿದ ಮೊದಲಿಗರು. ರ್ಯಾಟ್‌ ಹೋಲ್‌ ಮೈನಿಂಗ್‌ ಪರಿಣಿತರಾಗಿರುವ ಅವರು ಮಂಗಳವಾರದ ಕಾರ್ಯಾಚರಣೆಯ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು. ಹೊಸದಿಲ್ಲಿಯ ನಿವಾಸಿಯಾಗಿರುವ ಖುರೇಷಿ “ಅವಶೇಷಗಳು ಎದುರಿದ್ದರೂ ನಾವು ಮಾತನಾಡಿದ್ದು ಅವರಿಗೆ ಕೇಳಿಸುತ್ತಿತ್ತು. ಅದನ್ನು ತೆಗೆದ ಕೂಡಲೇ ನಾವು ಅವರನ್ನು ನೋಡಿದೆವು. ಅವರು ನಮಗೆ ತಿನ್ನಲು ಬಾದಾಮಿ ಕೊಟ್ಟರು. ನಮ್ಮ ಪರಿಚಯವನ್ನೂ ಮಾಡಿಕೊಂಡರು. ಆ ಹೊತ್ತಿಗೆ ನಮ್ಮ ತಂಡದ ಇತರರು ಅಲ್ಲಿಗೆ ತಲುಪಿದರು’ ಎಂದರು. ಎನ್‌ಡಿಆರ್‌ಎಫ್ ಸಿಬಂದಿ ನಮ್ಮ ಅನಂತರ ಅಲ್ಲಿಗೆ ಬಂದರು ಎಂದು ಉತ್ತರ ಪ್ರದೇಶದ ಮೋನು ಕುಮಾರ್‌ ವಿವರಿಸಿದರು.

ಶೀರ್ಷಿಕೆ ನೋಂದಣಿಗೆ ಪೈಪೋಟಿ!
ಸುರಂಗ ರಕ್ಷಣ ಕಾರ್ಯಾಚರಣೆಯ ಸಾಹಸಗಾಥೆ ಬೆಳ್ಳಿತೆರೆಯಲ್ಲಿ ಬರಬಹುದು ಎಂದು ಎಲ್ಲರಿಗೂ ಅನಿಸಿತ್ತು. ಅದೀಗ ಖಾತ್ರಿಯಾಗಿದೆ. ಅದಕ್ಕಾಗಿ ಮುಂಬಯಿಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಬಾಲಿವುಡ್‌ ನಿರ್ದೇಶಕರು, ಸಿನೆಮಾ ಶೀರ್ಷಿಕೆ ನೋಂದಣಿ ಮಾಡಿಸಲು ಸ್ಪರ್ಧೆಗೆ ಇಳಿದಿದ್ದಾರೆ. “ರೆಸ್ಕೂé-41′, “ಮಿಷನ್‌-41′, “ದ ಗ್ರೇಟ್‌ ರೆಸ್ಕೂé’ ಹೀಗೆ ಹಲವಾರು ಶೀರ್ಷಿಕೆಗಳು ಇಂಡಿಯನ್‌ ಮೋಶನ್‌ ಪಿಕ್ಚರ್‌ ಪ್ರೊಡ್ನೂಸರ್ಸ್‌ ಅಸೋಸಿಯೇಶನ್‌ (ಐಎಂಪಿಪಿಎ), ಪ್ರೊಡ್ನೂಸರ್ಸ್‌ ಗಿಲ್ಡ್‌ ಆಫ್ ಇಂಡಿಯಾ, ಇಂಡಿಯನ್‌ ಫಿಲ್ಮ್ ಆ್ಯಂಡ್‌ ಟೆಲಿವಿಶನ್‌ ಪ್ರೊಡ್ನೂಸರ್ಸ್‌ ಕೌನ್ಸಿಲ್‌ (ಐಎಫ್ಟಿಪಿಸಿ)ಗೆ ಕೋರಿಕೆಗಳು ಸಲ್ಲಿಕೆಯಾಗಿವೆ.

ಮಗ ಹೊರಬರುವ ಗಂಟೆಗಳ ಮುನ್ನ ಅಪ್ಪ ಸಾವು
ಸತತ 16 ದಿನಗಳ ಕಾಲ ಪುತ್ರ ಹೊರ ಬರುತ್ತಾನೆಂದು 70 ವರ್ಷದ ವೃದ್ಧ ತಂದೆ ಝಾರ್ಖಂಡ್‌ನ‌ ಬಸೆತ್‌ ಮುರ್ಮು ಕಾದು ಕುಳಿತಿದ್ದರು. ಪೂರ್ವ ಸಿಂಘ… ಭೂಮ್‌ ಜಿಲ್ಲೆಯಲ್ಲಿದ್ದ ಬಸೆತ್‌, ಇನ್ನೇನು ಪುತ್ರ ಭಕು¤ ಮುರ್ಮು ಹೊರಬರುವ ಕೆಲವೇ ಗಂಟೆಗಳ ಮುನ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ! ಮಗ ಇವತ್ತು ಬರುತ್ತಾನೆ, ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದ ಅವರು ಕಡೆಕಡೆಗೆ ತಾಳ್ಮೆ ಕಳೆದುಕೊಂಡಿ ದ್ದರು. ಬಹುಶಃ ಈ ಒತ್ತಡದಿಂದಲೇ ಅವರು ಹೃದಯಾಘಾತಕ್ಕೊಳಗಾಗಿರುವ ಸಾಧ್ಯತೆಯಿದೆ.

ಬೌಖನಾಗನಿಗೆ ಕೃತಜ್ಞತೆ ಸಲ್ಲಿಸಲು ಮರಳಿ ಹೋಗುತ್ತೇನೆ: ತಜ್ಞ ಅರ್ನಾಲ್ಡ್‌ ಡಿಕ್ಸ್‌
ಸಿಲ್ಕ್ಯಾರಾದಲ್ಲಿ ಕಾರ್ಮಿಕರು ಸಿಕ್ಕಿಕೊಂಡಾಗ, ಆಸ್ಟ್ರೇಲಿಯಾದಿಂದ ಸುರಂಗ ತಜ್ಞ, ಪ್ರೊಫೆಸರ್‌ ಅರ್ನಾಲ್ಡ್‌ ಡಿಕ್ಸ್‌ ಬಂದರು. ಅವರು ನಿರಂತರವಾಗಿ ಮಾರ್ಗದರ್ಶನ ಮಾಡುತ್ತ ಕಾರ್ಮಿಕರು ಮೇಲೆ ಬರಲು ನೆರವಾದರು. ಅರ್ನಾಲ್ಡ್‌ ಡಿಕ್ಸ್‌ಗೆ ಸ್ಫೂರ್ತಿಯಾಗಿದ್ದು ಸುರಂಗದ ಜಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾದ ಬಾಬಾ ಬೌಖನಾಗನ ದೇವಸ್ಥಾನ. ಆ ದೇವಸ್ಥಾನದಲ್ಲಿ ಕಾರ್ಮಿಕರು ಸುರಕ್ಷಿತವಾಗಿ ಮೇಲೆ ಬರಬೇಕೆಂದು ಡಿಕ್ಸ್‌ ಪ್ರಾರ್ಥಿಸಿದ್ದರಂತೆ. ಹಾಗಾಗಿ ನಾನು ಮತ್ತೂಮ್ಮೆ ಆ ದೇವಸ್ಥಾನಕ್ಕೆ ತೆರಳಿ ಧನ್ಯವಾದ ತಿಳಿಸಿ ಬರುತ್ತೇನೆಂದು ಅರ್ನಾಲ್ಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next