Advertisement

ಪಟಾಕಿ ಕಾರ್ಖಾನೆ ಕಾರ್ಮಿಕರಿಂದ ಉಪವಾಸ ಸತ್ಯಾಗ್ರಹ

04:06 PM Jan 10, 2018 | Team Udayavani |

ಶಿವಕಾಶಿ, ತಮಿಳು ನಾಡು : ಪಟಾಕಿ ಮತ್ತಿತರ ಸುಡುಮದ್ದುಗಳಿಗೆ ಪರಿಸರ ಸಂರಕ್ಷಣಾ ಕಾಯಿದೆಯಿಂದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಕಳೆದ ಡಿ.26ರಿಂದ ಅನಿರ್ದಿಷ್ಟಾವಧಿ ಬಂದ್‌ ಮುಷ್ಕರ ನಡೆಸುತ್ತಿರುವ ಇಲ್ಲಿನ 860 ಸುಡುಮದ್ದು ತಯಾರಿ ಘಟಕಗಳ ಸುಮಾರು 4,000 ಕಾರ್ಮಿಕರು ಇಂದು ಬುಧವಾರದಿಂದ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. 

Advertisement

ಪಟಾಕಿ ಮತ್ತಿತರ ಸುಡುಮದ್ದುಗಳನ್ನು ಸುಡುವುದು, ಮಾರುವುದು ಮತ್ತು ಹೊಂದುವುದರ ಮೇಲಿನ ರಾಷ್ಟ್ರ ವ್ಯಾಪಿ ನಿಷೇಧವನ್ನು ತೆರವುಗೊಳಿಸಬೇಕೆಂಬ ತಮ್ಮ ಮನವಿಯನ್ನು ಸುಪ್ರೀಂ ಕೋರ್ಟ್‌ ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದು ಕೂಡ ನಿರಶನ ನಿರತ ಕಾರ್ಮಿಕರ ಆಗ್ರಹವಾಗಿದೆ. 

ಸುಡುಮದ್ದು ಮೇಲಿನ ನಿಷೇಧದಿಂದಾಗಿ ದೇಶಾದ್ಯಂತದ ಯಾವುದೇ ಪಟಾಕಿ ಮಾರಾಟಗಾರರು, ವರ್ತಕರು ಮುಂಗಡ ಪಾವತಿಸುತ್ತಿಲ್ಲ; ಈ ಮುಂಗಡವೇ ಪಟಾಕಿ ಕಾರ್ಖಾನೆಗಳಿಗೆ ಕಾರ್ಯ ಬಂಡವಾಳವಾಗಿದೆ ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next