Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಧರಣಿ ಸತ್ಯಾಗ್ರಹ

10:05 AM Jul 03, 2019 | Team Udayavani |

ಮುಂಡರಗಿ: ತಾಲೂಕಿನ ಕಟ್ಟಡ ಕಾರ್ಮಿಕರು, ಬಾರ ಬೈಂಡಿಂಗ್‌ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದರು.

Advertisement

ಕಾರ್ಮಿಕ ಇಲಾಖೆ ಕಾರ್ಯಾಲಯಕ್ಕೆ ಕಾರ್ಮಿಕರು ತೆರಳಿ ಸಮಸ್ಯೆಗಳನ್ನು ಹೇಳಿದರೆ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಶೈಕ್ಷಣಿಕ ಧನ ಸಹಾಯ, ವೈದ್ಯಕೀಯ ಧನ ಸಹಾಯ, ಮರಣ ಧನ ಸಹಾಯ, ಮದುವೆ ಸಹಾಯ ಧನ, ಅನಿಲ ಭಾಗ್ಯ ಸೇರಿದಂತೆ ಯಾವುದೇ ಸೌಲಭ್ಯಗಳು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.

ತಹಶೀಲ್ದಾರ್‌ ಡಾ| ವೆಂಕಟೇಶ ನಾಯಕರಿಗೆ ಮನವಿ ಸಲ್ಲಿಸಲಾಯಿತು.

ಗ್ಯಾನಪ್ಪ ಶೀರಿ, ಮುದಿಯಪ್ಪ ಕುಂಬಾರ, ಬಾಷು ನಾಯ್ಕರ, ನಾಗರಾಜ ವಡ್ಡರ್‌, ರಾಜಾಭಕ್ಷಿ ಬೆಟಗೇರಿ, ಸುಭಾಸ ಕುಂಬಾರ, ನಾಗರಾಜ ಕೋರ್ಲಹಳ್ಳಿ, ಅಡಿವೆಪ್ಪ ಛಲವಾದಿ, ರಾಮಣ್ಣ ಬಂಡಿವಡ್ಡರ್‌, ಸುರೇಶ ಕರಮುಡಿ, ಮದಲಗಟ್ಟಿ ಕಲ್ಲಕುಟಿರ್‌, ರಾಮಣ್ಣ ಕಲ್ಲಜುಟಿಗರ, ವೆಂಕಟೇಶ ಕರಡಿಕೊಳ್ಳ ಫೀರೋಜ್‌ಖಾನ್‌ ಘೋರಿ, ಸಲೀಂ ಅಹ್ಮದ್‌ ತಳಗಡೆ, ಖಾಜಾಸಾಬ್‌ ಶಿರಹಟ್ಟಿ, ನೌಷಾದಸಾಬ್‌ ಶಿರಹಟ್ಟಿ, ಕಾಶಿಮಸಾಬ್‌ ಹಮ್ಮಸಾಗರ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next