Advertisement

ಕಾರ್ಮಿಕರ ಆರೋಗ್ಯ ರಕ್ಷಣೆ ಎಲ್ಲರ ಹೊಣೆ

11:23 AM Feb 27, 2022 | Team Udayavani |

ಬೀದರ: ದೇಶ ನಿರ್ಮಾಣದಲ್ಲಿ ಮಹತ್ತರ ಪಾತ್ರವಿರುವ ಕಟ್ಟಡ ಹಾಗೂ ಇತರೆ ಕಾರ್ಮಿಕರ ಆರೋಗ್ಯದ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಹೇಳಿದರು.

Advertisement

ನಗರದ ಪ್ರಯಾಣಿ ಆಸ್ಪತ್ರೆಯಲ್ಲಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣೆ, ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಗಲಿರಳು ಶ್ರಮಿಸುವ ಕಾರ್ಮಿಕರು ತಮ್ಮ ಆರೋಗ್ಯ ಕಡೆ ಗಮನ ಹರಿಸುವುದಿಲ್ಲ. ಅದನ್ನು ಮನಗಂಡ ಸರ್ಕಾರ ವಾಸ ಮಾಡುವ ಮನೆಗೆ ಮತ್ತು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ತರಬೇತಿ ನೀಡುವ ಮುಖಾಂತರ ಜೀವ ರಕ್ಷಣೆ ಮಾಡುವಂತ ಮಹತ್ತರವಾದ ಯೊಜನೆಯು ಜಾರಿಗೆ ತಂದಿದೆ ಎಂದರು.

ಕೇಂದ್ರ ಸರ್ಕಾರ ಸಹ ಬಡವರ ಮತ್ತು ಕೂಲಿ ಕಾರ್ಮಿಕರ ಆರೋಗ್ಯವನ್ನು ಕಾಪಾಡಲು ಆಯುಷ್ಮಾನ್‌ ಭಾರತ್‌ ಯೊಜನೆ ಜಾರಿ ತರುವ ಮುಖಾಂತರ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮಾ ಸೌಲಭ್ಯ ಒದಗಿಸಿದ್ದು, ಈ ಕುರಿತು ಯೋಜನೆ ಅನುಷ್ಠಾನಗೊಳಿಸುತ್ತಿರುವ ಆಸ್ಪತ್ರೆಯ ತಂಡದವರು ಯಾರು ಅರ್ಹರಿಗೆ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಮಾಡಿಸಿ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

ಎಂಎಲ್‌ಸಿ ಅರವಿಂದಕುಮಾರ ಅರಳಿ ಮಾತನಾಡಿ, ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ತರಬೇತಿ ಕರಪತ್ರ ಬಿಡಗಡೆ ಮಾಡಿ ಮಾತನಾಡಿ, ಬಡವರು, ಕಾರ್ಮಿಕರ ಏಳ್ಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಮಾಹಿತಿ ಕೊರತೆಯಿಂದ ಅರ್ಹರಿಗೆ ಲಾಭ ಸಿಗುವುದಿಲ್ಲ. ಅಂಥವರಿಗೆ ಸೌಲಭ್ಯಗಳ ಮನವರಿಕೆ ಮಾಡುವ ಕೆಲಸ ಆಗಬೇಕೆಂದರು.

ಕಾರ್ಮಿಕ ಇಲಾಖೆ ಉಪ ವಿಭಾಗ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾತನಾಡಿ, ಆರೋಗ್ಯ ಯೊಜನೆಯಡಿ ಸೇರ್ಪಡೆಯಾದ ಆಸ್ಪತ್ರೆಯ ತಂಡದಿಂದ ಕಾರ್ಮಿಕರ ವಸತಿ ಹಾಗೂ ಅವರು ಕೆಲಸ ಮಾಡುವ ಸ್ಥಳಕ್ಕೆ ಆಂಬ್ಯುಲೆನ್ಸ್‌ನಲ್ಲಿ ತೆರಳಿ ಆರೋಗ್ಯ ತಪಾಸಣೆ ಜತೆಗೆ ರೋಗಗಳ ಮುನ್ನೆಚ್ಚರಿಕೆ ಕ್ರಮ ಕುರಿತು ತಿಳಿವಳಿಕೆ ನೀಡಲಾಗುತ್ತದೆ. ಹಗಲಿರುಳು ದುಡಿಯುವ ಕಾರ್ಮಿಕರು ಹೆಚ್ಚಿನ ಕಾಯಿಲೆ ಕಂಡುಬಂದಾಗ ಮಾತ್ರ ಚಿಕಿತ್ಸೆಗೆ ಮುಂದಾಗುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.

Advertisement

ಆಸ್ಪತ್ರೆ ಅಧ್ಯಕ್ಷ ಡಾ| ಅಮರ ಎರೋಳಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಎರಡು ಲಕ್ಷ ಜನರು ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿದ್ದು, ಮೊದಲನೆ ಹಂತದಲ್ಲಿ 28,500 ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ತರಬೇತಿ ನೀಡಲು ನಿಗದಿಪಡಿಸಿರುವ 90 ದಿವಸದೊಳಗೆ ತಲುಪಲು ಶ್ರಮ ವಹಿಸಲಾಗುವುದು. ನಂತರ ಇನ್ನುಳಿದ ಕಾರ್ಮಿಕರಿಗೆ ತಪಾಸಣೆ ನಡೆಸಲಾಗುವುದು ಎಂದರು.

ಶಾಸಕ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕ ಇಲಾಖೆ ಅಧಿಕಾರಿ ಪ್ರಸನ್ನ ಕುಮಾರ, ವೈದ್ಯರಾದ ವಿನೋದ ಸಾವಳಗಿ, ಡಾ| ವಿನೋದ ಕೊಟೆ, ಡಾ| ವಿಜಯಕುಮಾರ ಕೋಟೆ, ಡಾ| ಮಹೇಶ ಪಾಟೀಲ, ಡಾ| ಮುಡಬಿ, ಡಾ| ಜ್ಯೋತಿ ಖೇಣೆ, ರವೀಂದ್ರ ಎರೊಳಕರ್‌, ಅವಿನಾಶ ಎರೋಳಕರ್‌, ಬಾಲಾಜಿ ಇದ್ದರು. ಅನುಪಮ ಏರೋಳಕರ ಸ್ವಾಗತಿಸಿದರು. ವಿಜಯಲಕ್ಷ್ಮೀ ಗಾದಗಿ ನಿರೂಪಿಸಿದರು. ಅನಿಲ ಕುಲಕರ್ಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next